For Quick Alerts
  ALLOW NOTIFICATIONS  
  For Daily Alerts

  ತಂದೆ ಚಿರಂಜೀವಿಗೆ ಗುರುವಾದ ಪುತ್ರ ರಾಮ್ ಚರಣ್

  |

  ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ ಇಬ್ಬರು ತಂದೆ-ಮಗ ಎನ್ನುವುದಕ್ಕಿಂತ ಉತ್ತಮ ಸ್ನೇಹಿತರು ಅಂದರೆ ತಪ್ಪಾಗಲ್ಲ. ಇಬ್ಬರು ಅಷ್ಟು ಅನ್ಯೋನ್ಯವಾಗಿದ್ದಾರೆ. ಅಪ್ಪನ ಸಿನಿಮಾದಲ್ಲಿ ಮಗ ಕಾಣಿಸಿಕೊಳ್ಳುವುದು, ಮಗನ ಸಿನಿಮಾದಲ್ಲಿ ಅಪ್ಪ ಗೆಸ್ಟ್ ಪಾತ್ರ ಮಾಡುವುದು, ಅಪ್ಪನಗಾಗಿ ಮಗ ರಾಮ್ ಚರಣ್ ಸಿನಿಮಾ ನಿರ್ಮಾಣ ಮಾಡುವುದು ಹೀಗೆ ಇಬ್ಬರ ಸಂಬಂಧ ಸಿನಿಮಾರಂಗದಲ್ಲೂ ಉತ್ತಮವಾಗಿದೆ.

  ತಂದೆಗೆ ಬೆನ್ನೆಲುಬಾಗಿ ನಿಂತಿರುವ ರಾಮ್ ಚರಣ್ ಈಗ ಅಪ್ಪನಿಗೆ ಗುರುವಾಗಲು ಹೊರಟಿದ್ದಾರೆ. ಏನು..ಮಗ, ಅಪ್ಪನಿಗೆ ಗುರುವಾಗುತ್ತಿದ್ದಾರಾ? ಹೌದು, ಇದೆಲ್ಲ ಸಾಧ್ಯವಾಗುವುದು ತೆರೆಮೇಲೆ ಮಾತ್ರ. ಮೆಗಾ ಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ ಗುರುವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದೆ ಓದಿ..

  ಲಾಕ್ ಡೌನ್ ನಲ್ಲಿ ತಮ್ಮನ ಮಗಳಿಗೆ ಬಿಗ್ ಗಿಫ್ಟ್ ನೀಡಿದ ಚಿರಂಜೀವಿ: ಏನದು?ಲಾಕ್ ಡೌನ್ ನಲ್ಲಿ ತಮ್ಮನ ಮಗಳಿಗೆ ಬಿಗ್ ಗಿಫ್ಟ್ ನೀಡಿದ ಚಿರಂಜೀವಿ: ಏನದು?

  ಬಹು ನಿರೀಕ್ಷೆಯ ಸಿನಿಮಾ ಆಚಾರ್ಯ

  ಬಹು ನಿರೀಕ್ಷೆಯ ಸಿನಿಮಾ ಆಚಾರ್ಯ

  ಮೆಗಾ ಸ್ಟಾರ್ ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಆಚಾರ್ಯ ಸಿನಿಮಾ ಕೊರೊನಾ ಲಾಕಿ ಡೌನ್ ಕಾರಣ ಚಿತ್ರೀಕರಣ ಸ್ಥಗಿತಗಳಿಸಿದೆ. ಸಾಕಷ್ಟು ನಿರಿೀಕ್ಷೆ ಇಟ್ಟುಕೊಂಡಿರುವ ಈ ಸಿನಿಮಾದಿಂದ ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿವೆ. ಸದ್ಯ ಚಿತ್ರದಲ್ಲಿನ ರಾಮ್ ಚರಣ್ ಪಾತ್ರ ರಿವೀಲ್ ಆಗಿದೆ.

  ಮೊದಲ ಬಾರಿಗೆ ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್: ಪಾತ್ರ ಯಾವುದು?ಮೊದಲ ಬಾರಿಗೆ ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್: ಪಾತ್ರ ಯಾವುದು?

  ತಂದೆಗೆ ಗುರುವಾದ ಪುತ್ರ

  ತಂದೆಗೆ ಗುರುವಾದ ಪುತ್ರ

  ಈಗಾಗಲೆ ಹೇಳಿದ ಹಾಗೆ ಚಿತ್ರದಲ್ಲಿ ರಾಮ್ ಚರಣ್, ತಂದೆ ಚಿರಂಜೀವಿಗೆ ಗುರುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ 30 ನಿಮಿಷಾ ಕಾಣಿಸಿಕೊಳ್ಳಲಿದ್ದಾರಂತೆ. ತಂದೆಗಾಗಿ, ತಂದೆಗೆ ಗುರುವಾಗಿ ಮಿಂಚಲಿದ್ದಾರೆ ಅಂದ್ಮೇಲೆ, ಗುರು ಶಿಷ್ಯನಾಗಿ ಅಪ್ಪ-ಮಗ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮತ್ತಷ್ಟು ಜಾಸ್ತಿಯಾಗಿದೆ.

  ಮಹೇಶ್ ಬಾಬು ಮಾಡಬೇಕಿದ್ದ ಪಾತ್ರ

  ಮಹೇಶ್ ಬಾಬು ಮಾಡಬೇಕಿದ್ದ ಪಾತ್ರ

  ಆಚಾರ್ಯ ಸಿನಿಮಾದ ಗುರುವಿನ ಪಾತ್ರವನ್ನು ಪ್ರಿನ್ಸ್ ಮಹೇಶ್ ಬಾಬು ಮಾಡಬೇಕಿತ್ತು. ಆದರೆ ಮಹೇಶ್ ಈ ಪಾತ್ರವನ್ನು ಮಾಡಲು ಹಿಂದೇಟು ಹಾಕಿದ ಕಾರಣ ರಾಮ್ ಚರಣ್ ಅವರೆ ನಿಭಾಯಿಸುತ್ತಿದ್ದಾರೆ. ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ಸಿನಿಮಾ ನಡುವೆಯೂ ರಾಮ್ ಅಪ್ಪನಿಗಾಗಿ ಆಚಾರ್ಯ ಸಿನಿಮಾದಲ್ಲಿ ಬಣ್ಣಹಚ್ಚಲಿದ್ದಾರೆ.

  ಟ್ವಿಟ್ಟರ್ ಲೋಕದಲ್ಲಿ ರಾಮ್ ಚರಣ್: 'ಸಿಂಹವನ್ನು ಅನುಸರಿಸಿದ ಮರಿ ಸಿಂಹ'ಟ್ವಿಟ್ಟರ್ ಲೋಕದಲ್ಲಿ ರಾಮ್ ಚರಣ್: 'ಸಿಂಹವನ್ನು ಅನುಸರಿಸಿದ ಮರಿ ಸಿಂಹ'

  ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್

  ಚಿಕ್ಕಪ್ಪನ ಸಿನಿಮಾದಲ್ಲಿ ರಾಮ್ ಚರಣ್

  ನಟ ಹಾಗೂ ರಾಮ್ ಚರಣ್ ಚಿಕ್ಕಪ್ಪ ಪವನ್ ಕಲ್ಯಾಣ್ ಅಭಿನಯದ ಹಿಸ್ಟಾರಿಕಲ್ ಸಿನಿಮಾದಲ್ಲೂ ರಾಮ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ರಿಶಸ್ ನಿರ್ದೇಶನದ ಚಿತ್ರದಲ್ಲಿ ರಾಮ್ ಚರಣ್ ಮೊದಲ ಬಾರಿಗೆ ಚಿಕ್ಕಪ್ಪನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದ್ಯಾವುದರ ಬಗ್ಗೆಯೂ ರಾಮ್ ಚರಣ್ ಆಗಲಿ ಅಥವಾ ಪವನ್ ಕಲ್ಯಾಣ್ ಆಗಲಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಲಾಕ್ ಡೌನ್ ನಡುವೆಯೂ ರಾಮ್ ಚರಣ್ ಸಿನಿಮಾ ವಿಚಾರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

  English summary
  Telugu Actor Ram Charan's role in Acharya film has been revealed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X