Don't Miss!
- News
Egg Price in Bengaluru: ಜನವರಿಯಲ್ಲೂ ಕಡಿಮೆಯಾಗದ ಬೆಲೆ: ಮೊಟ್ಟೆ ಖರೀದಿಗೆ ಗ್ರಾಹಕರ ಹಿಂದೇಟು!
- Sports
ICC ODI Team Of 2022: ಐಸಿಸಿ ವರ್ಷದ ಏಕದಿನ ತಂಡಕ್ಕೆ ಅಜಂ ನಾಯಕ; ಇಬ್ಬರು ಭಾರತೀಯರಿಗೆ ಸ್ಥಾನ
- Automobiles
ಪೆಟ್ರೋಲ್ ಕಾರಿಗೆ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ... ಕೃತಜ್ಞತೆ ಸಲ್ಲಿಸಿದ ಕಾರ್ ಮಾಲೀಕ
- Lifestyle
ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಕಾರಣವೇನು?
- Finance
10 ಗ್ರಾಂ ಚಿನ್ನದ ಬೆಲೆ 113 ರೂ, ಅಚ್ಚರಿ ಆಯ್ತ, ವೈರಲ್ ಸುದ್ದಿ ಓದಿ!
- Technology
ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯೇ?... ಹಾಗಿದ್ರೆ ಈ ವಿಷಯ ನಿಮಗೆ ಗೊತ್ತಿರಲೇಬೇಕು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೌಳಿ ಹತ್ಯೆಗೆ ಸ್ಟಾರ್ ನಿರ್ದೇಶಕರ ಸ್ಕೆಚ್? ಕುಡಿದು ಗುಟ್ಟು ಬಿಚ್ಚಿಟ್ಟ ರಾಮ್ ಗೋಪಾಲ್ ವರ್ಮಾ!
ವಿವಾದಾಸ್ಪದ ನಿರ್ದೇಶಕ ರಾಮ್‌ಗೋಲ್ ವರ್ಮಾ ಹುಚ್ಚಾಟದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ತನ್ನ ಹೇಳಿಕೆಗಳ ಮೂಲಕ ಪದೇ ಪದೇ ವಿವಾದಗಳನ್ನು ಆರ್‌ಜಿವಿ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. 'RRR' ಸಿನಿಮಾ ನೋಡಿ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಮೆಚ್ಚಿಕೊಂಡಿದ್ದಾರೆ. ರಾಜಮೌಳಿ ಜೊತೆ ಸೇರಿ ಸಿನಿಮಾ ಮಾಡೋಣ ಎಂದಿದ್ದಾರೆ. ಆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ವರ್ಮಾ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು 'RRR' ಸಿನಿಮಾ ಮುಡಿಗೇರಿಸಿಕೊಂಡಿದೆ. ಕಳೆದ ವರ್ಷ ಮಾರ್ಚ್ 25ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆಸ್ಕರ್ ರೇಸ್‌ನಲ್ಲೂ ಸಿನಿಮಾ ಇದೆ. ಇಡೀ ಸಿನಿ ಜಗತ್ತು ಮೌಳಿ ದೃಶ್ಯ ಕಾವ್ಯದ ಬಗ್ಗೆ ಮಾತನಾಡುತ್ತಿದೆ. ಜೇಮ್ಸ್ ಕ್ಯಾಮರೂನ್ ಎರಡು ಬಾರಿ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಮೌಳಿ ಕಥೆಯನ್ನು ಹೇಳಿರುವ ಪರಿಗೆ ಬೆರಗಾಗಿದ್ದಾರೆ. ಮುಕ್ತ ಕಂಠದಿಂದ ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ.
ಟಾಲಿವುಡ್
ನಂಬರ್
ಒನ್
ಸ್ಟಾರ್
ಯಾರು?
ಸಮೀಕ್ಷೆಯಲ್ಲಿ
ಶಾಕಿಂಗ್
ಸೀಕ್ರೆಟ್ಸ್
ರಿವೀಲ್!
ಪ್ರಪಂಚದ ವಿದ್ಯಮಾನದಗಳ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆರ್‌ಜಿವಿ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಒಬ್ಬ ಒಳ್ಳೆ ನಿರ್ದೇಶಕ ಯಾಕೆ ಹೀಗೆ ಸೈಲೆಂಟ್ ಆಗಿಬಿಟ್ಟರು ಎಂದು ಸಾಕಷ್ಟು ಜನ ಕೇಳುತ್ತಿದ್ದಾರೆ.
|
ಯಾರಿಗೂ ಸಿಗದ ಗೌರವ
ಸದ್ಯ ಜೇಮ್ಸ್ ಕ್ಯಾಮರೂನ್ 'RRR' ಸಿನಿಮಾ ವೀಕ್ಷಿಸಿ, ಮೌಳಿಯನ್ನು ಕೊಂಡಾಡಿರುವ ವಿಚಾರದ ಬಗ್ಗೆ ವರ್ಮಾ ಟ್ವೀಟ್ ಮಾಡಿದ್ದಾರೆ. "ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ರಾಜಮೌಳಿ ಕೂಡ ಸೇರಿದಂತೆ ಇಲ್ಲಿಯವರೆಗೂ ಯಾರೊಬ್ಬರು ಕೂಡ ಭಾರತದ ಸಿನಿಮಾ ನಿರ್ದೇಶಕನೊಬ್ಬ ಈ ಸ್ಥಾನಕ್ಕೆ ಏರುತ್ತಾನೆ ಎಂದುಕೊಂಡಿರಲಿಲ್ಲ" ಎಂದಿದ್ದಾರೆ.

ನಿಮ್ಮ ಕಾಲಿನ ಕಿರು ಬೆರಳು ಚೀಪಬೇಕು
"ಹೇ, ರಾಜಮೌಳಿ 'ಮೊಘಲ್ ಏ ಆಜಂ' ಸಿನಿಮಾ ಮಾಡಿದ ಕಾಆಸಿಫ್‌ನಿಂದ 'ಶೋಲೆ' ಸಿನಿಮಾ ತೆಗೆದ ರಮೇಶ್ ಸಿಪ್ಪಿಯಿಂದ ಆದಿತ್ಯ ಚೋಪ್ರಾ, ಕರಣ್ ಜೋಹಾರ್, ಭನ್ಸಾಲಿ ಸೇರಿದಂತೆ ಎಲ್ಲರನ್ನು ನೀವು ಮೀರಿಸಿದ್ದೀರಾ. ಅದಕ್ಕೆ ನಿಮ್ಮ ಕಾಲಿನ ಕಿರು ಬೆರಳನ್ನು ಚೀಪಬೇಕು ಎಂದುಕೊಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ರಾಜಮೌಳಿ ಹತ್ಯೆಗೆ ಸ್ಕೆಚ್?
ಮತ್ತೊಂದು ಟ್ವೀಟ್‌ನಲ್ಲಿ.."ರಾಜಮೌಳಿ ಸರ್, ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ಏಕೆಂದರೆ ಭಾರತದಲ್ಲಿ ಬಹಳ ಮಂದಿ ಫಿಲ್ಮ್ ಮೇಕರ್ಸ್ ನಿಮ್ಮ ಮೇಲೆ ಅಸೂಯೆಯಿಂದ ಇದ್ದಾರೆ. ನಿಮ್ಮನ್ನು ಕೊಲ್ಲಲು ಒಂದು ಗ್ರೂಪ್ ಮಾಡಿದ್ದಾರೆ. ಅದರಲ್ಲಿ ನಾನು ಕೂಡ ಇದ್ದೀನಿ. ನಾನು ನಾಲ್ಕು ಪೆಗ್ ಹಾಕಿದ್ದೇನೆ, ಅದಕ್ಕೆ ಈ ರಹಸ್ಯವನ್ನು ಹೊರಗೆ ಹಾಕುತ್ತಿದ್ದೇನೆ" ಎಂದು ವರ್ಮಾ ತಮ್ಮದೇ ಸ್ಟೈಲ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಆಸ್ಕರ್ ರೇಸ್‌ನಲ್ಲಿ ಮೌಳಿ 'RRR'
ಇಂದು ಆಸ್ಕರ್ ನಾಮಿನೇಷನ್ ಪ್ರಕಟವಾಗುತ್ತಿದೆ. ಎಲ್ಲರು ಕಣ್ಣು ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಮೇಲಿದೆ. ಆಸ್ಕರ್ ಅಕಾಡೆಮಿ ಪ್ರಕಟಿಸುವ ಸಿನಿಮಾಗಳ ಪಟ್ಟಿ ಬಗ್ಗೆ ಭಾರತೀಯ ಸಿನಿರಸಿಕರು ಕುತೂಲದಿಂದ ಕಾಯುತ್ತಿದ್ದಾರೆ. ಮೌಳಿ ದೃಶ್ಯಕಾವ್ಯದ ಜೊತೆಗೆ ಭಾರತೀಯ ಚಿತ್ರರಂಗದ 10 ಸಿನಿಮಾಗಳ ಶಾರ್ಟ್ ಲಿಸ್ಟ್ ಸಿದ್ಧವಾಗಿದೆ. ಈ ಪಟ್ಟಿಯಲ್ಲಿ 'ಕಾಂತಾರ', 'ಕಾಶ್ಮೀರ್ ಫೈಲ್ಸ್', 'ಗಂಗೂಬಾಯಿ ಕಥಿಯವಾಡಿ' ಸಿನಿಮಾಗಳು ಇವೆ.