For Quick Alerts
  ALLOW NOTIFICATIONS  
  For Daily Alerts

  ಡಿಂಪಲ್ ಕ್ವೀನ್ ರಚಿತಾ ರಾಮ್ ಲಕ್ಕಿ.! ಯಾಕ್ ಗೊತ್ತಾ.?

  |
  ''ನನಗೆ ಗೊತ್ತು, ನಾನು ಲಕ್ಕಿ' ಅಂತಾ ರಚಿತಾ ಹೇಳಿದ್ಯಾಕೆ? | RACHITHA RAM | SANDALWOOD | FILMIBEAT KANNADA

  ಗುಳಿ ಕೆನ್ನೆ ಚೆಲುವೆ.. ಬುಲ್ ಬುಲ್ ಬೆಡಗಿ ರಚಿತಾ ರಾಮ್ ಲಕ್ಕಿ.!
  ಹೌದು.. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಂತಹ ಕನ್ನಡದ ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡಿರುವ ರಚಿತಾ ರಾಮ್ ಅದೃಷ್ಟವಂತೆ ಬಿಡಿ ಅಂತ ನೀವೂ ತಲೆ ತೂಗಬಹುದು.!

  ಆದ್ರೆ, ವಿಷ್ಯ ಅದಲ್ಲ. ರಚಿತಾ ರಾಮ್ ಲಕ್ಕಿ ಅಂತ ನಾವ್ ಹೇಳ್ತಿಲ್ಲ. ''ನನಗೆ ಗೊತ್ತು, ನಾನು ಲಕ್ಕಿ'' ಅಂತ ಸ್ವತಃ ರಚಿತಾ ರಾಮ್ ಟ್ವೀಟ್ ಮಾಡಿದ್ದಾರೆ. ಅಂತಹ ವಿಶೇಷ ಏನು ಅಂದ್ರೆ.. ತೆಲುಗು ಸಿನಿ ಅಂಗಳದ ಪ್ರಖ್ಯಾತ ನಟ ರಾಜೇಂದ್ರ ಪ್ರಸಾದ್ ರನ್ನ ರಚಿತಾ ರಾಮ್ ಭೇಟಿ ಮಾಡಿದ್ದಾರೆ.

  ನಟಿ ರಚಿತಾ ರಾಮ್ ಇದೀಗ ಟಾಲಿವುಡ್ ಗೆ ಪದಾರ್ಪಣೆ ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ. ತೆಲುಗಿನ 'ಸೂಪರ್ ಮಚ್ಚಿ' ಚಿತ್ರದಲ್ಲಿ ನಟ ಕಲ್ಯಾಣ್ ದೇವ್ ಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ.

  'ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು...' ಡಿಂಪಲ್ ಕ್ವೀನ್ ರಚಿತಾ ರಾಮ್ 'ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು...' ಡಿಂಪಲ್ ಕ್ವೀನ್ ರಚಿತಾ ರಾಮ್

  'ಸೂಪರ್ ಮಚ್ಚಿ' ಚಿತ್ರದ ಶೂಟಿಂಗ್ ಸದ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ಚಿತ್ರದ ಸೆಟ್ ನಲ್ಲಿ ರಾಜೇಂದ್ರ ಪ್ರಸಾದ್ ಮತ್ತು ರಚಿತಾ ರಾಮ್ ಮೀಟ್ ಆಗಿದ್ದಾರೆ. 'ಸೂಪರ್ ಮಚ್ಚಿ' ಚಿತ್ರದಲ್ಲಿ ರಾಜೇಂದ್ರ ಪ್ರಸಾದ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

  ಇಲ್ಲಿಯವರೆಗೂ 240ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಾಜೇಂದ್ರ ಪ್ರಸಾದ್, ಟಾಲಿವುಡ್ ನಲ್ಲಿ 'ಕಿಂಗ್ ಆಫ್ ಕಾಮಿಡಿ' ಅಂತಲೇ ಫೇಮಸ್. ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರುವ ರಾಜೇಂದ್ರ ಪ್ರಸಾದ್ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಕೂಡ ರಾಜೇಂದ್ರ ಪ್ರಸಾದ್ ಅಭಿಮಾನಿಯಾಗಿದ್ದರು ಅನ್ನೋದು ನಿಮಗೆ ಗೊತ್ತಿರಲಿ.

  ತೆಲುಗು ನಟ ಕಲ್ಯಾಣ್ ದೇವ್ ಜೊತೆ 'ಸೂಪರ್ ಮಚ್ಚಿ' ರಚಿತಾ ರಾಮ್ ಹೋಳಿತೆಲುಗು ನಟ ಕಲ್ಯಾಣ್ ದೇವ್ ಜೊತೆ 'ಸೂಪರ್ ಮಚ್ಚಿ' ರಚಿತಾ ರಾಮ್ ಹೋಳಿ

  ಇಂತಿಪ್ಪ ರಾಜೇಂದ್ರ ಪ್ರಸಾದ್ ಜೊತೆಗೆ ತೆರೆಹಂಚಿಕೊಳ್ಳುತ್ತಿರುವುದು ಅದೃಷ್ಟ ಅಂತ ರಚಿತಾ ರಾಮ್ ಭಾವಿಸಿದ್ದಾರೆ. ಅದೇ ಖುಷಿಯಲ್ಲಿ ''ನನಗೆ ಗೊತ್ತು ನಾನು ಲಕ್ಕಿ'' ಅಂತ ಟ್ವೀಟಿಸಿದ್ದಾರೆ.

  ಅಂದ್ಹಾಗೆ, 'ಸೂಪರ್ ಮಚ್ಚಿ' ತೆಲುಗು ಮತ್ತು ಕನ್ನಡದಲ್ಲಿ ತಯಾರಾಗುತ್ತಿದೆ. ಕನ್ನಡದಲ್ಲಿ 'ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ' ಎಂಬ ಹೆಸರಿನಲ್ಲಿ ಚಿತ್ರ ತೆರೆ ಕಾಣಲಿದೆ.

  English summary
  Rachita Ram tweets I know Im Lucky for meeting Telugu Actor Rajendra Prasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X