For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ದಿನವೇ ರಜನಿಕಾಂತ್ ಸಿನಿಮಾ ದಾಖಲೆ ಮುರಿದ ರಾಜಮೌಳಿ RRR!

  |

  ಇಂದು ಸೂಪರ್ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬ. ದೇಶದ ಸೆಲಬ್ರಿಟಿಗಳು ಮಾತ್ರವಲ್ಲದೇ ವಿಶ್ವದಾದ್ಯಂತ ತಲೈವಾ ಅಭಿಮಾನಿಗಳು ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಮಾತ್ರ ರಜನಿಗೆ ಇದೇ ದಿನ ಟಕ್ಕರ್ ಕೊಟ್ಟಿದ್ದಾರೆ.

  ರಾಜಮೌಳಿ ನಿರ್ದೇಶನದ RRR ಭಾರತ ಅಲ್ಲದೇ ವಿಶ್ವದ ನಾನಾ ಭಾಗಗಳಲ್ಲಿ ಭಾರೀ ಸೌಂಡ್ ಮಾಡ್ತಿರೋದು ಗೊತ್ತೇ ಇದೆ. ಚಿತ್ರತಂಡ ಕೂಡಾ ಸಿನಿಮಾ ಬಿಡುಗಡೆಯಾಗಿ ಇಷ್ಟೊಂದು ತಿಂಗಳು ಕಳೆದರೂ ಪ್ರಚಾರ ಕಾರ್ಯ ಮುಂದುವರೆಸಿರೋದು, ಅದಕ್ಕೆ ಎಲ್ಲೆಡೆ ಸಿಗುತ್ತಿರೋ ಅಭೂತಪೂರ್ವ ಸ್ವಾಗತ ಈ ಚಿತ್ರದ ಯಶಸ್ಸಿಗೆ ಸಾಕ್ಷಿ.

  'RRR 2' ಸೆಟ್ಟೇರೋದು ಕನ್ಫರ್ಮ್ ಎಂದ ರಾಜಮೌಳಿ: ಮಹೇಶ್ ಬಾಬು ಸಿನಿಮಾ ಕಥೆಯೇನು?'RRR 2' ಸೆಟ್ಟೇರೋದು ಕನ್ಫರ್ಮ್ ಎಂದ ರಾಜಮೌಳಿ: ಮಹೇಶ್ ಬಾಬು ಸಿನಿಮಾ ಕಥೆಯೇನು?

  ಆದ್ರೆ ಈಗ ಮಾತ್ರ ರಾಜಮೌಳಿಯ RRR ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 24 ವರ್ಷದ ಹಿಂದೆ ಬರೆದಿದ್ದ ದಾಖಲೆಯನ್ನು ಉಡೀಸ್ ಮಾಡಿಬಿಟ್ಟಿದೆ. ಹಾಗಿದ್ದರೆ, ರಜನಿಕಾಂತ್ ಗೇ ಟಕ್ಕರ್ ಕೊಡುವಂಥಾ ಕೆಲಸ ರಾಜಮೌಳಿ ಏನು ಮಾಡಿದ್ರು? ವಿವರ ಇಲ್ಲಿದೆ.

  ಇದು ಜಪಾನ್ ಕತೆ

  ಇದು ಜಪಾನ್ ಕತೆ

  ಅಂದ್ಹಾಗೆ ಇದು ದೂರದ ಜಪಾನ್‌ನಲ್ಲಿ ನಡೆದಿರೋ ವಿಚಾರ. RRRಅಕ್ಟೋಬರ್ 21ರಂದು ಜಪಾನಿನಲ್ಲಿ ಬಿಡುಗಡೆಯಾಗಿತ್ತು. ಈಗ ಈ ಸಿನಿಮಾ ಜಪಾನಿನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಭಾರತೀಯ ಸಿನಿಮಾ ಆಗಿ ಹೊರಹೊಮ್ಮಿದೆ. ಇಲ್ಲಿವರೆಗೆ ಈ ಸ್ಥಾನ ರಜನಿಕಾಂತ್ ಅಭಿನಯದ "ಮುತ್ತು" ಚಿತ್ರದ್ದಾಗಿತ್ತು. ಬರೋಬ್ಬರಿ ಎರಡು ದಶಕಗಳವರೆಗೆ ಮುತ್ತು ರೆಕಾರ್ಡ್‌ ಅನ್ನು ಯಾರಿಗೂ ಬ್ರೇಕ್ ಮಾಡೋಕೆ ಆಗಿರ್ಲಿಲ್ಲ. ರಾಜಮೌಳಿಯ ಸಿನಿಮಾ ಈಗ ಆ ದಾಖಲೆ ಮುರಿದಿದೆ.

  ಜಪಾನ್‌ನಲ್ಲಿ RRR ಸಿನಿಮಾ ಗಳಿಕೆ ಎಷ್ಟು?

  ಜಪಾನ್‌ನಲ್ಲಿ RRR ಸಿನಿಮಾ ಗಳಿಕೆ ಎಷ್ಟು?

  RRR ಜಪಾನಿನ 44 ನಗರಗಳಲ್ಲಿ 209 ಸ್ಕ್ರೀನ್‌ಗಳು ಮತ್ತು 31 ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಅಲ್ಲಿನ ಒಟ್ಟಾರೆ ಗಳಿಕೆ 400 ಮಿಲಿಯನ್ ಜಪಾನಿ ಯೆನ್ ಅಂದ್ರೆ 24 ಕೋಟಿ ರೂಪಾಯಿಗಳನ್ನು ಮೀರಿದೆ.

  ರಜನಿಕಾಂತ್ ಮುತ್ತು ದಾಖಲೆ ಸಣ್ಣದಲ್ಲ

  ರಜನಿಕಾಂತ್ ಮುತ್ತು ದಾಖಲೆ ಸಣ್ಣದಲ್ಲ

  24 ವರ್ಷಗಳ ಹಿಂದೆ ಜಪಾನಿನಲ್ಲಿ ಬಿಡುಗಡೆಯಾಗಿದ್ದ ರಜನಿಕಾಂತ್ ಅಭಿನಯದ ಮುತ್ತು ಚಿತ್ರ ಇದುವರಗೆ 400 ಮಿಲಿಯನ್ ಜಪಾನಿ ಯೆನ್ ಅಂದ್ರೆ 24 ಕೋಟಿ ರೂಪಾಯಿ ಗಳಿಸಿದೆ. ಎರಡು ದಶಕಗಳ ಈ ದಾಖಲೆಯನ್ನು RRR ಇದೀಗ ಮೀರಿ ಮುನ್ನಡೆದಿದೆ. ಕೆಲವು ವಾರಗಳ ಹಿಂದಷ್ಟೇ ಎಸ್ ಎಸ್ ರಾಜಮೌಳಿ ಜೊತೆ ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮಚರಣ್ ಕೂಡಾ ಜಪಾನಿಗೆ ತೆರಳಿ ಚಿತ್ರದ ಪ್ರಚಾರ ನಡೆಸಿದ್ರು. 1920ರ ಕಾಲಘಟ್ಟದಲ್ಲಿ ಭಾರತದಲ್ಲಿ ಇದ್ದ ಇಬ್ಬರು ಕ್ರಾಂತಿಕಾರಿಗಳ ಕತೆಯೇ RRR ಕಥಾವಸ್ತು. ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಪಾತ್ರದಲ್ಲಿ ರಾಮ್ಚರಣ್ ಮತ್ತು ಜ್ಯೂ ಎನ್‌ಟಿಆರ್ ಪರಕಾಯ ಪ್ರವೇಶ ಮಾಡಿದ್ದಾರೆ. ಇದು ಜಪಾನಿಯರಿಗೂ ಬಹಳ ಇಷ್ಟವಾಗಿದೆ.

  ವಿಶ್ವದಾದ್ಯಂತ RRR ಖದರ್

  ವಿಶ್ವದಾದ್ಯಂತ RRR ಖದರ್

  ವಿಶ್ವದಾದ್ಯಂತ RRR 1100 ಕೋಟಿ ರುಪಾಯಿ ವಹಿವಾಟು ನಡೆಸಿದೆ. ಭಾರತ, ಅಮೆರಿಕ ಸೇರಿದಂತೆ ನಾನಾ ದೇಶಗಳ ಅನೇಕ ಫಿಲ್ಮ್ ಫೆಸ್ಟಿವಲ್‌ಗಳನ್ನೂ ಈ ಚಿತ್ರ ಅಬ್ಬರಿಸುತ್ತಲೇ ಇದೆ. ಅಮೆರಿಕದ ಅನೇಕ ನಗರಗಳಲ್ಲಿ ಈಗಲೂ ಬಿಯಾಂಡ್ ಫೆಸ್ಟ್ ಹೆಸರಿನಲ್ಲಿ ಈ ಸಿನಿಮಾ ಪ್ರದರ್ಶನ ಮುಂದುವರೆದಿದೆ. ಅಕ್ಟೋಬರ್ ತಿಂಗಳಲ್ಲಿ RRR ಚೈನೀಸ್ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಂಡಿತ್ತು. ಅಲ್ಲಿನ ಪ್ರೇಕ್ಷಕರು ಈ ಚಿತ್ರವನ್ನು ನೋಡಿ ಕೊಂಡಾಡಿದ್ದಾರೆ. ವರದಿಗಳ ಪ್ರಕಾರ ಆ ಥಿಯೇಟರ್‌ನ 932 ಟಿಕೆಟ್‌ಗಳು ಕೇವಲ 20 ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದ್ದವಂತೆ. ಅದೊಂದೇ ಶೋನಲ್ಲಿ ಈ ಸಿನಿಮಾ ಬರೋಬ್ಬರಿ 21 ಸಾವಿರ ಡಾಲರ್ ಗಳಿಸಿತ್ತು. ಅಂದರೆ 17 ಕೋಟಿ 32 ಲಕ್ಷ ರೂಪಾಯಿಗಳು! ಇದರಿಂದ ಚಿತ್ರದ ಒಟ್ಟಾರೆ ಗಳಿಕೆ ಒಂದೇ ಸಲಕ್ಕೆ 182 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು.

  English summary
  Rajamouli’s RRR breaks Rajinikanth movie Muthu’s record of two decades in Japan, Know More.
  Monday, December 12, 2022, 14:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X