Don't Miss!
- News
ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಅಧಿಕ ಸಾವುನೋವುಗಳ ಭೀತಿ!
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಂಕರ್ ಸಿನಿಮಾ ಮುಗಿದ ಬಳಿಕವೇ ಮತ್ತೆ ದಂಗೆ ಏಳಲು ಸಜ್ಜಾದ ರಾಮ್ ಚರಣ್!
RRR ಸಿನಿಮಾ ಬಳಿಕ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ತೇಜಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 'ಆಚಾರ್ಯ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತರೂ, ರಾಮ್ ಚರಣ್‌ಗೆ ಅದರ ಬಿಸಿ ಮುಟ್ಟಿಲ್ಲ. ಹೀಗಾಗಿ ಹೊಸ ಸಿನಿಮಾಗಳು ಇವರನ್ನು ಹುಡುಕಿಕೊಂಡು ಬರುತ್ತಲೇ ಇವೆ.
ರಾಮ್ ಚರಣ್ ಸದ್ಯ ದುಬಾರಿ ನಿರ್ದೇಶಕ ಶಂಕರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದು ಶಂಕರ್ ಹಾಗೂ ರಾಮ್ ಚರಣ್ ತೇಜಾ ಕಾಂಬಿನೇಷನ್‌ನ ಮೊದಲ ಸಿನಿಮಾ. ಈ ಸಿನಿಮಾ ನೋಡುವುದಕ್ಕೆ ಮೆಗಾ ಪವರ್‌ಸ್ಟಾರ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
'RRR
2'
ಸೆಟ್ಟೇರೋದು
ಕನ್ಫರ್ಮ್
ಎಂದ
ರಾಜಮೌಳಿ:
ಮಹೇಶ್
ಬಾಬು
ಸಿನಿಮಾ
ಕಥೆಯೇನು?
ಈ ಮಧ್ಯೆನೇ ರಾಮ್ ಚರಣ್ ತೇಜಾ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾನೇ. ಈಗಾಗಲೇ 100 ಕೋಟಿ ಸಿನಿಮಾ ನೀಡಿರುವ ನಿರ್ದೇಶಕರು ರಾಮ್ ಚರಣ್‌ಗೆ ಆಕ್ಷನ್ ಕಟ್ ಹೇಳುವುದು ಬಹುತೇಕ ಕನ್ಫರ್ಮ್ ಆಗಿದೆ.

'ಉಪ್ಪೆನ' ನಿರ್ದೇಕರಿಂದ ಆಕ್ಷನ್ ಕಟ್
ರಾಮ್ ಚರಣ್ ತೇಜಾ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿಯಾಗಿದ್ದಾರೆ. ಈ ನಡುವೆನೇ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, 'ಉಪ್ಪೆನ' ಸಿನಿಮಾದ ನಿರ್ದೇಶಕ ಬುಚ್ಚಿ ಬಾಬು ಸನಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೆಗಾ ಕುಟುಂಬದ ಕುಡಿ ವೈಷ್ಣವ್ ತೇಜ್ ಅನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅದೇ ನಿರ್ದೇಶಕ ಈಗ ರಾಮ್ ಚರಣ್‌ಗಾಗಿ ಪ್ಯಾನ್ ಇಂಡಿಯಾ ಕಥೆಯನ್ನು ಸಿದ್ಧಪಡಿಸಿದ್ದು, ಅದನ್ನು ರಾಮ್ ಚರಣ್‌ಗೆ ಹೇಳಿದ್ದಾರೆ. ಆ ಕಥೆನೇ ರಾಮ್ ಚರಣ್‌ಗೆ ಇಷ್ಟಪಟ್ಟಿದ್ದು, ಸಿನಿಮಾದಲ್ಲಿ ನಟಿಸೋದಕ್ಕೆ ಒಪ್ಪಿಕೊಂಡಿದ್ದಾರೆ.

ಸುಕುಮಾರ್ ಶಿಷ್ಯ ಬುಚಿ ಬಾನು ಸನಾ
ಬುಚಿ ಬಾಬು ಸನಾ ಪ್ಯಾನ್ ಇಂಡಿಯಾ ಡೈರೆಕ್ಟರ್ ಸುಕುಮಾರ್ ಅವರ ಶಿಷ್ಯ. ಸುಕುಮಾರ್ ಜೊತೆ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ 'ಉಪ್ಪೆನ' ಸಿನಿಮಾಗೆ ಸ್ವತ: ಸುಕುಮಾರ್ ಅವರೇ ಕಥೆಯನ್ನು ಬರೆದಿದ್ದರು. ಆ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ.ಯನ್ನು ಕಲೆ ಹಾಕಿತ್ತು. 'ಉಪ್ಪೆನ' ಮೂಲಕವೇ ವೈಷ್ಣವ್ ತೇಜಾ ಹಾಗೂ ಕೃತಿ ಶೆಟ್ಟಿ ಇಬ್ಬರೂ ಟಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು.

ಶಂಕರ್ ಸಿನಿಮಾ ಬಳಿಕ ಶುರು
ರಾಮ್ ಚರಣ್ ತೇಜಾ ಸದ್ಯ ಶಂಕರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಸಿನಿಮಾಗೆ RC 15 ಅಂತ ತಾತ್ಕಾಲಿಕವಾಗಿ ಟೈಟಲ್ ಫಿಕ್ಸ್ ಮಾಡಿದ್ದಾರೆ. ಈ ಟೈಟಲ್ ಇಟ್ಟುಕೊಂಡೇ ಸಿನಿಮಾವನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಅಲ್ಲದೆ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿಯೇ ಇದೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಬುಚಿ ಬಾಬು ಸನಾ ನಿರ್ದೇಶನದ ಸಿನಿಮಾ ತಂಡ ಸೇರಿಕೊಳ್ಳಲಿದ್ದಾರೆ. "ಕೆಲವು ವೇಳೆ ದಂಗೆ ಏಳುವುದು ಅನಿವಾರ್ಯ... ರಾಮ್ ಚರಣ್ ಜೊತೆ ನನ್ನ ಹೊಸ ಸಿನಿಮಾವನ್ನು ಅನೌನ್ಸ್ ಮಾಡುತ್ತಿರುವುದು ಅತೀವ ಖುಷಿ ಕೊಟ್ಟಿದೆ. ಇಂತಹದ್ದೊಂದು ಅದ್ಭುತ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು." ಎಂದು ಬುಚಿ ಬಾಬು ಸನಾ ಟ್ವೀಟ್ ಮಾಡಿದ್ದಾರೆ.

ಮುಂದಿನ ವರ್ಷ ಸಿನಿಮಾ ಶುರು
ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಗೆ ಬೆಂಬಲ ನೀಡುತ್ತಿದ್ದಾರೆ. ವೆಂಕಟ ಸತೀಶ್ ಕಿಲಾರು ಅವರ ವೃದ್ಧಿ ಸಿನಿಮಾಸ್ ಹಾಗೂ ಸುಕುಮಾರ್ ರೈಟಿಂಗ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ, ಮುಂದಿನ ವರ್ಷ ಈ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಲಿದೆ. ಸದ್ಯ ಕತೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಮಾಹಿತಿಗಳನ್ನು ನೀಡುವ ಸಾಧ್ಯತೆಯಿದೆ.