Don't Miss!
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ಚಾರ್ಮಿಗಾಗಿ ಪತ್ನಿಗೆ ವಿಚ್ಛೇಧನ ನೀಡುತ್ತಾರೆಯೇ ಪುರಿ ಜಗನ್ನಾಥ್? ಮಗ ಆಕಾಶ್ ಹೇಳಿದ್ದೇನು?
ಪುರಿ ಜಗನ್ನಾಥ್ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಸೇರಿದಂತೆ ತೆಲುಗು ಹಿಂದಿ ಸಿನಿಮಾಗಳನ್ನು ನಿರ್ದೇಶಿಸಿರುವ ಪುರಿ ಜಗನ್ನಾಥ್ ಹಲವು ಬ್ಲಾಕ್ ಬಸ್ಟರ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ಯಶಸ್ವಿ ನಿರ್ದೇಶಕರಾಗಿದ್ದರೂ ಸಹ ಪುರಿ ಜಗನ್ನಾಥ್ ವೃತ್ತಿಯಲ್ಲಿ ಏಳು-ಬೀಳು ಎರಡೂ ಇವೆ. ಹಾಗೆಯೇ ಇತ್ತೀಚೆಗೆ ಅವರ ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಏಳು-ಬೀಳುಗಳು ಕಾಣುತ್ತಿವೆ.
ಇತ್ತೀಚಿನ ಕೆಲ ವರ್ಷಗಳಿಂದ ಪುರಿ ಜಗನ್ನಾಥ್, ನಟಿ ಚಾರ್ಮಿ ಜೊತೆ ಬಹುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಸೇರಿ ನಿರ್ಮಾಣ ಸಂಸ್ಥೆ ಆರಂಭಿಸಿ, ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಇಬ್ಬರೂ ಲಿವಿನ್ ರಿಲೇಷನ್‌ನಲ್ಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಜೊತೆಗೆ ಪುರಿ ಜಗನ್ನಾಥ್ ತಮ್ಮ ಪತ್ನಿ ಲಾವಣ್ಯಗೆ ವಿಚ್ಛೇಧನ ನೀಡುತ್ತಾರೆ ಎಂದೂ ಸಹ ಹೇಳಲಾಗುತ್ತಿದೆ.
ಪುರಿ ಜಗನ್ನಾಥ್ ಪುತ್ರ ಆಕಾಶ್ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಅವರ ಮೂರನೇ ಸಿನಿಮಾ 'ಚೋರ್ ಬಜಾರ್' ಇಂದು ಬಿಡುಗಡೆ ಆಗಿದೆ. ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿರುವ ಆಕಾಶ್, ಅಪ್ಪ-ಅಮ್ಮನ ವಿಚ್ಛೇಧನದ ಬಗ್ಗೆ ಮಾತನಾಡಿದ್ದಾರೆ.

''ಅಪ್ಪನ ಬಳಿ 250 ರು ಇದ್ದಾಗ ಅಮ್ಮ ಎಲ್ಲವನ್ನೂ ಬಿಟ್ಟು ಬಂದರು''
''ಅಪ್ಪ, ಅಮ್ಮನಿಗೆ ವಿಚ್ಛೇಧನ ನೀಡುತ್ತಿಲ್ಲ. ವಿಚ್ಛೇಧನ ನೀಡಲು ಸಾಧ್ಯವೂ ಇಲ್ಲ. ಅಪ್ಪನ ಬಳಿ ಕೇವಲ 250 ರುಪಾಯಿ ಇದ್ದಾಗ ಅಮ್ಮ ಅವರನನ್ನು ನಂಬಿ ಎಲ್ಲವನ್ನೂ ಬಿಟ್ಟು ಬಂದಿದ್ದಳು. ಅಂಥಹಾ ವ್ಯಕ್ತಿಗೆ ವಿಚ್ಛೇಧನ ನೀಡುವುದು ಸೂಕ್ತವೂ ಅಲ್ಲ'' ಎಂದು ಪರೋಕ್ಷವಾಗಿ ನಟಿ ಚಾರ್ಮಿಗೆ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ತಮ್ಮ ತಂದೆಗೆ ಸಹ.

ಅಮ್ಮ ಸಂತೋಶವಾಗಿದ್ದಾಳೆ: ಆಕಾಶ್
ಅಮ್ಮ ಲಾವಣ್ಯರನ್ನು ಬಹುವಾಗಿ ಹೊಗಳಿರುವ ಆಕಾಶ್, ''ಅಪ್ಪನ ಯಶಸ್ಸಿನಲ್ಲಿ ಅಮ್ಮನ ಪಾತ್ರ ಬಹಳ ದೊಡ್ಡದು. ಅಪ್ಪನ ಬಹುದೊಡ್ಡ ಸಪೋರ್ಟ್ ಸಿಸ್ಟಮ್ ನಮ್ಮ ತಾಯಿ. ಜನ ಸುಮ್ಮನೆ ಈ ವಿಚ್ಛೇಧನದ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಅಸಲಿಗೆ ನನ್ನ ತಾಯಿ ಆರಾಮವಾಗಿದ್ದಾರೆ. ಸಂತೋಶವಾಗಿದ್ದಾರೆ. ಆಕೆಗೆ ಯಾವುದೇ ಬೇಸರವಿಲ್ಲ'' ಎಂದು ಹೇಳಿದ್ದಾರೆ.

ಆಪ್ತವಾಗಿದ್ದಾರೆ ಪುರಿ-ಚಾರ್ಮಿ
ಚಾರ್ಮಿ ಹಾಗೂ ಪುರಿ ಜಗನ್ನಾಥ್ 2015 ರಿಂದಲೂ ಆಪ್ತವಾಗಿದ್ದಾರೆ. ಇಬ್ಬರೂ ಒಟ್ಟೊಟ್ಟಿಗೆ ಸಿನಿಮಾ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2015ರ ಬಳಿಕ ಪುರಿ ಜಗನ್ನಾಥ್ ನಿರ್ದೇಶಿಸಿರುವ ಎಲ್ಲ ಸಿನಿಮಾಗಳಿಗೆ ಚಾರ್ಮಿ ಬಂಡವಾಳ ಹೂಡಿದ್ದಾರೆ. ಕೆಲವು ಹಿಟ್ ಕೆಲವು ಫ್ಲಾಪ್‌ಗಳನ್ನು ಅನುಭವಿಸಿದ್ದಾರೆ. ಪುರಿ ಜಗನ್ನಾಥ್ ಪುತ್ರ ಆಕಾಶ್‌ರ ಎರಡು ಸಿನಿಮಾಗಳಿಗೆ ಚಾರ್ಮಿ ಬಂಡವಾಳ ಹೂಡಿರುವುದು ವಿಶೇಷ.

ಸಿನಿಮಾ ನಟನಾಗಿ ಸ್ಟ್ರಗಲ್ ಮಾಡುತ್ತಿರುವ ಆಕಾಶ್
ಪುರಿ ಜಗನ್ನಾಥ್‌ಗೆ ಇಬ್ಬರು ಮಕ್ಕಳು. ಆಕಾಶ್ ಮತ್ತು ಪವಿತ್ರ. ಆಕಾಶ್ ಈವರೆಗೆ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮೆಹಬೂಬ' ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಫ್ಲಾಪ್ ಆಯಿತು. ನಂತರ ಚಾರ್ಮಿ ನಿರ್ಮಿಸಿದ್ದ 'ರೊಮ್ಯಾಂಟಿಕ್' ಸಿನಿಮಾದಲ್ಲಿ ನಟಿಸಿದರೂ ಅದೂ ಫ್ಲಾಪ್ ಆಯಿತು. ಪ್ರಸ್ತುತ 'ಚೋರ್ ಬಜಾರ್' ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಜೂನ್ 24 ರಂದು ತೆರೆಗೆ ಬಂದಿದೆ.