For Quick Alerts
  ALLOW NOTIFICATIONS  
  For Daily Alerts

  ಅಚಾರ್ಯ ಚಿತ್ರದಲ್ಲಿ ರಾಮ್ ಚರಣ್ ಲುಕ್ ವೈರಲ್: ಪೋಸ್ಟರ್ ಅಸಲಿನಾ?

  |

  ಮೆಗಾಸ್ಟಾರ್ ಚಿರಂಜೀವಿ ನಟನೆಯಲ್ಲಿ ತಯಾರಾಗುತ್ತಿರುವ ಆಚಾರ್ಯ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಚಿರು ಪುತ್ರ ರಾಮ್ ಚರಣ್ ತೇಜ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಆದರೆ ರಾಮ್ ಚರಣ್ ತೇಜ ಅವರ ಪಾತ್ರದ ಹಾಗೂ ಗೆಟಪ್ ಬಗ್ಗೆ ಎಲ್ಲಿಯೂ ಮಾಹಿತಿ ಅಥವಾ ಫೋಟೋ ಹೊರಬಿದ್ದಿಲ್ಲ. ಇದೀಗ, ಆಚಾರ್ಯ ಚಿತ್ರದಲ್ಲಿ ರಾಮ್ ಚರಣ್ ಲುಕ್ ಎನ್ನಲಾದ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ರಾಮ್ ಚರಣ್ ನಂತರ ವರುಣ್ ತೇಜಗೆ ಕೊರೊನಾ ಪಾಸಿಟಿವ್

  ವೈರಲ್ ಆಗಿರುವ ಪೋಸ್ಟರ್‌ನಲ್ಲಿ ರಾಮ್ ಚರಣ್ ಲುಕ್ ಕಿಲ್ಲಿಂಗ್ ಎನಿಸಿಕೊಂಡಿದೆ. ಈ ಲುಕ್ ನೋಡಿ ಅಭಿಮಾನಿಗಳು ಸಹ ಥ್ರಿಲ್ ಆಗಿದ್ದಾರೆ. ಆದರೆ, ಇದು ಅಧಿಕೃತವಲ್ಲ ಎಂದು ತಿಳಿದ ಅದೇ ಅಭಿಮಾನಿಗಳು ನಿರಾಸೆಯೂ ಆಗಿದ್ದಾರೆ.

  ಬಟ್, ಫ್ಯಾನ್ ಮೇಡ್ ಪೋಸ್ಟರ್ ಮಾತ್ರ ಮೆಗಾ ಅಭಿಮಾನಿಗಳ ಕಣ್ಣು ಕುಕ್ಕುವಂತಿದೆ. ಚಿತ್ರದಲ್ಲಿ ರಾಮ್ ಚರಣ್ ಲುಕ್ ಹೀಗೆ ಇದ್ದರೆ ಚಿಂದಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  ಕೊರಟಲಾ ಶಿವ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ರಾಮ್ ಚರಣ್ ತೇಜ ಮತ್ತು ನಿರಂಜನ್ ರೆಡ್ಡಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿರಂಜೀವಿಗೆ ಜೋಡಿಯಾಗಿ ಕಾಜಲ್ ಅಗರ್‌ವಾಲ್ ನಟಿಸುತ್ತಿದ್ದಾರೆ. ಮಣಿ ಶರ್ಮಾ ಸಂಗೀತ ಒದಗಿಸುತ್ತಿದ್ದಾರೆ.

  ಭಾರತ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದ 'ಆಚಾರ್ಯ'

  ಮತ್ತೊಂದೆಡೆ ರಾಮ್ ಚರಣ್ ತೇಜ ಅವರು ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಜೊತೆ ನಾಯಕರಾಗಿ ನಟಿಸುತ್ತಿದ್ದಾರೆ. ಪ್ರಸ್ತುತ ರಾಮ್ ಚರಣ್‌ಗೆ ಕೊರೊನಾ ವೈರಸ್ ತಗುಲಿದ್ದು, ಕ್ವಾರಂಟೈನ್‌ನಲ್ಲಿದ್ದಾರೆ. ಆರ್ ಆರ್ ಆರ್ ಶೂಟಿಂಗ್ ಸಹ ಸ್ಥಗಿತಗೊಂಡಿದೆ.

  English summary
  Telugu actor Ram charan teja's 'Acharya' movie look viral in Social media. but, it's not official. Fan made poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X