For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ನೈಜ ಘಟನೆಯ ಚಿತ್ರ ಘೋಷಿಸಿದ ವರ್ಮಾ, ಫಸ್ಟ್ ಲುಕ್ ರಿಲೀಸ್

  |

  ನೈಜ ಘಟನೆಗಳ ಕುರಿತು ಸಿನಿಮಾ ಮಾಡುವುದರಲ್ಲಿ ರಾಮ್ ಗೋಪಾಲ್ ವರ್ಮಾ ಎತ್ತಿದ ಕೈ. ಅದರಲ್ಲೂ ಕ್ರೈಂ ಆಧಾರಿತ ಚಿತ್ರಗಳ ಕಡೆ ಹೆಚ್ಚು ಗಮನ ಕೊಡ್ತಾರೆ. ಲಾಕ್‌ಡೌನ್ ಅವಧಿಯಲ್ಲೂ ಹೆಚ್ಚು ಬ್ಯುಸಿಯಿದ್ದ ನಿರ್ದೇಶಕ ಅಂತ ಏನಾದ್ರು ಇದ್ರೆ ಅದು ವರ್ಮಾ ಮಾತ್ರ.

  ಸುದೀಪ್ ಸರ್ ನೀವು ಯಾವಾಗ್ಲೂ ನನ್ನ ಫೇವರಿಟ್ | Filmibeat Kannada

  ಲಾಕ್‌ಡೌನ್ ವೇಳೆ ನಗ್ನಂ, ಮರ್ಡರ್, 'ಅರ್ನಬ್- ದಿ ನ್ಯೂಸ್ ಪ್ರಾಸ್ಟಿಟ್ಯೂಟ್' ಅಂತಹ ಚಿತ್ರಗಳನ್ನು ಮಾಡಿ ಗಮನ ಸೆಳೆದಿದ್ದ ಆರ್‌ಜಿವಿ ಇಂದು ಹೊಸ ಸಿನಿಮಾ ಘೋಷಿಸಿದ್ದಾರೆ. ಕಳೆದ ವರ್ಷ ಹೈದರಾಬಾದ್‌ನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲು ಮುಂದಾಗಿರುವ ಆರ್‌ಜಿವಿ ಈ ಚಿತ್ರಕ್ಕೆ ''ದಿಶಾ ಎನ್‌ಕೌಂಟರ್'' ಎಂದು ಚಿತ್ರಕ್ಕೆ ಹೆಸರಿಟ್ಟಿದ್ದಾರೆ. ಮುಂದೆ ಓದಿ....

  ಅರ್ನಬ್ ಗೋಸ್ವಾಮಿ ಕುರಿತು 'ಅರ್ನಬ್- ದಿ ನ್ಯೂಸ್ ಪ್ರಾಸ್ಟಿಟ್ಯೂಟ್' ಸಿನಿಮಾ: ಆರ್‌ಜಿವಿ ಘೋಷಣೆ

  ಯಾವುದು ಆ ಘಟನೆ?

  ಯಾವುದು ಆ ಘಟನೆ?

  2019 ನವೆಂಬರ್ 26 ರಂದು ಕೆಲಸ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ಪಶುವೈದ್ಯೆಯ ಮೇಲೆ ಲಾರಿ ಡ್ರೈವರ್ ಸೇರಿ ನಾಲ್ಕು ಜನ ಅತ್ಯಾಚಾರವೆಸಗಿದ್ದ ಘಟನೆಯನ್ನು ತೆರೆಮೇಲೆ ತರಲು ವರ್ಮಾ ನಿರ್ಧರಿಸಿದ್ದಾರೆ. ಈ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಅತ್ಯಾಚಾರವೆಸಗಿ ಯುವತಿಯನ್ನು ಸುಟ್ಟುಹಾಕಿದ್ದರು. ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಇಡೀ ದೇಶ ಪ್ರತಿಭಟನೆ ಮಾಡಿತ್ತು.

  ಎನ್‌ಕೌಂಟರ್ ಮೇಲೆ ವರ್ಮಾ ಕಣ್ಣು

  ಎನ್‌ಕೌಂಟರ್ ಮೇಲೆ ವರ್ಮಾ ಕಣ್ಣು

  ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಮುಂಚಿತವಾಗಿಯೇ ಅತ್ಯಾಚಾರಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ಪೊಲೀಸರ ಈ ಕ್ರಮಕ್ಕೆ ದೇಶದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕಥೆಯನ್ನಿಟ್ಟು ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ದಿಶಾ ಎನ್‌ಕೌಂಟರ್' ಎಂಬ ಸಿನಿಮಾ ಮಾಡ್ತಿದ್ದಾರೆ. ಸದ್ಯಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

  RGV 'ಮರ್ಡರ್'ಗೆ ಶಾಕ್: ವಿವಾದಾತ್ಮಕ ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ

  ನೈಜತೆ ಪ್ರದರ್ಶಿಸುತ್ತಿದೆ ಫಸ್ಟ್ ಲುಕ್

  ನೈಜತೆ ಪ್ರದರ್ಶಿಸುತ್ತಿದೆ ಫಸ್ಟ್ ಲುಕ್

  ಸ್ಕೂಟಿ ಬೈಕ್-ಲಾರಿ ಹಾಗೂ ಗನ್ ಕಾಣಿಸಿಕೊಂಡಿರುವ ಪೋಸ್ಟರ್ ರಾ ಮೇಕಿಂಗ್ ಬಗ್ಗೆ ನಿರೀಕ್ಷೆ ಮೂಡಿಸಿದೆ. ಇನ್ನು ಕೆಲವು ಶೂಟಿಂಗ್ ಚಿತ್ರಗಳನ್ನು ಸಹ ವರ್ಮಾ ಹಂಚಿಕೊಂಡಿದ್ದು, ಯುವತಿಯ ಕಿಡ್ನಾಪ್, ಅತ್ಯಾಚಾರ ನಡೆದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ.

  ಘಟನೆಗೆ ಒಂದು ವರ್ಷ, ಸಿನಿಮಾ ರಿಲೀಸ್

  ಘಟನೆಗೆ ಒಂದು ವರ್ಷ, ಸಿನಿಮಾ ರಿಲೀಸ್

  2019 ನವೆಂಬರ್ 26 ರಂದು ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಆ ದಿನದ ನೆನಪಿಗಾಗಿ ಚಿತ್ರವನ್ನು ಸಹ ಅದೇ ದಿನದಂದು ಬಿಡುಗಡೆ ಮಾಡಲು ವರ್ಮಾ ಪ್ಲಾನ್ ಮಾಡಿದ್ದಾರೆ. ಸೆಪ್ಟೆಂಬರ್ 26 ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ನವೆಂಬರ್ 26 ರಂದು ಸಿನಿಮಾ ತೆರೆಗೆ ಬರಲಿದೆ.

  English summary
  Telugu director Ram Gopal Varma announces his new movie titled as a Disha Encounter and first look released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X