twitter
    For Quick Alerts
    ALLOW NOTIFICATIONS  
    For Daily Alerts

    ರಾಜಮೌಳಿ ನಿರ್ದೇಶನದ 12 ಚಿತ್ರಗಳಲ್ಲಿ ಒಂದೇ ಒಂದು ಫ್ಲಾಪ್ ಇಲ್ಲ; ಎಲ್ಲಾ ಚಿತ್ರಗಳ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ

    |

    ಬಾಲಿವುಡ್ ಚಿತ್ರಗಳನ್ನು ದಕ್ಷಿಣ ಭಾರತ ಚಿತ್ರರಂಗಗಳ ಚಿತ್ರಗಳು ಮೀರಿಸುವುದು ಅಸಾಧ್ಯ ಎಂಬ ಮಾತಿತ್ತು. ಆ ಮಾತನ್ನು ಹುಸಿಗೊಳಿಸಿ ಬಾಲಿವುಡ್‌ನ್ನು ಹಿಂದಿಕ್ಕಿ ಭಾರತ ನೆಲದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ್ದು ರಾಜಮೌಳಿ ನಿರ್ದೇಶನದ ಸಿನಿಮಾ. ಹೌದು, ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಸಿನಿಮಾ ಭಾರತ ಚಿತ್ರರಂಗದ ಕಲೆಕ್ಷನ್ ದಾಖಲೆಯನ್ನು ಮುರಿದು ಆಲ್ ಇಂಡಿಯಾ ಇಂಡಸ್ಟ್ರಿ ಹಿಟ್ ಆಗಿತ್ತು. ದಕ್ಷಿಣ ಭಾರತ ಚಿತ್ರರಂಗವನ್ನು ಸಾಮಾನ್ಯವಾಗಿ ನೋಡುತ್ತಿದ್ದ ಜನರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತ್ತು.

    ಇಂಥ ಬೃಹತ್ ಹಿಟ್ ಕೊಟ್ಟ ರಾಜಮೌಳಿಗೆ ಇಂದು ( ಅಕ್ಟೋಬರ್ 10 ) 49ನೇ ಹುಟ್ಟುಹಬ್ಬದ ಸಂಭ್ರಮ. 1973ರ ಅಕ್ಟೋಬರ್ 10ರಂದು ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ಸಮೀಪದ ಅಮರೇಶ್ವರ ಕ್ಯಾಂಪ್‌ನಲ್ಲಿ ಜನಿಸಿದ್ದ ರಾಜಮೌಳಿ 2001ರಲ್ಲಿ ಜೂನಿಯರ್ ಎನ್‌ಟಿಆರ್‌ಗೆ ಸ್ಟೂಡೆಂಟ್ ನಂಬರ್ 1 ಎಂಬ ಸಿನಿಮಾವನ್ನು ನಿರ್ದೇಶಿಸುವುದರ ಮೂಲಕ ನಿರ್ದೇಶಕನಾಗಿ ತಮ್ಮ ಕೆಲಸ ಆರಂಭಿಸಿದರು.

    ಅಂದು ಈ ಚಿತ್ರದ ಮೂಲಕ ತೆಲುಗು ಸಿನಿ ರಸಿಕರ ಮನಗೆದ್ದ ರಾಜಮೌಳಿ ತಮ್ಮ ಯಶಸ್ಸಿನ ಓಟವನ್ನು ಎಲ್ಲೂ ನಿಲ್ಲಿಸಲೇ ಇಲ್ಲ. ಕೊನೆಯದಾಗಿ ಬಿಡುಗಡೆಗೊಂಡ ಆರ್‌ಆರ್‌ಆರ್‌ ಚಿತ್ರದವರೆಗೆ ರಾಜಮೌಳಿ ಒಟ್ಟು 12 ಚಿತ್ರಗಳನ್ನು ನಿರ್ದೇಶಿಸಿದ್ದು, ಈ ಎಲ್ಲಾ ಚಿತ್ರಗಳೂ ಸಹ ಹಿಟ್ ಎನಿಸಿಕೊಂಡಿವೆ, ಯಾವುದೇ ಚಿತ್ರ ಕೂಡ ನಿರ್ಮಾಪಕರಿಗೆ ನಷ್ಟ ಉಂಟುಮಾಡಿಲ್ಲ. ಹಾಗಿದ್ದರೆ ರಾಜಮೌಳಿ ನಿರ್ದೇಶನದ ಯಾವ ಚಿತ್ರ ಎಷ್ಟು ಕೋಟಿ ಕಲೆಹಾಕಿದೆ ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ.

    ರಾಜಮೌಳಿ ನಿರ್ದೇಶನದ ಎಲ್ಲಾ ಚಿತ್ರಗಳ ಕಲೆಕ್ಷನ್

    ರಾಜಮೌಳಿ ನಿರ್ದೇಶನದ ಎಲ್ಲಾ ಚಿತ್ರಗಳ ಕಲೆಕ್ಷನ್

    1. ಸ್ಟೂಡೆಂಟ್ ನಂಬರ್ 1 - ಬಜೆಟ್ 3 ಕೋಟಿ, ಕಲೆಕ್ಷನ್ 12 ಕೋಟಿ

    2. ಸಿಂಹಾದ್ರಿ- ಬಜೆಟ್ 8 ಕೋಟಿ, ಕಲೆಕ್ಷನ್ 26 ಕೋಟಿ

    3. ಸೈ - ಬಜೆಟ್ 5 ಕೋಟಿ, ಕಲೆಕ್ಷನ್ 9.5 ಕೋಟಿ

    4. ಛತ್ರಪತಿ - ಬಜೆಟ್ 10 ಕೋಟಿ, ಕಲೆಕ್ಷನ್ 21 ಕೋಟಿ

    5. ವಿಕ್ರಮಾರ್ಕುಡು - ಬಜೆಟ್ 11 ಕೋಟಿ, ಕಲೆಕ್ಷನ್ 19.5 ಕೋಟಿ

    6. ಯಮದೋಂಗ - ಬಜೆಟ್ 18 ಕೋಟಿ, ಕಲೆಕ್ಷನ್ 28.75 ಕೋಟಿ

    7. ಮಗಧೀರ - ಬಜೆಟ್ 44 ಕೋಟಿ, ಕಲೆಕ್ಷನ್ 150 ಕೋಟಿ

    8. ಮರ್ಯಾದಾ ರಾಮನ್ನ - ಬಜೆಟ್ 14 ಕೋಟಿ, ಕಲೆಕ್ಷನ್ 29 ಕೋಟಿ

    9. ಈಗ - ಬಜೆಟ್ 26 ಕೋಟಿ, ಕಲೆಕ್ಷನ್ 42.3 ಕೋಟಿ

    10. ಬಾಹುಬಲಿ ದ ಬಿಗಿಬಿಂಗ್ - ಬಜೆಟ್ 136 ಕೋಟಿ, ಕಲೆಕ್ಷನ್ 600 ಕೋಟಿ

    11. ಬಾಹುಬಲಿ ದ ಕನ್ಕ್ಲೂಷನ್ - ಬಜೆಟ್ 250 ಕೋಟಿ, ಕಲೆಕ್ಷನ್ 1917 ಕೋಟಿ

    12. ಆರ್‌ಆರ್‌ಆರ್‌ - ಬಜೆಟ್ 550 ಕೋಟಿ, ಕಲೆಕ್ಷನ್ 1200 ಕೋಟಿ

    ಅತಿಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ

    ಅತಿಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ

    ಸದ್ಯ ಭಾರತ ಚಿತ್ರರಂಗದಲ್ಲಿ ರಾಜಮೌಳಿ ಅತಿಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಎನಿಸಿಕೊಂಡಿದ್ದಾರೆ. ಬಾಹುಬಲಿವರೆಗೂ ಇಂತಿಷ್ಟು ಹಣವನ್ನು ಸಂಭಾವನೆಯನ್ನಾಗಿ ಪಡೆಯುತ್ತಿದ್ದ ರಾಜಮೌಳಿ ಆರ್ ಆರ್ ಆರ್ ಚಿತ್ರಕ್ಕಾಗಿ 30% ಶೇರ್ ಪಡೆಯುತ್ತಿದ್ದಾರೆ ಎನ್ನಲಾಗಿದೆ.

    ಪದ್ಮಶ್ರೀ ಹಾಗೂ ರಾಷ್ಟ್ರ ಪ್ರಶಸ್ತಿ

    ಪದ್ಮಶ್ರೀ ಹಾಗೂ ರಾಷ್ಟ್ರ ಪ್ರಶಸ್ತಿ

    ಇನ್ನು ರಾಜಮೌಳಿಗೆ 2016ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಹಾಗೂ ರಾಜಮೌಳಿ ನಿರ್ದೇಶನದ 'ಈಗ' ತೆಲುಗಿನ ಅತ್ಯುತ್ತಮ ಚಿತ್ರ, 'ಬಾಹುಬಲಿ' ಅತ್ಯುತ್ತಮ ಚಿತ್ರ ಹಾಗೂ 'ಬಾಹುಬಲಿ ದ ಕನ್ಕ್ಲೂಷನ್' ಮನರಂಜನೆ ನೀಡಿದ ಜನಪ್ರಿಯ ಚಿತ್ರ ಕೆಟಗರಿ ಅಡಿಗಳಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿವೆ.

    English summary
    List of S S Rajamouli directional all films and collection. Take a look
    Monday, October 10, 2022, 18:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X