For Quick Alerts
  ALLOW NOTIFICATIONS  
  For Daily Alerts

  ತೆಲುಗು ಸಿನಿಮಾಗಳಿಂದ ದೂರಾದರೇ ರಾಕುಲ್: ನಟಿ ಹೇಳಿದ್ದೇನು?

  |

  ನಟಿ ರಾಕುಲ್ ಪ್ರೀತ್ ಸಿಂಗ್ ಹುಟ್ಟಿದ್ದು ದೆಹಲಿಯಲ್ಲಾದರೂ ಅವರಿಗೆ ನೆಲೆ ಕೊಟ್ಟಿದ್ದು ದಕ್ಷಿಣ ಭಾರತ ಸಿನಿಮಾರಂಗ. ಅದರಲ್ಲಿಯೂ ತೆಲುಗು ಸಿನಿಮಾ ರಂಗ.

  ತಮ್ಮ ಮೊದಲ ಸಿನಿಮಾವನ್ನು ಕನ್ನಡದಲ್ಲಿ ಮಾಡಿದ ರಾಕುಲ್ ಪ್ರೀತ್ ಸಿಂಗ್ ಆ ನಂತರ ಹೆಚ್ಚು ಅವಕಾಶಗಳನ್ನು ಪಡೆದುಕೊಂಡಿದ್ದು ತೆಲುಗು ಸಿನಿಮಾ ರಂಗದಲ್ಲಿ. ಆದರೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ ರಾಕುಲ್‌ಗೆ ತೆಲುಗಿನಲ್ಲಿ ಅವಕಾಶಗಳು ಕಡಿಮೆ ಆಗಿವೆಯಂತೆ.

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಹೊರಬಿದ್ದ ಮಾದಕ ವಸ್ತು ಪ್ರಕರಣದಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಅನ್ನು ವಿಚಾರಣೆ ಮಾಡಲಾಗಿತ್ತು. ಆಗೆಲ್ಲ ನಟಿಯ ಕರಿಯರ್ ಮುಗಿಯಿತೆಂದೇ ಹಲವರು ಮಾತನಾಡಿಕೊಂಡರು. ಆದರೆ ಇದನ್ನು ಸತ್ಯವಲ್ಲವೆಂದು ಅಲ್ಲಗಳೆದಿದ್ದಾರೆ ನಟಿ ರಾಕುಲ್.

  ''ತೆಲುಗು ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗಿದೆ ಎಂದು ರಾಕುಲ್ ಒಪ್ಪಿಕೊಂಡಿದ್ದಾರೆ'' ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ರಾಕುಲ್ ಪ್ರೀತ್ ಸಿಂಗ್, ''ಹೀಗೆ ನಾನು ಯಾವಾಗ ಹೇಳಿದೆ ಎಂಬುದು ನನಗೆ ಗೊತ್ತಿಲ್ಲ. ವರ್ಷದಲ್ಲಿ ಇರುವುದು ಕೇವಲ 365 ದಿನಗಳು. ಆರು ಸಿನಿಮಾಗಳಿಗಿಂತಲೂ ಹೆಚ್ಚು ಸಿನಿಮಾಗಳನ್ನು ಇಷ್ಟು ದಿನಗಳಲ್ಲಿ ಮಾಡುವಂತೆ ನೀವು ಯಾರಾದರೂ ಅಡ್ಜಸ್ಟ್ ಮಾಡಿಕೊಟ್ಟರೆ ನಾನು ನಿಮಗೆ ಋಣಿಯಾಗಿರುತ್ತೇನೆ'' ಎಂದಿದ್ದಾರೆ ರಾಕುಲ್.

  ಆ ಮೂಲಕ ತಾವು ತೆಲುಗು ಭಾಷೆಯ ಆರು ಸಿನಿಮಾಗಳನ್ನು ವರ್ಷವೊಂದರಲ್ಲಿ ನಟಿಸುತ್ತಿರುವುದಾಗಿ ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದಾರೆ ರಾಕುಲ್ ಪ್ರೀತ್ ಸಿಂಗ್.

  ವಿಶ್ವ ಯೋಗ ದಿನದಂದು Pooja Hegde ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.. | Filmibeat Kannada

  ನಟಿ ರಾಕುಲ್ ಸಿಂಗ್ ಈಗಲೂ ಸಾಕಷ್ಟು ಬ್ಯುಸಿಯಾಗಿಯೇ ಇದ್ದಾರೆ. ಪ್ರಸ್ತುತ ಆರು ಸಿನಿಮಾಗಳಲ್ಲಿ ರಾಕುಲ್ ನಟಿಸುತ್ತಿದ್ದಾರೆ. ತಮಿಳಿನ 'ಅಯಾಲನ್', ಕಮಲ್‌ಹಾಸನ್ ಜೊತೆಗೆ 'ಇಂಡಿಯನ್ 2', ಕ್ರಿಶ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ತೆಲುಗು ಸಿನಿಮಾ, ಜಾನ್ ಅಬ್ರಹಾಂ ಜೊತೆಗೆ 'ಅಟ್ಯಾಕ್' ತೆಲುಗು ಸಿನಿಮಾ, ಅಜಯ್ ದೇವಗನ್ ನಿರ್ದೇಶನದ 'ಮೇ ಡೇ', ಅಜಯ್ ದೇವಗನ್ ನಟನೆಯ 'ಥ್ಯಾಂಕ್ ಗಾಡ್' ಸಿನಿಮಾಗಳಲ್ಲಿ ರಾಕುಲ್ ನಟಿಸುತ್ತಿದ್ದಾರೆ.

  English summary
  Actress Rakul Preet Singh answer to those who said she is not getting work from Tollywood. She said she working in 6 movies this year in Telugu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X