For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಬಗ್ಗೆ ಅಚ್ಚರಿ ಟ್ವೀಟ್, ಆಮೇಲೆ ಡಿಲೀಟ್: ವರ್ಮಾ ವಿರುದ್ಧ ಮೆಗಾ ಫ್ಯಾನ್ಸ್ ಆಕ್ರೋಶ

  |

  ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಂಲ್ಲೋ' ಸಿನಿಮಾ ಸೂಪರ್ ಹಿಟ್ ಆಗಿದ್ದು, 200 ಕೋಟಿ ಗಳಿಕೆಯತ್ತ ಹೆಜ್ಜೆಯಿಟ್ಟಿದೆ. ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಚಿತ್ರಗಳ ಬಾಕ್ಸ್ ಆಫೀಸ್ ವಾರ್, ಫ್ಯಾನ್ಸ್ ವಾರ್ ಜೋರಾಗಿರುವ ಸಂದರ್ಭದಲ್ಲಿ ವರ್ಮಾ ಮಧ್ಯ ಪ್ರವೇಶಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

  ನಿಖಿಲ್ ಮದುವೆಯಾಗೋ ಹುಡುಗಿ ತುಂಬಾ ಸಿಂಪಲ್ ಅಂತೆ | Nikhil Kumarswamy | Marriage | Filmibeat Kannda

  ಅಲ್ಲು ಅರ್ಜುನ್ ಕುರಿತು ಹೊಗಳುವ ಭರದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಡವಟ್ಟು ಮಾಡಿಕೊಂಡಿದ್ದಾರೆ. ಸ್ಟೈಲಿಶ್ ಸ್ಟಾರ್ ಸಕ್ಸಸ್ ಮೆಚ್ಚಿ ಟ್ವೀಟ್ ಮಾಡಿದ್ದ ಆರ್ ಜಿ ವಿ, ಪರೋಕ್ಷವಾಗಿ ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಅವರನ್ನು ಹೀಯಾಳಿಸಿದ್ದಾರೆ.

  ಅಲ್ಲು ಎದುರಲ್ಲಿ ತಮನ್ 'ಫೇಕ್ ಕಲೆಕ್ಷನ್' ಹೇಳಿಕೆ: ಮಹೇಶ್ ಬಾಬು ಫ್ಯಾನ್ಸ್ ಗರಂಅಲ್ಲು ಎದುರಲ್ಲಿ ತಮನ್ 'ಫೇಕ್ ಕಲೆಕ್ಷನ್' ಹೇಳಿಕೆ: ಮಹೇಶ್ ಬಾಬು ಫ್ಯಾನ್ಸ್ ಗರಂ

  ಇದು ಸಹಜವಾಗಿ ಮೆಗಾಸ್ಟಾರ್ ಅಭಿಮಾನಿಗಳನ್ನು ಕೆರಳಿಸಿದೆ. ಧೈರ್ಯವಾಗಿ, ನೇರವಾಗಿ ತಮಗನಿಸಿದ್ದನ್ನ ಹೇಳುವ ವರ್ಮಾ, ಈ ಸಲ ಆ ಟ್ವೀಟ್ ಡಿಲೀಟ್ ಮಾಡಿ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದಾರೆ. ಅಷ್ಟಕ್ಕೂ, ವರ್ಮಾ ಮಾಡಿದ್ದ ಆ ಟ್ವೀಟ್ ನಲ್ಲಿ ಏನಿತ್ತು? ಮುಂದೆ ಓದಿ....

  ಅಲ್ಲು ಅರ್ಜುನ್ ನಿಜವಾದ ಮೆಗಾಸ್ಟಾರ್

  ಅಲ್ಲು ಅರ್ಜುನ್ ನಿಜವಾದ ಮೆಗಾಸ್ಟಾರ್

  ಟಾಲಿವುಡ್ ಇಂಡಸ್ಟ್ರಿಯಲ್ಲಿ ಚಿರಂಜೀವಿ ಅವರನ್ನು ಮೆಗಾಸ್ಟಾರ್ ಎಂದು ಕರೆಯುತ್ತಾರೆ. ಟಾಲಿವುಡ್ ಗೆ ಮಾತ್ರವಲ್ಲ, ಬೇರೆ ಇಂಡಸ್ಟ್ರಿಗೂ ಇದು ಗೊತ್ತಿದೆ. ಆದರೆ, ರಾಮ್ ಗೋಪಾಲ್ ಮಾಡಿದ್ದ ಟ್ವೀಟ್ ನಲ್ಲಿ ''ಅಲ್ಲು ಅರ್ಜುನ್ ನಿಜವಾದ ಮೆಗಾಸ್ಟಾರ್'' ಎಂದಿದ್ದರು. ಇದು ಚಿರಂಜೀವಿ ಅಭಿಮಾನಿಗಳು ಕೆಂಗಣ್ಣಿಗೆ ಗುರಿಯಾಗಿದೆ.

  ನೀಲಿತಾರೆಯ ಅರೆನಗ್ನ ಫೋಟೋ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾನೀಲಿತಾರೆಯ ಅರೆನಗ್ನ ಫೋಟೋ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ

  ಅಲ್ಲು ರಾಮಲಿಂಗಯ್ಯನಿಗೆ ನಿಜವಾದ ವಾರಸ್ದಾರ

  ಅಲ್ಲು ರಾಮಲಿಂಗಯ್ಯನಿಗೆ ನಿಜವಾದ ವಾರಸ್ದಾರ

  ತೆಲುಗು ದಿಗ್ಗಜ ನಟ ಅಲ್ಲು ರಾಮಲಿಂಗಯ್ಯ ಮಗಳನ್ನು ಮದುವೆಯಾಗಿರುವ ಚಿರಂಜೀವಿ ತೆಲುಗು ಇಂಡಸ್ಟ್ರಿಯಲ್ಲಿ ದೊಡ್ಡ ಸ್ಥಾನ ಪಡೆದುಕೊಂಡರು. ಆದರೆ, ರಾಮ್ ಗೋಪಾಲ್ ವರ್ಮಾ ಈ ವಿಚಾರದಲ್ಲೂ ಚಿರಂಜೀವಿಗೆ ಟಾಂಗ್ ಕೊಟ್ಟಿದ್ದಾರೆ. ''ಅಲ್ಲು ರಾಮಲಿಂಗಯ್ಯನಿಗೆ ನಿಜವಾದ ವಾರಸ್ದಾರ ನಾನೆ ಎಂದು ಅಲ್ಲು ಅರ್ಜುನ್ ಸಾಧಿಸಿದ್ದಾರೆ'' ಎಂದು ಅದೇ ಟ್ವೀಟ್ ನಲ್ಲಿ ಹೇಳಿದ್ದಾರೆ. ಅಂದ್ಹಾಗೆ, ಅಲ್ಲು ರಾಮಲಿಂಗಯ್ಯ ಅವರ ಮೊಮ್ಮಗ ಅಲ್ಲು ಅರ್ಜುನ್ (ಅಲ್ಲು ರಾಮಲಿಂಗಯ್ಯನ ಮಗ ಅಲ್ಲು ಅರವಿಂದ್-ಅಲ್ಲು ಅರ್ಜುನ್ ಅವರ ತಂದೆ).

  ಇನ್ನು ಮುಂದೆ ಮೆಗಾಪವರ್ ಸ್ಟಾರ್!

  ಇನ್ನು ಮುಂದೆ ಮೆಗಾಪವರ್ ಸ್ಟಾರ್!

  ಚಿರಂಜೀವಿಗೆ ಮಾತ್ರವಲ್ಲ, ಚಿರು ಪತ್ರ ರಾಮ್ ಚರಣ್ ಗೂ ವರ್ಮಾ ಕಾಲೆಳೆದಿದ್ದಾರೆ. ಟಾಲಿವುಡ್ ಇಂಡಸ್ಟ್ರಿಯಲ್ಲಿ ಚಿರಂಜೀವಿ ಮಗನಿಗೆ ಮೆಗಾ ಪವರ್ ಸ್ಟಾರ್ ಎಂದು ಕರೆಯಲಾಗುತ್ತೆ. ಆದ್ರೀಗ, ಅಲ್ಲು ಅರ್ಜುನ್ ಅವರಿಗೆ ರಾಮ್ ಗೋಪಾಲ್ ವರ್ಮಾ ''ನೀನೇ ನಿಜವಾದ ಮೆಗಾ ಪವರ್ ಸ್ಟಾರ್'' ಎಂದಿದ್ದಾರೆ.

  ಈ ನಟಿ ಮೊಬೈಲ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದರಂತೆ ವರ್ಮಾಈ ನಟಿ ಮೊಬೈಲ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದರಂತೆ ವರ್ಮಾ

  ಚಿರಂಜೀವಿ ಅಂದ್ರೆ ವರ್ಮಾಗೆ ಅಷ್ಟಕ್ಕಷ್ಟೇ!

  ಚಿರಂಜೀವಿ ಅಂದ್ರೆ ವರ್ಮಾಗೆ ಅಷ್ಟಕ್ಕಷ್ಟೇ!

  ಮೆಗಾಸ್ಟಾರ್ ಕುಟುಂಬ ಅಂದ್ರೆ ರಾಮ್ ಗೋಪಾಲ್ ವರ್ಮಾಗೆ ಅಷ್ಟಕ್ಕಷ್ಟೆ. ಈ ಹಿಂದೆಯೇ ಹಲವು ಸಲ ಪವನ್ ಕಲ್ಯಾಣ್ ವಿಚಾರದಲ್ಲಿ ಆರ್ ಜಿ ಜಿ ಕಾಲೆಳೆದಿದ್ದಾರೆ. ಚಿರಂಜೀವಿ ಕುರಿತು ಕೂಡ ಕಾಮೆಂಟ್ ಮಾಡಿದ್ದಾರೆ. ಬಹುಶಃ, ಇದರ ಮುಂದುವರೆದ ಭಾಗವೆಂಬಂತೆ ಈಗ ಅಲ್ಲು ಅರ್ಜುನ್ ಅವರನ್ನು ಹೊಗಳುವ ಭರದಲ್ಲಿ ಮೆಗಾಫ್ಯಾಮಿಲಿ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

  ರಾಮ್ ಗೋಪಾಲ್ ವರ್ಮಾ ಮುಂದಿನ ಸಿನಿಮಾದಲ್ಲಿ 'ಮೆಗಾಸ್ಟಾರ್' ಟಾರ್ಗೆಟ್!ರಾಮ್ ಗೋಪಾಲ್ ವರ್ಮಾ ಮುಂದಿನ ಸಿನಿಮಾದಲ್ಲಿ 'ಮೆಗಾಸ್ಟಾರ್' ಟಾರ್ಗೆಟ್!

  ಮೆಗಾಸ್ಟಾರ್ ಸಿನಿಮಾ ಘೋಷಿಸಿದ್ದ ವರ್ಮಾ

  ಮೆಗಾಸ್ಟಾರ್ ಸಿನಿಮಾ ಘೋಷಿಸಿದ್ದ ವರ್ಮಾ

  ಲಕ್ಷ್ಮೀಸ್ ಎನ್ ಟಿ ಆರ್, ಅಮ್ಮ ರಾಜ್ಯಂಲ್ಲೊ ಕಡಪ ಬಿಡ್ಡಲು ಸಿನಿಮಾ ಮೂಲಕ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಟಾರ್ಗೆಟ್ ಮಾಡಿದ್ದರು. ಅದಾದ ಬಳಿಕ, ಮೆಗಾಫ್ಯಾಮಿಲಿ ಸಿನಿಮಾ ಮಾಡುವುದಾಗಿ ಘೋಷಿಸಿದರು. ಈ ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ ಚಿರು ಅಭಿಮಾನಿಗಳು ವರ್ಮಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದರು. ಆಮೇಲೆ ನಾನು ಸಿನಿಮಾ ಮಾಡಲ್ಲ ಎಂದು ಕೈಬಿಟ್ಟಿದ್ದರು. ಇದೀಗ, ಮತ್ತೆ ಚಿರು ಫ್ಯಾಮಿಲಿ ಟಾರ್ಗೆಟ್ ಮಾಡಿರುವುದು ಚರ್ಚೆ ಹುಟ್ಟುಹಾಕಿದೆ.

  English summary
  Telugu actor Chiranjeevi and Ram charan fans are angry on controvaersial director ram gopal varma. becuse RGV insulted megastar fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X