For Quick Alerts
  ALLOW NOTIFICATIONS  
  For Daily Alerts

  ನ್ಯೂಯಾರ್ಕ್‌ನ ಖ್ಯಾತ ಕಟ್ಟಡದ ಮೇಲೆ ರಾಮ್ ಚರಣ್ ಭಾವಚಿತ್ರ ಪ್ರದರ್ಶನ

  |

  ಮೆಗಾಸ್ಟಾರ್ ಪುತ್ರ ರಾಮ್ ಚರಣ್ ತೇಜ 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತೆಲುಗು ಸಿನಿ ಇಂಡಸ್ಟ್ರಿ ರಾಮ್ ಚರಣ್ ಜನುಮದಿನಕ್ಕೆ ಶುಭಾಶಯಗಳನ್ನು ಮಹಾಪೂರವೇ ಹರಿಸಿದೆ.

  ವಿಶೇಷ ಅಂದ್ರೆ ನ್ಯೂಯಾರ್ಕ್‌ನ ಐಕಾನಿಕ್ ಟೈಮ್ಸ್ ಸ್ಕ್ವೇರ್ನ ನಾಸ್ಡಾಕ್ ಕಟ್ಟಡದ ಮೇಲೆ ರಾಮ್ ಚರಣ್ ತೇಜ ಅವರ 3D ಫೋಟೋಗಳು ಮತ್ತು ವೀಡಿಯೊಗಳು ಪ್ರದರ್ಶಿಸಲಾಗಿದೆ. ಇದು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದೆ.

  ರಾಮ್ ಚರಣ್ ಹುಟ್ಟುಹಬ್ಬ; 'RRR' ತಂಡದಿಂದ ಅದ್ದೂರಿ ಆಚರಣೆರಾಮ್ ಚರಣ್ ಹುಟ್ಟುಹಬ್ಬ; 'RRR' ತಂಡದಿಂದ ಅದ್ದೂರಿ ಆಚರಣೆ

  'ಆಚಾರ್ಯ' ಚಿತ್ರತಂಡದಿಂದ ಪೋಸ್ಟರ್ ಬಿಡುಗಡೆ ಮಾಡಿ ರಾಮ್ ಚರಣ್ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದೆ. ಚಿರಂಜೀವಿ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ರಾಮ್ ಚರಣ್ ವಿಶೇಷ ಪಾತ್ರ ಮಾಡಿದ್ದಾರೆ. ಅದರ ಝಲಕ್ ಬರ್ತಡೇ ಪ್ರಯುಕ್ತ ಅನಾವರಣಗೊಂಡಿದೆ. ತಂದೆ-ಮಗನ ಜುಗಲ್‌ಬಂದಿ ಪ್ರೇಕ್ಷಕರ ಥ್ರಿಲ್ ಹೆಚ್ಚಿಸಿದೆ.

  ಕೊರಟಲಾ ಶಿವ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಪೂಜಾ ಹಗ್ಡೆ ಸಹ ಅತಿಥಿ ಪಾತ್ರದಲ್ಲಿ ಇದ್ದಾರೆ ಎನ್ನಲಾಗಿದೆ. ಈಗಾಗಲೇ ನಿರ್ಧರಿಸಿದಂತೆ ಮೇ 13 ರಂದು ಆಚಾರ್ಯ ಸಿನಿಮಾ ತೆರೆಗೆ ಬರಲಿದೆ.

  ರಾಮ್ ಚರಣ್ ಹುಟ್ಟುಹಬ್ಬದ ಪ್ರಯುಕ್ತ ಆರ್‌ ಆರ್‌ ಆರ್‌ ಚಿತ್ರತಂಡ ಸಹ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ಚರಣ್ ಅಭಿನಯಿಸಿದ್ದು, ಹೊಸ ಲುಕ್ ಅನಾವರಗೊಳಿಸಿದೆ.

  Congress ನಿಂದ ಸೈಟ್ ಮಾರಿಬಿಟ್ಟೆ,ಕಾಫಿ ಪುಡಿಗೂ ದುಡ್ಡಿರ್ಲಿಲ್ಲ ಅಂದ್ರು Jaggesh | Filmibeat Kannada

  ಇನ್ನು ಶಂಕರ್ ಜೊತೆ ರಾಮ್ ಚರಣ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಈ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದೆ. ಆರ್‌ಆರ್‌ಆರ್ ಹಾಗೂ ಆಚಾರ್ಯ ಸಿನಿಮಾಗಳ ಚಿತ್ರೀಕರಣ ಮುಗಿದ ಬಳಿಕ ಶಂಕರ್ ಜೊತೆಗಿನ ಸಿನಿಮಾ ಆರಂಭವಾಗಲಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗುವ ಸಾಧ್ಯತೆ ಹೆಚ್ಚಿದೆ.

  English summary
  Ram Charan Teja Birthday Celebration on Nasdaq building at New York times square.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X