For Quick Alerts
  ALLOW NOTIFICATIONS  
  For Daily Alerts

  ಹಾಡೊಂದಕ್ಕೆ 15 ಕೋಟಿ ಖರ್ಚು ಮಾಡಲಿದೆ 'ರಾಮ್‌ಚರಣ್ 15' ಚಿತ್ರತಂಡ!

  |

  ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ 15ನೇ ಚಿತ್ರಕ್ಕೆ ತಮಿಳು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುಮಾರು 170 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಶೀರ್ಷಿಕೆ ಇನ್ನೂ ಅಂತಿಮವಾಗದ ಕಾರಣ 'ರಾಮ್ ಚರಣ್ 15' ಎಂಬ ತಾತ್ಕಾಲಿಕ ಹೆಸರಿನಿಂದ ಕರೆಯಲಾಗುತ್ತಿದೆ.

  ಆರ್ ಆರ್ ಆರ್ ಹಾಗೂ ಆಚಾರ್ಯ ಚಿತ್ರಗಳ ಮೂಲಕ ಗೆಲುವಿನ ನಂತರ ಸೋಲನ್ನು ಕಂಡಿರುವ ರಾಮ್ ಚರಣ್ ಈ ಬಾರಿ ಶಂಕರ್ ಜತೆ ಕೈ ಜೋಡಿಸಿದ್ದು ಚಿತ್ರದ ಮೇಲೆ ಆರಂಭದಿಂದಲೂ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಇನ್ನು ಬೃಹತ್ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಹಾಡೊಂದರ ಚಿತ್ರೀಕರಣಕ್ಕೆ ಬರೋಬ್ಬರಿ 15 ಕೋಟಿ ಖರ್ಚು ಮಾಡಲಾಗುತ್ತಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.

  ಹೌದು, ಚಿತ್ರ ನಾಯಕ ರಾಮ್ ಚರಣ್ ಹಾಗೂ ನಾಯಕಿ ಕಿಯಾರಾ ಅಡ್ವಾಣಿ ನಡುವಿನ ಡ್ಯೂಯೆಟ್ ಹಾಡಿಗಾಗಿ 15 ಕೋಟಿ ಸುರಿಯಲು ಮುಂದಾಗಿದ್ದಾರೆ ನಿರ್ಮಾಪಕರು. ಈ ಹಾಡಿನ ಚಿತ್ರೀಕರಣ ನ್ಯೂಜಿಲೆಂಡ್‌ನಲ್ಲಿ ನಡೆಯಲಿದ್ದು ಇದೇ ನವೆಂಬರ್ 20ರಂದು ಆರಂಭವಾಗಿ ಡಿಸೆಂಬರ್ ಎರಡನೇ ವಾರದಲ್ಲಿ ಮುಕ್ತಾಯವಾಗಲಿದೆ.

  ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡಿದ್ದು, ಎಸ್ ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು ತಮ್ಮ ಎಲ್ಲಾ ಚಿತ್ರಗಳಲ್ಲೂ ಯಾವುದಾದರೂ ಹಾಡೊಂದನ್ನು ವಿಶೇಷವಾಗಿ ಚಿತ್ರೀಕರಿಸುವ ಹವ್ಯಾಸವಿರುವ ಶಂಕರ್ ಈ ಬಾರಿ ಹಾಡನ್ನು ಚಿತ್ರೀಕರಿಸಲು ದುಬಾರಿ ಯೋಜನೆಯನ್ನೇ ಹಾಕಿಕೊಂಡಿದ್ದಾರೆ. ಸದ್ಯ ಈ ಸುದ್ದಿಯ ಕುರಿತಾಗಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೆಲವರು ಚಿತ್ರತಂಡದ ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ಇನ್ನೂ ಕೆಲವರು ಹಾಡಿಗೆ ಎಷ್ಟು ಕೋಟಿ ಸುರಿದರೂ ಕಂಟೆಂಟ್ ಇದ್ದರೆ ಮಾತ್ರ ಜನ ಚಿತ್ರಮಂದಿರಕ್ಕೆ ಬರುತ್ತಾರೆ ಕಂಟೆಂಟ್ ಚೆನ್ನಾಗಿ ಮಾಡಿ ಎಂದು ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  English summary
  RC 15 producers are spending 15 crores for a single song. Read on
  Wednesday, November 16, 2022, 20:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X