For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ RRR ಮೆಗಾ ಮೂವಿ: ಎಷ್ಟು ಥಿಯೇಟರ್‌ಗಳಲ್ಲಿ ರಿಲೀಸ್

  |

  ಭಾರತದಲ್ಲಿ ಇದೊಂದು ಸಿನಿಮಾ ನೋಡುವುದಕ್ಕೆ ಕಾದೂ ಕಾದು ಸುಸ್ತಾದವರೇ ಹೆಚ್ಚು. ಈವಾಗ ರಿಲೀಸ್ ಆಗುತ್ತೆ. ಅವಾಗ ರಿಲೀಸ್ ಆಗುತ್ತೆ ಅಂತ ಕಾದು ಕೂತಿದ್ದವರಿಗೆ ರಾಜಮೌಳಿ ನಿರಾಸೆ ಮಾಡಿದ್ದೇ ಹೆಚ್ಚು. ಆದರೆ, ಈ ಬಾರಿ ಹಾಗಾಗುವುದಿಲ್ಲ. ಕೊಟ್ಟ ಡೇಟ್‌ಗೆ ಸಿನಿಮಾ ರಿಲೀಸ್ ಆಗುತ್ತೆ. ಈ ಬಾರಿ ಕೊಟ್ಟ ಮಾತಿಗೆ ತಪ್ಪುವ ಪ್ರಶ್ನೆಯೇ ಇಲ್ಲ. ಯಾಕಂದ್ರೆ, ಜಕ್ಕಣ್ಣ ಈಗಾಗಲೇ ಸಿನಿಮಾ ಪ್ರಮೋಷನ್ ಶುರುಮಾಡಿದ್ದಾಗಿದೆ. ನಾಟು ನಾಟು ಅನ್ನುತ್ತಲೇ ಪ್ರಚಾರಕ್ಕೆ ಕಿಚ್ಚು ಹಚ್ಚಿದ್ದಾಗಿದೆ.

  ಬಾಹುಬಲಿ ರಾಜಮೌಳಿ ನಿರ್ದೇಶಿಸುತ್ತಿರುವ ಬಹುಕೋಟಿ ಸಿನಿಮಾವಿದು. ಐದು ಭಾಷೆಗಳಲ್ಲಿ RRR ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ ರಾಜಮೌಳಿ ಸಿನಿಮಾ ರಿಲೀಸ್ ಆಗುತ್ತಿದೆ. ರಾಜಮೌಳಿ ಅದ್ಯಾವ ಮಟ್ಟಿಗೆ ತಯಾರಿ ನಡೆಸಿದ್ದಾರೆ ಅನ್ನುವುದಕ್ಕೊಂದು ಸ್ಯಾಂಪಲ್ ಇಲ್ಲಿದೆ ನೋಡಿ.

   ವಿಶ್ವದಾದ್ಯಂತ 10 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್

  ವಿಶ್ವದಾದ್ಯಂತ 10 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್

  ರಾಜಮೌಳಿ RRR ರಿಲೀಸ್‌ಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿ ಈ ಸಿನಿಮಾ ಸದ್ದು ಮಾಡುವುದಕ್ಕೆ ಸುಮಾರು 10 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. RRR ಫಾರಿನ್ ಭಾಷೆಗಳಲ್ಲೂ ಏಕಕಾಲಕ್ಕೆ ರಿಲೀಸ್ ಆಗುತ್ತೆ ಅನ್ನುವ ಮಾತು ಟಾಲಿವುಡ್‌ನಲ್ಲಿ ಓಡಾಡುತ್ತಿದೆ. ಹೀಗಾಗಿ ಮೆಗಾ ಮೂವಿಯನ್ನು ಮೆಗಾ ಲೆವೆಲ್‌ನಲ್ಲಿ ರಿಲೀಸ್ ಮಾಡುವುದಕ್ಕೆ ಸಿದ್ಧತೆಗಳು ಆರಂಭ ಆಗಿವೆ.

   ಅಮೆರಿಕದಲ್ಲೇ 2500 ಥಿಯೇಟರ್‌ಗಳಲ್ಲಿ ರಿಲೀಸ್

  ಅಮೆರಿಕದಲ್ಲೇ 2500 ಥಿಯೇಟರ್‌ಗಳಲ್ಲಿ ರಿಲೀಸ್

  ಕೊರೊನಾ ಹಾವಳಿಯಿಂದ ಶೂಟಿಂಗ್ ತಡವಾಗಿದ್ದರಿಂದ ಬಿಡುಗಡೆನೂ ತಡವಾಗುತ್ತಿದೆ. ಇಲ್ಲದೆ ಹೋಗಿದ್ದರೆ ಕಳೆದ ವರ್ಷವೇ ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿತ್ತು. ಆದರೂ RRR ಸಿನಿಮಾಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಿದೆ. ಅಲ್ಲದೆ ಅಮೆರಿಕದಲ್ಲಿ ತೆಲುಗು ಮಂದಿ ಹೆಚ್ಚಿದ್ದಾರೆ. ಈ ಕಾರಣಕ್ಕೆ ಕೇವಲ ಯುಎಸ್‌ನಲ್ಲಿ 2500 ಸ್ಕ್ರೀನ್‌ಗಳಲ್ಲಿ RRR ರಿಲೀಸ್ ಆಗುತ್ತಿದೆ. ಪ್ಯಾನ್ ಸಿನಿಮಾವೊಂದು ಅಮೆರಿಕದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು ಇದೇ ಮೊದಲು.

   ಭೀಮ್ಲಾ ನಾಯಕ್, ರಾಧೆಶ್ಯಾಮ್ ಚಿತ್ರಗಳ ಗತಿಯೇನು?

  ಭೀಮ್ಲಾ ನಾಯಕ್, ರಾಧೆಶ್ಯಾಮ್ ಚಿತ್ರಗಳ ಗತಿಯೇನು?

  RRR 2022 ಜನವರಿ 7ರಂದು ಸಂಕ್ರಾಂತಿ ಹಬ್ಬಕ್ಕೆ ಒಂದು ವಾರ ಮುನ್ನ 10 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಆದರೆ, ಒಂದು ವಾರದ ಅಂತರದಲ್ಲಿ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಹಾಗೂ ಪವನ್ ಕಲ್ಯಾಣ್ ಭೀಮ್ಲಾ ನಾಯಕ್ ಕೂಡ ರಿಲೀಸ್‌ಗೆ ತುದಿಗಾಲಲ್ಲಿ ನಿಂತಿವೆ. ಕೇವಲ ಭಾರತದಲ್ಲೇ RRR ಕಮ್ಮಿ ಅಂದರೂ 6 ರಿಂದ 7 ಸಾವಿರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಒಂದು ವೇಳೆ RRR ಅಕ್ಕ-ಪಕ್ಕದಲ್ಲೇ ಈ ಎರಡೂ ಸಿನಿಮಾಗಳು ರಿಲೀಸ್ ಆಗಲು ಮುಂದಾದರೆ, ಹೆಚ್ಚು ಚಿತ್ರಮಂದಿರಗಳು ಸಿಗುವುದು ಅನುಮಾನ. ಹೀಗಾಗಿ ಮುಂದಿನ ದಿನಗಳಲ್ಲಿ ಥಿಯೇಟರ್‌ಗಾಗಿ ಯುದ್ಧ ನಡೆದರೂ ಅಚ್ಚರಿಯಿಲ್ಲ.

   1920ರ ಕಾಲ್ಪನಿಕ ಕಥೆಗೆ ಮಲ್ಟಿಸ್ಟಾರ್ ಟಚ್

  1920ರ ಕಾಲ್ಪನಿಕ ಕಥೆಗೆ ಮಲ್ಟಿಸ್ಟಾರ್ ಟಚ್

  ತೆಲುಗಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಒಂದೇ ಸಮಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿದಿದ್ದರೆ, ಆ ಕದನ ಹೇಗಿರುತ್ತಿತ್ತು ಅನ್ನುವುದೇ ಸಿನಿಮಾದ ಕಥಾವಸ್ತು. ಜೂ.ಎನ್‌ಟಿಆರ್ ಕೊಮರಂ ಭೀಮ್ ಅವತಾರದಲ್ಲಿ ಹಾಗೂ ರಾಮ್‌ಚರಣ್ ಅಲ್ಲುರಿ ಸೀತರಾಮರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಈ ಹೈ ವೋಲ್ಟೇಜ್ ಬ್ಯಾಟಲ್ ಪ್ಯಾನ್ ಸಿನಿಮಾ ಪ್ರಿಯರಿಗೆ ಸಿಕ್ಕಾಪಟ್ಟೆ ಕಿಕ್ ಕೊಡಲಿದೆ. ಎರಡು ಪವರ್ ಹೌಸ್ ಜೊತೆಗೆ ಬಾಲಿವುಡ್‌ ಸ್ಟಾರ್ ನಟ ಅಜಯ್ ದೇವಗನ್ ಹಾಗೂ ಬ್ಯೂಟಿ ಅಲಿಯಾ ಭಟ್ ನಟಿಸಿದ್ದಾರೆ. ಹೀಗಾಗಿ RRR ಇಡೀ ವಿಶ್ವದ ಗಮನ ಸೆಳೆದಿದೆ. ಜಕ್ಕಣ್ಣನ ಮತ್ತೊಂದು ಮೆಗಾ ಸಿನಿಮಾ ವಿಶ್ವದಾದ್ಯಂತ ಏಕಕಾಲಕ್ಕೆ ಬಾಕ್ಸಾಫೀಸ್ ಯುದ್ಧ ಸಮರ ಸಾರಲಿದೆ.

  English summary
  The makers of RRR are in plans to release it on as many as 10,000 screens worldwide. It will be the highest ever for an Indian film to date.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X