Don't Miss!
- Sports
IPL 2022 Final: ರಾಜಸ್ಥಾನ್ vs ಗುಜರಾತ್ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?
- Automobiles
ಕಾರಿನ ಡ್ಯಾಶ್ಬೋರ್ಡ್ ಲೈಟ್ಗಳನ್ನು ಸರಿಪಡಿಸುವುದು ಹೇಗೆ?: ಇಲ್ಲಿವೆ ಕೆಲವು ಟಿಪ್ಸ್
- News
ಕೋಡಿಹಳ್ಳಿ ಚಂದ್ರಶೇಖರ್ ಸ್ಟಿಂಗ್ ಆಪರೇಷನ್: ತನಿಖೆಗೆ ರೈತ ಮುಖಂಡರ ಒತ್ತಾಯ
- Technology
ಜೂಮ್ ಅಪ್ಲಿಕೇಶನ್ ಬಳಸುವವರು ಕೂಡಲೇ ಅಪ್ಡೇಟ್ ಮಾಡಿ!
- Finance
ಎಚ್ಚರ: ಟ್ವಿಟ್ಟರ್ ಬಳಕೆದಾರರಿಂದ ಎನ್ಎಫ್ಟಿ, ಕ್ರಿಪ್ಟೋ ದೋಚುತ್ತಾರೆ ಸ್ಕಾಮರ್ಗಳು!
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Lifestyle
ಮಳೆಗಾಲದಲ್ಲಿ ಕೂದಲು ದುರ್ವಾಸನೆ ಬೀರುವುದನ್ನು ತಡೆಗಟ್ಟುವುದು ಹೇಗೆ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಪುಷ್ಪ 2' ಹೇಗಿರುತ್ತೆ ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟ ರಶ್ಮಿಕಾ ಮಂದಣ್ಣ!
ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ನಟನೆ ಮೂಲಕ ಉತ್ತುಂಗದಲ್ಲಿ ಇರುವ ನಟಿ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ಸಾಕಷ್ಟು ಬ್ಯುಸಿಯಾಗಿರುವ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಹೆಸರು ಜಾಗತಿಕ ಮಟ್ಟದಲ್ಲಿ ಹೆಚ್ಚು ಹೆಸರುವಾಸಿ ಯಾಗಿದೆ.
ಸದ್ಯ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅಭಿನಯದ ಪುಪ್ಪ ಸಿನಿಮಾ ರಿಲೀಸ್ ಆಗಿ ಉತ್ತಮ ಕಲೆಕ್ಷನ್ ಕೂಡ ಮಾಡಿದೆ. ಪುಷ್ಪ ಸಿನಿಮಾದ ಯಶಸ್ಸಿನ ನಂತರ ಎಲ್ಲರ ಚಿತ್ರ ಪುಷ್ಪ ಪಾರ್ಟ್ 2 ನತ್ತ ನೆಟ್ಟಿದೆ. ಪುಷ್ಪ ಚಿತ್ರದ ಕ್ಲೈಮ್ಯಾಕ್ಸ್ ಪುಷ್ಪ ಭಾಗ2 ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಸಿನಿಮಾ ಯಾವಾಗ ಬರಲಿದೆ ಎನ್ನುವ ಬಗ್ಗೆ ಜನ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಪುಷ್ಪ ಮೊದಲ ಭಾಗಕ್ಕಿಂತಲ್ಲೂ ಎರಡನೇ ಭಾಗದಲ್ಲಿ ಸಾಕಷ್ಟು ವಿಶೇಷತೆ ಇರಲಿಲ್ಲ. ಇದೀಗ ಪುಷ್ಪ 2 ಬಗ್ಗೆ ರಶ್ಮಿಕಾ ಮಂದಣ್ಣ ಭರವಸೆವೊಂದನ್ನು ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಇತ್ತೀಚಿನ ಸಿನಿಮಾ ಪುಷ್ಪ ಸೂಪರ್ ಹಿಟ್ ಆದ ಖುಷಿಯಲ್ಲಿ ತೇಲುತ್ತಿದ್ದಾರೆ. ಅಲ್ಲದೇ ಪುಷ್ಪ ಸಿನಿಮಾದಲ್ಲಿ ತನ್ನ ಪಾತ್ರ ಹಾಗೂ ನಟನೆಗೆ ಬಂದಿರುವ ಮೆಚ್ಚುಗೆಗಳಿಂದ ರಶ್ಮಿಕಾ ಇನ್ನಷ್ಟು ಖುಷಿಯಾಗಿದ್ದಾರೆ. ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ಸಾಲು ಸಾಲು ಸಿನಿಮಾಗಳು ಹಿಟ್, ಸೂಪರ್ ಹಿಟ್ ಆಗುವ ಮೂಲಕ ರಶ್ಮಿಕಾ ಚಾರ್ಮ್ ಮಾತ್ರ ಇನ್ನೂ ಹೆಚ್ಚುತ್ತಿದೆ. ಭರ್ಜರಿ ಟ್ರೋಲ್ ಆದರೂ ನಟಿಯ ಜನಪ್ರಿಯತೆ ಮಾತ್ರ ತಗ್ಗಿಲ್ಲ ಎನ್ನುವುದು .
ಪುಷ್ಪ ಸಿನಿಮಾ ಬಿಡುಗಡೆಯ ವೇಳೆ ಕರ್ನಾಟಕದಲ್ಲಿ ಸಹಜವಾಗಿಯೇ ರಶ್ಮಿಕಾ ಅವರ ಬಗ್ಗೆ ಕನ್ನಡಿಗರಿಗೆ ಅಸಮಾಧಾನ ಮೂಡಿತ್ತು. ಏಕೆಂದರೆ ರಶ್ಮಿಕಾ ಸಿನಿಮಾದ ಕನ್ನಡ ಆವೃತ್ತಿಯಲ್ಲಿ ತನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡಿರಲಿಲ್ಲ, ಸಮಯ ದೊರೆಯಲಿಲ್ಲ ಎನ್ನುವ ಕಾರಣ ನೀಡಿದ್ದರು. ಇನ್ನು ಪುಷ್ಪ ಕೆಜಿಎಫ್ ಸಿನಿಮಾದ ಕಾಪಿ ಎನ್ನುವ ಮಾತುಗಳು, ಎರಡು ಸಿನಿಮಾಗಳ ನಡುವಿನ ಸಾಮ್ಯತೆಗಳ ಕುರಿತಾಗಿ ಕೂಡಾ ಅಂತರ್ಜಾಲದ ವೇದಿಕೆಗಳಲ್ಲಿ ಚರ್ಚೆ ನಡೆದಿತ್ತು. ಇವೆಲ್ಲವುಗಳ ನಡುವೆ ಪುಷ್ಪ ಗೆಲುವನ್ನು ಕಂಡಿದೆ.

ಸಿನಿಮಾ ಸಕ್ಸಸ್‌ನ ಖುಷಿಯಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ನಟಿ ರಶ್ಮಿಕಾ ತಡರಾತ್ರಿ ಟ್ವೀಟ್ ಒಂದನ್ನು ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ನಟಿ ತಮ್ಮ ಟ್ವೀಟ್‌ನಲ್ಲಿ, "ಪುಷ್ಪ ಸಿನಿಮಾಕ್ಕೆ ನೀಡಿದ ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು, ನಾವು ಇನ್ನೂ ಕಷ್ಟಪಟ್ಟು ಕೆಲಸವನ್ನು ಮಾಡುತ್ತೇವೆ. ಪುಷ್ಪ 2 ಮಾತ್ರ ಇನ್ನೂ ಉತ್ತಮ ಮತ್ತು ದೊಡ್ಡದಾಗಿರುತ್ತದೆ ಎಂದು ನಾವು ನಿಮಗೆ ಭರವಸೆಯನ್ನು ನೀಡುತ್ತೇವೆ" ಎಂದು ಬರೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.
ರಕ್ತ ಚಂದನದ ಕಳ್ಳ ಸಾಗಾಣಿಕೆಯ ಕಥಾ ಹಂದರದ ಪುಷ್ಪ ಸಿನಿಮಾದಲ್ಲಿ ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಮೊದಲ ಭಾಗದ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡ ಬೆನ್ನಲ್ಲೇ ಸಿನಿಮಾದ ಮುಂದುವರೆದ ಭಾಗವನ್ನು ಇನ್ನಷ್ಟು ಒತ್ತು ಕೊಟ್ಟು ನಿರ್ಮಾಣ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ಪುಷ್ಪ ಎರಡನೇ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ.