For Quick Alerts
  ALLOW NOTIFICATIONS  
  For Daily Alerts

  ನಾಗಾರ್ಜುನ ಅಳಿಯನ 2ನೇ ವಿವಾಹ; ಮದುವೆಯಾಗಬೇಡ ಎಂದ RGV ಒತ್ತಾಯ

  |

  ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ನಟ ನಾಗಾರ್ಜುನ ಅಕ್ಕನ ಮಗ ಅಳಿಯ ಸುಮಂತ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಂದಹಾಗೆ ಸುಮಂತ್‌ಗೆ ಇದು 2ನೇ ವಿವಾಹ. ಸರಳವಾಗಿ ತೀರ ಆಪ್ತರ ಸಮ್ಮುಖದಲ್ಲಿ ನಟ ಸುಮಂತ್ ಬಹುಕಾಲದ ಗೆಳತಿ ಪವಿತ್ರಾ ಜೊತೆ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

  ಇದೀಗ ಸುಮಂತ್ ಮತ್ತು ಪವಿತ್ರಾ ಮದುವೆಯ ಆಮಂತ್ರಣ ಪತ್ರಿಕೆ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಸುಮಂತ್ ಮತ್ತು ಪವಿತ್ರಾ ಒಟ್ಟಿಗೆ ಮದುವೆ ಆಮಂತ್ರಣ ಪತ್ರಿಕೆ ಹಂಚುತ್ತಿದ್ದು, ಟಾಲಿವುಡ್ ಕೆಲವು ಗಣ್ಯರಿಗೆ ಆಹ್ವಾನ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

  ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದ್ದಂತೆ ವಿವಾದಾತ್ಮಕ ನಿರ್ದೇಶಕ ಅಂತಾನೆ ಖ್ಯಾತಿಗಳಿಸಿರುವ ರಾಮ್ ಗೋಪಾಲ್ ವರ್ಮ ಸುಮಂತ್ ಮದುವೆ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ದಯವಿಟ್ಟು ಮದುವೆ ಆಗಬೇಡ ಎಂದು ಒತ್ತಾಯಿಸಿದ್ದಾರೆ. ಆರ್ ಜಿ ವಿ ಟ್ವೀಟ್ ಈಗ ವೈರಲ್ ಆಗಿದೆ. ಮುಂದೆ ಓದಿ..

  ಮದುವೆಯಾಗಿ ಜೀವನ ಹಾಳುಮಾಡಿಕೊಳ್ಳಬೇಡಿ- RGV

  ಮದುವೆಯಾಗಿ ಜೀವನ ಹಾಳುಮಾಡಿಕೊಳ್ಳಬೇಡಿ- RGV

  ಸುಮಂತ್ ಮದುವೆಯಾಗಬೇಡ. ನನ್ನ ಮಾತು ಕೇಳು. ಪವಿತ್ರಾ ನಿಮಗೂ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ರಾಮ್ ಗೋಪಾಲ್ ವರ್ಮ, ಮದುವೆಯಾಗಿ ತಮ್ಮ ಜೀವನ ಹಾಳುಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ವಿವಾಹ ವ್ಯವಸ್ಥೆ ಜೀವನವನ್ನು ಹಾಳುಮಾಡುವ ವ್ಯವಸ್ಥೆ ಎಂದು ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.

  ಕೀರ್ತಿ ರೆಡ್ಡಿ ಜೊತೆ ಸುಮಂತ್ ಮೊದಲ ಮದುವೆ

  ಕೀರ್ತಿ ರೆಡ್ಡಿ ಜೊತೆ ಸುಮಂತ್ ಮೊದಲ ಮದುವೆ

  46 ವರ್ಷದ ನಟ ಸುಮಂತ್ ಮದುವೆ ಬಗ್ಗೆ ಎಲ್ಲಿಯೂ ಬಹಿರಂಗಪಡಿಸಿಲ್ಲ. ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಮಗಳ ಮಗ ಸುಮಂತ್ ಈ ಮೊದಲು 2004ರಲ್ಲಿ ಮದುವೆಯಾಗಿದ್ದರು. ನಟಿ ಕೀರ್ತಿ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಅಂದರೆ 2006ರಲ್ಲಿ ವಿಚ್ಛೇದನ ಪಡೆದು ಇಬ್ಬರು ಬೇರೆ ಬೇರೆಯಾದರು.

  ಪವಿತ್ರಾ ಜೊತೆ ಪ್ರೀತಿಯಲ್ಲಿದ್ದ ಸುಮಂತ್

  ಪವಿತ್ರಾ ಜೊತೆ ಪ್ರೀತಿಯಲ್ಲಿದ್ದ ಸುಮಂತ್

  ಅಂದಿನಿಂದ ಒಂಟಿಯಾಗಿ ಬದುಕುತ್ತಿದ್ದ ಸುಮಂತ್ ಇದೀಗ ಮತ್ತೆ ಮದುವೆಯಾಗುತ್ತಿದ್ದಾರೆ. ಕೀರ್ತಿ ರೆಡ್ಡಿ ಆಗಲೇ ಮತ್ತೊಬ್ಬರನ್ನು ಮದುವೆಯಾಗಿ ಯುಎಸ್‌ನಲ್ಲಿ ನೆಲೆಸಿದ್ದಾರೆ. ಇದೀಗ ಪವಿತ್ರಾ ಜೊತೆ ಪ್ರೀತಿಯಲ್ಲಿದ್ದ ಸುಮಂತ್ ಮದುವೆಗೆ ಸಿದ್ಧರಾಗಿದ್ದಾರೆ.

  ಸುಮಂತ್ ಸಿನಿಮಾ ಜೀವನ

  ಸುಮಂತ್ ಸಿನಿಮಾ ಜೀವನ

  ಇನ್ನುಸುಮಂತ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸತ್ಯಂ, ಗೌರಿ, ಗೋದಾವರಿ, ಮಧುಮಾಸಮ್ ಮಲ್ಲಿ ರಾವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸುಮಂತ್ ಅನಗನಗ ಒಕ ರೌಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Telugu Director Ram Gopal Varma comments on rumours of Telugu actor Sumanth's second marriage with Pavithra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X