For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಜತೆ ನಟಿಸಲಿರುವ ರಾಮ್ ಚರಣ್

  |

  ಸೂಪರ್ ಸ್ಟಾರ್ ರಜನಿಕಾಂತ್ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಅವರ ಸಂಭಾವನೆ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡತೊಡಗಿದ್ದವು. ಅಷ್ಟು ಕೋಟಿಗಳಂತೆ, ಇಷ್ಟು ಕೋಟಿಗಳಂತೆ ಎಂದು ಒಂದೇ ಸವನೆ ಸುದ್ದಿಗಳು ಬರುತ್ತಿದ್ದರೂ ನಂಬಲರ್ಹವಾದ ಮೂಲಗಳಿಂದ ಬಂದಿರಲಿಲ್ಲ. ಆದರೆ ಈಗ ಸುದ್ದಿ ದೃಢಪಟ್ಟಿದೆ. ನಿರ್ಮಾಪಕರಿಂದಲೇ ದೃಢೀಕರಿಸಲ್ಪಟ್ಟ ಸುದ್ದಿ ಸ್ಫೋಟವಾಗಿದೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ತೆಲುಗು ಚಿತ್ರರಂಗದ 'ಮಗಧೀರ' ರಾಮ್ ಚರಣ್ ಕೂಡ ಅಭಿನಯಿಸಲಿದ್ದಾರೆ.

  ಇತ್ತೀಚಿಗಷ್ಟೇ ಹೊಸ ಚಿತ್ರವೊಂದಕ್ಕೆ ನಾಯಕರಾಗಿ ಸಹಿ ಮಾಡಲು ರಜನಿಕಾಂತ್ ಅವರಿಗೆ ಬಂದ ಸಂಭಾವನೆಯ ಆಫರ್, ಬರೋಬ್ಬರಿ ರು. 240 ಕೋಟಿ. 30 ದಿನಗಳಿಗೆ ರು 240 ಕೋಟಿ ಎಂದರೆ ದಿನವೊಂದಕ್ಕೆ ರಜನಿ ಪಡೆಯುವ ಸಂಭಾವನೆ ರು. 8 ಕೋಟಿ. ಈ ಆಫರ್ ನೀಡಿರುವವರು ಸನ್ ನೆಟ್ ವರ್ಕ್ ನ ಮಾಜಿ ಸಿಇಓ ಹಂಸರಾಜ್ ಸಕ್ಸೇನಾ. ಈ ನಿರ್ಮಾಪಕರ ಹೆಸರೇನೂ ಚಿತ್ರರಂಗಕ್ಕೆ ಹೊಸದಲ್ಲ. ಇವರು, ಸೂಪರ್ ಹಿಟ್ ದಾಖಲಿಸಿದ್ದ ರಜನಿಯವರ 'ಎಂಧಿರನ್' ಚಿತ್ರದ ನಿರ್ಮಾಪಕರು.

  ಇತ್ತೀಚಿಗೆ ತೆರೆಕಂಡ ದ್ವಾರಕೀಶ್ ನಿರ್ಮಾಣದ ಬಹುಭಾಷಾ ಚಿತ್ರ 'ಚಾರುಲತಾ'ದ ತಮಿಳು ಹಂಚಿಕೆದಾರರೂ ಕೂಡ ಆಗಿದ್ದಾರೆ ಈ ಹಂಸರಾಜ್ ಸಕ್ಸೇನಾ. ಸದ್ಯದಲ್ಲೇ 'ಸ್ಯಾಕ್ಸ್ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಹಂಸರಾಜ್ ಸಕ್ಸೇನಾ ನಿರ್ಮಿಸಲು ಉದ್ದೇಶಿಸಲಾಗಿರುವ ಈ ಹೊಸ ಚಿತ್ರಕ್ಕೆ ರಜನಿಕಾಂತ್ ಅವರನ್ನು ಅಪ್ರೋಚ್ ಮಾಡಿ ಈ ಭಾರಿ ಆಫರ್ ನೀಡಲಾಗಿದೆ. 30 ದಿನಗಳ ಕಾಲ್ ಶೀಟ್ ಗೆ ರಜಿನಯವರಿಗೆ ರು. 240 ಕೋಟಿ ಆಫರ್ ನೀಡಿ ರಜಿನಿಯವರ 'ಗ್ರೀನ್ ಸಿಗ್ನಲ್' ಗೆ ಕಾಯುತ್ತಿದ್ದಾರೆ.

  ಇನ್ನೂ ರಜನಿ 'ಗ್ರೀನ್ ಸಿಗ್ನಲ್' ಕೊಟ್ಟಿಲ್ಲವಾದರೂ ನಿರ್ಮಾಪಕರು ಬಹುಭಾಷೆಯಲ್ಲಿ, ಬಹುತಾರಾಗಣದ ಈ ಚಿತ್ರವನ್ನು ಭಾರಿ ಬಜೆಟ್ ಹಾಕಿ ನಿರ್ಮಿಸಲು ಜೋರಾಗಿ ತಯಾರಿ ನಡೆಸಿದ್ದಾರಂತೆ. ಸದ್ಯದ ಮಾಹಿತಿ ಪ್ರಕಾರ, ಬರಲಿರುವ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿರುವವರು ನಿರ್ದೇಶಕ ಕೆ ವಿ ಆನಂದ್. ರಜನಿ ಜೊತೆ ತೆಲುಗು ಸ್ಟಾರ್ ರಾಮ್ ಚರಣ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಇಡೀ ದಕ್ಷಿಣ ಭಾರತಕ್ಕೆ ಸಂಚಲನ ಉಂಟುಮಾಡಿದೆ. ಒಟ್ಟಿನಲ್ಲೀಗ ರಜನಿ 'ಓಕೆ'ಗಾಗಿ ಕಾಯಲಾಗುತ್ತಿದೆ. (ಏಜೆನ್ಸೀಸ್)

  English summary
  Tamil Super Star Rajinikanth offred Rs. 240 Crore Offer from the producer Hansraj Saxena for his upcoming project. But, Rajinikanth not gave Green Signal for this till now. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X