For Quick Alerts
  ALLOW NOTIFICATIONS  
  For Daily Alerts

  ಪುಷ್ಪಾ ಸಿನಿಮಾಕ್ಕಾಗಿ ಶಾಲೆಗೆ ಸೇರಿದ ರಶ್ಮಿಕಾ ಮಂದಣ್ಣ!

  |

  ತೆಲುಗಿನ ಬಹುನಿರೀಕ್ಷಿತ ಸಿನಿಮಾ ಪುಷ್ಪಾ ದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕ ನಟಿಯಾಗಿ ನಟಿಸುತ್ತಿರುವುದು ಹಳೆಯ ಸುದ್ದಿ, ಹೊಸ ಸುದ್ದಿಯೆಂದರೆ ಸಿನಿಮಾಕ್ಕಾಗಿ ರಶ್ಮಿಕಾ ಮಂದಣ್ಣ ಶಾಲೆಗೆ ಸೇರಿದ್ದಾರಂತೆ!

  ಹೌದು, ಪುಷ್ಪಾ ಸಿನಿಮಾ ಆಂಧ್ರದ ಗ್ರಾಮ್ಯ ಭಾಗದಲ್ಲಿ ನಡೆವ ಕತೆ ಅದರಲ್ಲಿಯೂ ಚಿತ್ತೂರು ಪ್ರದೇಶದಲ್ಲಿ ಕತೆ ನಡೆಯುತ್ತದೆ. ಸಿನಿಮಾದಲ್ಲಿನ ಭಾಷೆಯೂ ಚಿತ್ತೂರು, ತಿರುಪತಿ, ಕಡಪ ಭಾಗದ ತೆಲುಗು ಭಾಷೆಯಲ್ಲಿಯೇ ಇರಲಿದೆ.

  ಕಾಡಿಗೆ ಎಂಟ್ರಿ ಕೊಟ್ಟಿದ್ದ ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲುಕಾಡಿಗೆ ಎಂಟ್ರಿ ಕೊಟ್ಟಿದ್ದ ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲು

  ಕನ್ನಡದಿಂದ ಆಂಧ್ರಕ್ಕೆ ಹೋಗಿರುವ ರಶ್ಮಿಕಾ ಗೆ ಸಾಮಾನ್ಯ ತೆಲುಗು ಭಾಷೆಯೇ ಇನ್ನೂ ಕರಗತವಾಗಿಲ್ಲ, ಹೀಗಿರುವಾಗ ಅವರನ್ನು ಚಿತ್ತೂರು ಭಾಷೆ ಮಾತನಾಡುವಂತೆ ಹೇಳಿದ್ದಾರಂತೆ ನಿರ್ದೇಶಕ ಸುಕುಮಾರ್. ಹಾಗಾಗಿ ಚಿತ್ತೂರು ಭಾಗದ ಭಾಷೆ ಕಲಿಯಲು ಆರಂಭಿಸಿದ್ದಾರಂತೆ ರಶ್ಮಿಕಾ.

  ಚಿತ್ತೂರು ತೆಲುಗು ಕಲಿಯಲು ತರಬೇತುದಾರ

  ಚಿತ್ತೂರು ತೆಲುಗು ಕಲಿಯಲು ತರಬೇತುದಾರ

  ಚಿತ್ತೂರು ತೆಲುಗು ಕಲಿಯಲೆಂದು ಒಬ್ಬ ತರಬೇತುದಾರರನ್ನು ಸಹ ನೇಮಿಸಿಕೊಂಡಿದ್ದಾರೆ. ಪ್ರತಿದಿನ ಚಿತ್ತೂರು ತೆಲುಗು ಕಲಿಯುತ್ತಿದ್ದಾರೆ ರಶ್ಮಿಕಾ, ಸಿನಿಮಾಕ್ಕೆ ಅವರೇ ಡಬ್ಬಿಂಗ್ ಮಾಡಬೇಕಾಗಿರುವ ಕಾರಣ ಭಾಷೆ ಕಲಿಯಲೇಬೇಕಾದ ಒತ್ತಡದಲ್ಲಿದ್ದಾರೆ.

  ನವೆಂಬರ್ 6 ರಿಂದ ಚಿತ್ರೀಕರಣ

  ನವೆಂಬರ್ 6 ರಿಂದ ಚಿತ್ರೀಕರಣ

  ಪುಷ್ಪಾ ಸಿನಿಮಾದ ಚಿತ್ರೀಕರಣವು ನವೆಂಬರ್ 6 ರಿಂದ ಚಿತ್ರೀಕರಣ ಪ್ರಾರಂಭ ಮಾಡಲಿದೆ. ವಿಶಾಖಪಟ್ಟಣ ಮುಂತಾದ ಕಡೆಗಳಲ್ಲಿ ಚಿತ್ರೀಕರಣವು ನಡೆಯಲಿದೆ. ಈ ಮೊದಲು ಕೇರಳದಲ್ಲಿ ಚಿತ್ರೀಕರಣ ಪ್ರಾರಂಭಗೊಂಡಿತ್ತು. ನಂತರ ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ಸ್ಥಗಿತವಾಗಿತ್ತು.

  ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ ಚಿತ್ರಕ್ಕೆ ರಶ್ಮಿಕಾ ನಾಯಕಿ: ಯಾವ ಸಿನಿಮಾ?ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ ಚಿತ್ರಕ್ಕೆ ರಶ್ಮಿಕಾ ನಾಯಕಿ: ಯಾವ ಸಿನಿಮಾ?

  ರಕ್ತ ಚಂದನ ಕಳ್ಳಸಾಗಾಣೆದಾರರ ಬಗ್ಗೆ ಸಿನಿಮಾ

  ರಕ್ತ ಚಂದನ ಕಳ್ಳಸಾಗಾಣೆದಾರರ ಬಗ್ಗೆ ಸಿನಿಮಾ

  ಪುಷ್ಪಾ ಸಿನಿಮಾವು ರಕ್ತಚಂದನ ಕಳ್ಳಸಾಗಾಣೆದಾರರ ಸುತ್ತ ಹೆಣೆದ ಕತೆಯಾಗಿದೆ. ಆರ್ಯಾ, ರಂಗಸ್ಥಳ, ನಾನಕ್ಕು ಪ್ರೇಮತೋ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸುಕುಮಾರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

  ಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಲ್ಲು ಅರ್ಜುನ್

  ಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಲ್ಲು ಅರ್ಜುನ್

  ಅಲ್ಲು ಅರ್ಜುನ್ ಸಹ ಸಿನಿಮಾಕ್ಕೆ ಭರ್ಜರಿ ದೈಹಿಕ ಕಸರತ್ತು ಮಾಡಿ ತಯಾರಾಗಿದ್ದಾರೆ. ಹೇರ್‌ಸ್ಟೈಲ್ ಸಹ ಭಿನ್ನವಾಗಿದೆ. ಇತ್ತೀಚೆಗಷ್ಟೆ ತೆಲಂಗಾಣದ ಅಡಿಲಾಬಾದ್ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದರು.

  ರಶ್ಮಿಕಾ ಮಂದಣ್ಣ ಮೇಲೆ ಮುನಿಸಿಕೊಂಡ ಉತ್ತರ ಕರ್ನಾಟಕ ಫ್ಯಾನ್ಸ್ರಶ್ಮಿಕಾ ಮಂದಣ್ಣ ಮೇಲೆ ಮುನಿಸಿಕೊಂಡ ಉತ್ತರ ಕರ್ನಾಟಕ ಫ್ಯಾನ್ಸ್

  English summary
  Actress Rashmika Mandanna learning Chitoor Telugu for Pushpa movie. She is acting along side Allu Arjun in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X