For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ರಮ್ಯಾಕೃಷ್ಣ

  |

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೋಲ್ಡ್ ಪಾತ್ರಗಳಿಗೆ ಮತ್ತೊಂದು ಹೆಸರು ರಮ್ಯಾಕೃಷ್ಣ ಅವರದು. 49ರ ಹರೆಯದ ರಮ್ಯಾ ಕೃಷ್ಣ ನವ ನಟಿಯರು ನಾಚಿಸುವಷ್ಟು ಮೋಹಕವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಅವರೀಗ ಮತ್ತೊಂದು ಬೋಲ್ಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಹಿಂದಿಯಲ್ಲಿ ಸೂಪರ್ ಹಿಟ್ ಆಗಿದ್ದ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ್ದ 'ಅಂಧಾಧುನ್' ಚಿತ್ರದ ತೆಲುಗು ರೀಮೇಕ್‌ನಲ್ಲಿ ರಮ್ಯಾ ಕೃಷ್ಣ, ಟಬು ನಿರ್ವಹಿಸಿದ್ದ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. 2018ರಲ್ಲಿ ತೆರೆಕಂಡಿದ್ದ 'ಅಂಧಾಧುನ್' ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಮತ್ತು ರಾಧಿಕಾ ಆಪ್ಟೆ ಮುಖ್ಯಪಾತ್ರಗಳಲ್ಲಿ ನಟಿಸಿದ್ದರೂ, ಗಮನ ಸೆಳೆದಿದ್ದು ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದ ಟಬು ಪಾತ್ರ. ಅದೇ ಪಾತ್ರವನ್ನು ರಮ್ಯಾಕೃಷ್ಣ ತೆಲುಗಿನಲ್ಲಿ ನಿರ್ವಹಿಸಲಿದ್ದಾರಂತೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬೋಲ್ಡ್ ಪಾತ್ರಗಳಿಗೆ ಹೆಸರಾಗಿರುವ ರಮ್ಯಾಕೃಷ್ಣ ಈ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕುತೂಹಲ ಮೂಡಿಸಿದೆ. ಮುಂದೆ ಓದಿ...

  ರಮ್ಯಾಕೃಷ್ಣ ಜತೆ ಮಾತುಕತೆ

  ರಮ್ಯಾಕೃಷ್ಣ ಜತೆ ಮಾತುಕತೆ

  ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದ 'ಅಂಧಾಧುನ್' ಚಿತ್ರದ ತೆಲುಗು ಅವತರಣಿಕೆಯ ಈ ಬೋಲ್ಡ್ ಪಾತ್ರದಲ್ಲಿ ರಮ್ಯಾಕೃಷ್ಣ ಅವರೇ ನಟಿಸಬೇಕು ಎನ್ನುವುದು ನಿರ್ದೇಶಕರ ಅಭಿಲಾಷೆಯಾಗಿತ್ತು. ಅದರಂತೆ ಅವರು ರಮ್ಯಾಕೃಷ್ಣ ಜತೆ ಮಾತುಕತೆ ನಡೆಸಿ ಅವರ ಡೇಟ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ.

  ಸಂಭಾವನೆ ವಿಚಾರಕ್ಕೆ 'ಕೆಜಿಎಫ್ 2' ತಿರಸ್ಕರಿಸಿದ್ದ ಖ್ಯಾತ ನಟಿಸಂಭಾವನೆ ವಿಚಾರಕ್ಕೆ 'ಕೆಜಿಎಫ್ 2' ತಿರಸ್ಕರಿಸಿದ್ದ ಖ್ಯಾತ ನಟಿ

  ನಾಯಕ ನಿತಿನ್ ಬ್ಯಾನರ್ ಸಿನಿಮಾ

  ನಾಯಕ ನಿತಿನ್ ಬ್ಯಾನರ್ ಸಿನಿಮಾ

  ತೆಲುಗಿನ ರೀಮೇಕ್‌ಗೆ ಇನ್ನೂ ಹೆಸರಿಟ್ಟಿಲ್ಲ. 'ವೆಂಕಟಾದ್ರಿ ಎಕ್ಸ್‌ಪ್ರೆಸ್', 'ಎಕ್ಸ್‌ಪ್ರೆಸ್ ರಾಜ', 'ಕೃಷ್ಣಾರ್ಜುನ ಯುದ್ಧಂ' ಸಿನಿಮಾಗಳನ್ನು ನಿರ್ದೇಶಿಸಿರುವ ಮೆರ್ಲಪಾಕ ಗಾಂಧಿ, ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆಯುಷ್ಮಾನ್ ಖುರಾನಾ ಪಾತ್ರವಲ್ಲಿ ನಿತಿನ್ ನಿಭಾಯಿಸಲಿದ್ದಾರೆ. ಚಿತ್ರಕ್ಕೆ ಅವರೇ ಬಂಡವಾಳವನ್ನೂ ಹೂಡುತ್ತಿದ್ದಾರೆ.

  ಮಧ್ಯವಯಸ್ಕ ಮಹಿಳೆಯ ಅಫೇರ್

  ಮಧ್ಯವಯಸ್ಕ ಮಹಿಳೆಯ ಅಫೇರ್

  ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಅಂಧಾಧುನ್ ಒಳಗೊಂಡಿದೆ. ಪರಪುರಷನ ಜತೆಗೆ ಸಂಬಂಧ ಹೊಂದಿರುವ ಮಧ್ಯವಯಸ್ಸಿನ ಮಹಿಳೆಯ ಪಾತ್ರದಲ್ಲಿ ಟಬು ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕೆ ರಮ್ಯಾಕೃಷ್ಣ ಅವರೇ ಸೂಕ್ತ ಎಂದು ಚಿತ್ರತಂಡ ತೀರ್ಮಾನಿಸಿದೆ. ಇಂಥದ್ದೇ ಪಾತ್ರವಿರುವ ಕನ್ನಡದ 'ಬಾ ಬಾರೋ ರಸಿಕ' ಚಿತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದರು.

  ರಮ್ಯಾಕೃಷ್ಣನ್ ಮಾಡಿದ್ದ ಆ ಪಾತ್ರದಂತಿರಬೇಕಂತೆ ಪ್ರಿಯಾಮಣಿ ಕನಸಿನ ಪಾತ್ರ!ರಮ್ಯಾಕೃಷ್ಣನ್ ಮಾಡಿದ್ದ ಆ ಪಾತ್ರದಂತಿರಬೇಕಂತೆ ಪ್ರಿಯಾಮಣಿ ಕನಸಿನ ಪಾತ್ರ!

  ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಸಿನಿಮಾ

  ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಸಿನಿಮಾ

  ಅಂಧಾಧುನ್ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಸಿನಿಮಾ. ಆಯುಷ್ಮಾನ್ ಖುರಾನಾ ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಅತ್ಯುತ್ತಮ ಹಿಂದಿ ಚಿತ್ರ ಮತ್ತು ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್ ಪ್ಲೇ ವಿಭಾಗಗಳಲ್ಲಿಯೂ ರಾಷ್ಟ್ರಪ್ರಶಸ್ತಿ ದೊರಕಿತ್ತು. ಫಿಲ್ಮ್‌ಫೇರ್‌ನಲ್ಲಿ ಕೂಡ ನಾಲ್ಕು ಪ್ರಶಸ್ತಿಗಳು ಒಲಿದಿದ್ದವು.

  ಸ್ಟಾರ್ ನಟರಿಗಿಂತ ಹೆಚ್ಚಿದೆ 'ಅಮ್ಮ'ನ ಪಾತ್ರ ಮಾಡುವ ಇವರ ಸಂಭಾವನೆ!ಸ್ಟಾರ್ ನಟರಿಗಿಂತ ಹೆಚ್ಚಿದೆ 'ಅಮ್ಮ'ನ ಪಾತ್ರ ಮಾಡುವ ಇವರ ಸಂಭಾವನೆ!

  English summary
  Actress Ramya Krishan to play a bold role in the Telugu remake of Hindi hit movie Andhadhun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X