For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ನಾಯಿಯಿಂದ ನಿರ್ಮಾಪಕರಿಗೆ ಸಂಕಷ್ಟ, ವಿಷ್ಯ ಕೇಳಿ ರಶ್ಮಿಕಾ ನಕ್ಕಿದ್ದು ಯಾಕೆ?

  |

  ನಟಿ ರಶ್ಮಿಕಾ ಮಂದಣ್ಣ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ರಶ್ಮಿಕಾ ವಿಜಯ್ ಜೊತೆಗೆ ಅಭಿನಯಿಸುತ್ತಿರುವ 'ವಾರಿಸು' ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ವೈಯಕ್ತಿಕ ವಿಚಾರಕ್ಕೂ ಹಲವು ಬಾರಿ ಸುದ್ದಿಯಾಗುತ್ತಾರೆ.

  ಕನ್ನಡದಲ್ಲಿ '777 ಚಾರ್ಲಿ' ಸಿನಿಮಾ ರಿಲೀಸ್ ಆದ ಸಮಯದಲ್ಲಿ ರಶ್ಮಿಕಾಳನ್ನು ಮತ್ತೆ ಟ್ರೋಲ್ ಮಾಡಲಾಗಿತ್ತು. ಈಗ ಮತ್ಯಾವ ವೈಯಕ್ತಿಕ ವಿಚಾರಕ್ಕೆ ರಶ್ಮಿಕಾ ಸುದ್ದಿಯಾಗಿದ್ದಾರೆ ಅಂತ ನೋಡಿದರೆ, ಅದು ಮತ್ತೇನು ಅಲ್ಲ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ನಾಯಿಯ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

  ಸಲ್ಮಾನ್ ಖಾನ್‌ ಚಿತ್ರಕ್ಕಾಗಿ ಸಮಂತಾ, ರಶ್ಮಿಕಾ ಪೈಪೋಟಿ!ಸಲ್ಮಾನ್ ಖಾನ್‌ ಚಿತ್ರಕ್ಕಾಗಿ ಸಮಂತಾ, ರಶ್ಮಿಕಾ ಪೈಪೋಟಿ!

  ಹೌದು ರಶ್ಮಿಕಾ ಮಂದಣ್ಣ ಕೆಲವು ದಿನಗಳ ಹಿಂದೆ ಮುದ್ದಾದ ನಾಯಿಯೊಂದನ್ನು ಅಡಾಪ್ಟ್ ಮಾಡಿಕೊಂಡಿದ್ದಾರೆ. ಆ ನಾಯಿಯ ಹೆಸರು ಔರಾ ಎಂದು ಕೂಡ ಎಲ್ಲರಿಗೂ ರಶ್ಮಿಕಾ ತಿಳಿಸಿದ್ದಾರೆ. ಫೋಟೋ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿದ್ದಾರೆ. ಇದೀಗ ಔರಾ ವಿಚಾರಕ್ಕೆ ರಶ್ಮಿಕಾ ಮಂದಣ್ಣ ಸುದ್ದಿಯಾಗಿದ್ದಾರೆ.

  'ಪುಷ್ಪ 2'ನಲ್ಲಿ ರಶ್ಮಿಕಾ ಪಾತ್ರಕ್ಕೆ ಕತ್ತರಿ? ನಿರ್ಮಾಪಕ ಕೊಟ್ಟರು ಸ್ಪಷ್ಟನೆ'ಪುಷ್ಪ 2'ನಲ್ಲಿ ರಶ್ಮಿಕಾ ಪಾತ್ರಕ್ಕೆ ಕತ್ತರಿ? ನಿರ್ಮಾಪಕ ಕೊಟ್ಟರು ಸ್ಪಷ್ಟನೆ

  ರಶ್ಮಿಕಾ ಹೊಸ ಫ್ರೆಂಡ್ ಔರಾ!

  ರಶ್ಮಿಕಾ ಹೊಸ ಫ್ರೆಂಡ್ ಔರಾ!

  ನಟಿ ರಶ್ಮಿಕಾ ಮಂದಣ್ಣ ನಾಯಿಯನ್ನು ಸಾಕಲು ಶುರು ಮಾಡಿದ ಬಳಿಕ, ಔರಾ ಸಿಕ್ಕಾಪಟ್ಟೆ ಹಚ್ಚಿಕೊಂಡಿದೆಯಂತೆ. ಹಾಗಾಗಿ ರಶ್ಮಿಕಾ ಎಲ್ಲೇ ಹೋದರೂ ಕೂಡ ತಮ್ಮ ನಾಯಿಯನ್ನು ಜೊತೆಗೆ ಕರೆದುಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ. ಅಷ್ಟೇ ಯಾಕೆ ಶೂಟಿಂಗ್‌ಗೆ ಹೋದರೂ ಕೂಡ ರಶ್ಮಿಕಾ ತಮ್ಮ ನಾಯಿ ಔರಾವನ್ನು ಕರೆದುಕೊಂಡು ಹೋಗ್ತಾರಂತೆ. ಹಾಗಾಗಿ ಫ್ಲೈಟ್‌ನಲ್ಲಿ ಕೂಡ ಈ ನಾಯಿ ರಶ್ಮಿಕಾ ಜೊತೆಗೆ ಜರ್ನಿ ಮಾಡಲಿದೆಯಂತೆ.

  ರಶ್ಮಿಕಾ ಜೊತೆ ಔರಾಗೆ ಫ್ಲೈಟ್ ಟಿಕೆಟ್!

  ರಶ್ಮಿಕಾ ಜೊತೆ ಔರಾಗೆ ಫ್ಲೈಟ್ ಟಿಕೆಟ್!

  ರಶ್ಮಿಕಾ ಮಂದಣ್ಣ ಚಿತ್ರದ ಶೂಟಿಂಗ್‌ಗಾಗಿ ಫ್ಲೈಟಿನಲ್ಲಿ ತೆರಳುವ ಅನಿವಾರ್ಯತೆ ಎದುರಾದರೆ ಔರಾವನ್ನು ಕೂಡ ಕರೆದುಕೊಂಡು ಹೋಗುತ್ತಾರೆ. ಹಾಗಾಗಿ ರಶ್ಮಿಕಾ ಜೊತೆಗೆ ಆಕೆಯ ನಾಯಿ ಔರಾಗೂ ಕೂಡ ನಿರ್ಮಾಪಕರು ಫ್ಲೈಟ್ ಟಿಕೆಟ್ ಬುಕ್ ಮಾಡಬೇಕಿದೆಯಂತೆ. ಇದು ನಿರ್ಮಾಪಕರಿಗೆ ತಲೆನೋವು ತಂದಿದೆ ಎಂದು ಎಲ್ಲೆಡೆ ವರದಿ ಆಗಿದೆ. ಅದರೆ ಈ ರೀತಿ ಸುದ್ದಿ ಬರುತ್ತಿದ್ದ ಹಾಗೆ ರಶ್ಮಿಕಾ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೇ ನೀಡಿದ್ದಾರೆ.

  ಔರಾ ಹೈದ್ರಾಬಾದ್‌ನಲ್ಲೆ ವಾಸ!

  ಈ ಸುದ್ದಿಗೆ ರಶ್ಮಿಕಾ ಮದ್ದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಮುಂದೆ ತಮ್ಮ ಔರಾಳನ್ನು ಎಲ್ಲಿಗೋ ಕರೆದುಕೊಂಡು ಹೋಗುವ ಅವಶ್ಯಕತೆ ಇಲ್ಲ ಎನ್ನುವುದನ್ನು ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. "ಔರಾ ಇನ್ನು ಮುಂದೆ ನನ್ನ ಜೊತೆಗೆ ಎಲ್ಲಿಗೆ ಟ್ರಾವೆಲ್ ಮಾಡುವುದಿಲ್ಲ. ಹೈದರಾಬಾದ್‌ನಲ್ಲಿ ಆರಾಮಾಗಿ ಇರುತ್ತಾಳೆ. ನಿಮ್ಮ ಕಾಳಜಿಗೆ ಧನ್ಯವಾದಗಳು. ಕ್ಷಮಿಸಿ, ಆದರೆ ಈ ಸುದ್ದಿಯನ್ನು ನೋಡಿದ ಬಳಿಕ ನಗು ತಡೆಯಲು ಸಾಧ್ಯವಾಗುತ್ತಿಲ್ಲ." ಎಂದು ಟ್ವೀಟ್ ಮಾಡಿದ್ದಾರೆ ರಶ್ಮಿಕಾ ಮಂದಣ್ಣ.

  ರಶ್ಮಿಕಾ ಜೊತೆ ಔರಾ ಕೂಡ ಫೇಮಸ್!

  ರಶ್ಮಿಕಾ ಜೊತೆ ಔರಾ ಕೂಡ ಫೇಮಸ್!

  ನಟಿ ರಶ್ಮಿಕಾ ಮನೆಗೆ ಔರಾ ಬಂದಾಗಿನಿಂದಲೂ ರಶ್ಮಿಕಾರಂತೆಯೇ ಔರಾ ಕೂಡ ಸಾಕಷ್ಟು ಜನರ ಕ್ರಶ್ ಆಗಿಬಿಟ್ಟಿದೆ. ರಶ್ಮಿಕಾ ಸದಾ ತಾವು ನಾಯಿಯೊಂದಿಗೆ ಕಾಲಕಳೆಯುವ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಮತ್ತು ಔರಾಗೆ ರಶ್ಮಿಕಾ ಎಂದರೆ ಎಷ್ಟು ಇಷ್ಟ ಎನ್ನುವುದನ್ನು ಕೂಡ ಹಲವು ವಿಡಿಯೋಗಳ ಮೂಲಕ ಹೇಳಿಕೊಂಡಿದ್ದಾರೆ. ಆದರೀಗ ರಶ್ಮಿಕಾ ಶೂಟಿಂಗ್‌ಗೆ ಹೊರದೇಶಗಳಿಗೆ ಹೋದರೆ ಔರಾ ಹೈದರಾಬಾದ್ ನಲ್ಲಿ ಇರುತ್ತೆ ಎಂದು ತಿಳಿಸಿದ್ದಾರೆ.

  English summary
  Rashmika Mandanna Dog Aura Trouble Producers What's Her Reaction, Know More
  Saturday, June 25, 2022, 17:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X