For Quick Alerts
  ALLOW NOTIFICATIONS  
  For Daily Alerts

  ViRash : ಪ್ರನುಷ್ಕಾ, ವಿರುಷ್ಕಾ, ರಲಿಯಾ ಆಯ್ತು: ಈಗ ರಶ್ಮಿಕಾ, ವಿಜಯ್‌ಗೂ ಫ್ಯಾನ್ಸ್ ಇಟ್ರು ನಿಕ್‌ನೇಮ್

  |

  ತಾರಾ ಜೋಡಿಗಳಿಗೆ ಅಭಿಮಾನಿಗಳು ನೆಕ್‌ನೇಮ್ ಇಟ್ಟು ಖುಷಿಪಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಬ್ಬರ ಟಾಪಿಕ್ ಬಂದ್ರೆ, ಇದೇ ಹೆಸರು ಹೆಚ್ಚು ಸದ್ದು ಮಾಡುತ್ತದೆ. ಇದೀಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿಗೂ ಅಭಿಮಾನಿಗಳು ಪ್ರೀತಿಯಿಂದ ಹೊಸ ಹೆಸರಿಟ್ಟು ಕರೀತಿದ್ದಾರೆ.

  ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಬಗ್ಗೆ ಗುಸುಗುಸು ಕೇಳಿಬರ್ತಾನೆ ಇರುತ್ತದೆ. ಇಬ್ಬರು ಇತ್ತೀಚೆಗೆ ವಿದೇಶದಲ್ಲಿ ಒಟ್ಟಿಗೆ ಹೊಸ ವರ್ಷ ಸ್ವಾಗತಿಸಿದರು ಎಂದು ಕೂಡ ಹೇಳಲಾಗಿತ್ತು. ಇನ್ನು ಮೊನ್ನೆ ರಶ್ಮಿಕಾ ಅಭಿಮಾನಿಗಳ ಜೊತೆ ಇನ್‌ಸ್ಟಾ ಲೈವ್ ಬಂದಾಗ ವಿಜಯ್ ದೇವರಕೊಂಡ ಧ್ವನಿ ಕೂಡ ಕೇಳಿಸಿತ್ತು. ಅದರ ಅರ್ಥ ಇಬ್ಬರು ಒಟ್ಟಿಗೆ ಇದ್ದಾರೆ ಅಂತೆಲ್ಲಾ ಗುಸುಗುಸು ಶುರುವಾಗಿದೆ. 'ಗೀತಾಗೋವಿಂದಂ', 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ಜೋಡಿ ಒಟ್ಟಿಗೆ ನಟಿಸಿತ್ತು.

  ದಕ್ಷಿಣ ಭಾರತದ ಮತ್ತೊಂದು ತಾರಾ ಜೋಡಿಯ ಡಿವೋರ್ಸ್? ಕೊನೆಗೂ ಮೌನ ಮುರಿದ ನಟಿ ಸ್ನೇಹಾ!ದಕ್ಷಿಣ ಭಾರತದ ಮತ್ತೊಂದು ತಾರಾ ಜೋಡಿಯ ಡಿವೋರ್ಸ್? ಕೊನೆಗೂ ಮೌನ ಮುರಿದ ನಟಿ ಸ್ನೇಹಾ!

  ಇವರಿಬ್ಬರು ಬರೀ ಸ್ನೇಹಿತರಲ್ಲ. ಅದಕ್ಕಿಂತ ಮೇಲೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅವರು ಮಾತ್ರ "ನಾವು ಬೆಸ್ಟ್ ಫ್ರೆಂಡ್ಸ್ ಅಷ್ಟೇ" ಎನ್ನುವ ಅದೇ ರೆಡಿಮೇಡ್ ಉತ್ತರ ಕೊಡುತ್ತಾ ಬರ್ತಿದ್ದಾರೆ.

  ಜೋಡಿಗೆ ಫ್ಯಾನ್ಸ್ ನಿಕ್‌ ನೇಮ್

  ಜೋಡಿಗೆ ಫ್ಯಾನ್ಸ್ ನಿಕ್‌ ನೇಮ್

  ಪ್ರೀತಿಲಿ ಬಿದ್ದ, ಮದುವೆ ಆದ ತಾರಾ ಜೋಡಿಗೆ ಅಭಿಮಾನಿಗಳು ನಿಕ್ ನೇಮ್ ಇಡುವುದು ವಾಡಿಕೆ ಆಗಿಬಿಟ್ಟಿದೆ. ಇಬ್ಬರ ಹೆಸರಿನ ಅಕ್ಷರಗಳನ್ನು ಸೇರಿಸಿ ಹೊಸದೊಂದು ಹೆಸರನ್ನು ನಾಮಕರಣ ಮಾಡಿಬಿಡುತ್ತಾರೆ. ಇದೀಗ ಅದೇ ರೀತಿ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಇಬ್ಬರನ್ನು 'ವಿರಷ್' (ViRash) ಎಂದು ಕರೆಯಲು ಆರಂಭಿಸಿದ್ದಾರೆ. ಇತ್ತೀಚೆಗೆ ಈ ಜೋಡಿಗೆ ಸಂಬಂಧಿಸಿದ ಪೋಸ್ಟ್‌ಗಳಲ್ಲಿ 'ವಿರಷ್' ಎನ್ನುವ ಟ್ಯಾಗ್ ಕಾಮನ್ ಆಗಿಬಿಟ್ಟಿದೆ.

  ಪ್ರಭಾಸ್- ಅನುಷ್ಕಾ= ಪ್ರನುಷ್ಕಾ

  ಪ್ರಭಾಸ್- ಅನುಷ್ಕಾ= ಪ್ರನುಷ್ಕಾ

  ಬಾಹುಬಲಿ ಪ್ರಭಾಸ್ ಹಾಗೂ ಸ್ವೀಟಿ ಅನುಷ್ಕಾ ಶೆಟ್ಟಿ ಲವ್ ಮಾಡುತ್ತಿದ್ದಾರೆ. ಇಬ್ಬರು ಮದುವೆ ಆಗುತ್ತಾರೆ ಅಂತೆಲ್ಲಾ ಬಹಳ ದಿನಗಳಿಂದ ಚರ್ಚೆ ನಡೀತಿದೆ. ಆದರೆ ಅವರಿಬ್ಬರು ಮಾತ್ರ ನಾವು ಒಳ್ಳೆ ಫ್ರೆಂಡ್ಸ್ ಅಷ್ಟೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಸಾಕಷ್ಟು ಅಭಿಮಾನಿಗಳು ಇವರಿಬ್ಬರು ಮದುವೆ ಆಗಬೇಕು ಎಂದು ಆಶಿಸುತ್ತಿದ್ದಾರೆ. ಈ ಜೋಡಿಯನ್ನು ಮುದ್ದಾಗಿ ಪ್ರನುಷ್ಕಾ ಎಂದು ಕರೆಯುತ್ತಾರೆ. 'ಬಿಲ್ಲಾ', 'ಮಿರ್ಚಿ' ಹಾಗೂ 'ಬಾಹುಬಲಿ' ಸಿನಿಮಾಗಳಲ್ಲೊ ಇಬ್ಬರು ಒಟ್ಟಿಗೆ ನಟಿಸಿ ಮೋಡಿ ಮಾಡಿದ್ದರು.

  'ವಿರುಷ್ಕಾ' ಫುಲ್ ಫೇಮಸ್

  'ವಿರುಷ್ಕಾ' ಫುಲ್ ಫೇಮಸ್

  ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪರಸ್ಪರ ಪ್ರೀತಿಸಿ ಹಸೆಮಣೆ ಏರಿದ್ದು ಗೊತ್ತೇತಿದೆ. 2013ರಲ್ಲಿ ಜಾಹಿರಾತುವೊಂದರ ಚಿತ್ರೀಕರಣದ ವೇಳೆ ಇಬ್ಬರ ನಟುವೆ ಪರಿಚಯ ಏರ್ಪಟ್ಟಿತ್ತು. ಅದು ಮುಂದೆ ಸ್ನೇಹಕ್ಕೆ ನಂತರ ಪ್ರೀತಿಗೆ ತಿರುಗಿ 2017ರಲ್ಲಿ ಜೋಡಿ ಮದುವೆ ಆಗಿದ್ದರು. ತಮ್ಮಿಬ್ಬರ ಹೆಸರುಗಳ ಅಕ್ಷರಗಳನ್ನು ಸೇರಿಸಿ, ಮಗಳಿಗೆ ವಾಮಿಕಾ ಎಂದು ದಂಪತಿ ನಾಮಕರಣ ಮಾಡಿದೆ. ವಾಮಿಕಾ ಎಂದರೆ ದುರ್ಗಾ ದೇವಿ ಎನ್ನುವ ಅರ್ಥ ಇದೆ.

  'ರಲಿಯಾ' ಲವ್‌ಸ್ಟೋರಿ

  'ರಲಿಯಾ' ಲವ್‌ಸ್ಟೋರಿ

  'ಬ್ರಹ್ಮಾಸ್ತ್ರ' ಸಿನಿಮಾ ಶೂಟಿಂಗ್ ಸಮಯದಲ್ಲಿ ನಟ ರಣ್‌ಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಪ್ರೇಮಪಾಶಕ್ಕೆ ಸಿಲುಕಿದ್ದರು. ಇಬ್ಬರು ಪೋಷಕರ ಒಪ್ಪಿಗೆ ಪಡೆದು ಕಳೆದ ವರ್ಷ ಹೊಸಬಾಳಿಗೆ ಕಾಲಿಟ್ಟಿದ್ದರು. ನವೆಂಬರ್‌ನಲ್ಲಿ ಆಲಿಯಾ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ 'ರಾಹಾ' ಎಂದು ಹೆಸರಿಟ್ಟಿದ್ದಾರೆ. ಇನ್ನು ಈ ಜೋಡಿಯನ್ನು ಅಭಿಮಾನಿಗಳು 'ರ‌ಲಿಯಾ' ಎಂದೇ ಕರೆಯುತ್ತಾರೆ. ಇನ್ನು ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಜೋಡಿಗೆ 'ವಿಕ್ಕಾಟ್' ಎನ್ನುವ ಹೆಸರಿಟ್ಟಿದ್ದಾರೆ. ಇನ್ನು ದೀಪಿಕಾ- ರಣ್ವೀರ್‌ ಜೋಡಿಗೆ ದೀಪ್‌ವೀರ್, ಕರೀನಾ, ಸೈಫ್‌ಗೆ ಸೈಫೀನಾ ಎನ್ನುವ ನೆಕ್‌ನೇಮ್ ಸಿಕ್ಕಿದೆ.

  English summary
  Rashmika Manadanna And Vijay Devarakonda become ViRash for fans. Vijay Deverakonda is rumoured to be dating Kannada Actress Rashmika Mandanna. know more.
  Friday, January 6, 2023, 17:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X