For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ತಂದೆಗೆ ಹೊಡೀತು ಲಾಟರಿ: 'ಕಾಂತಾರ' ತೆಲುಗು ಫಸ್ಟ್ ಡೇ ಕಲೆಕ್ಷನ್ ಕೇಳಿದವರು ಸುಸ್ತೋಸುಸ್ತು!

  |

  'ಕಾಂತಾರ' ಸಿನಿಮಾ ಹಿಂದಿಗೆ ಡಬ್ ಆಗಿ 2500 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತೆ ಎಂದಾಗ ಭಾರೀ ಕಲೆಕ್ಷನ್ ನಿರೀಕ್ಷೆ ಮಾಡಲಾಗಿತ್ತು. ಟ್ವಿಸ್ಟ್ ಏನು ಅಂದರೆ ಹಿಂದಿಗಿಂತ ತೆಲುಗು ವರ್ಷನ್‌ಗೆ ರೆಸ್ಪಾನ್ಸ್ ಅದ್ಭುತವಾಗಿದೆ. ಪ್ರಭಾಸ್, ರಾಣಾರಂತಹ ಸೂಪರ್ ಸ್ಟಾರ್‌ಗಳೇ ರಿಷಬ್ ಶೆಟ್ಟಿ ಮಾಸ್ಟರ್‌ ಪೀಸ್ ನೋಡಿ ಫಿದಾ ಆಗಿದ್ದಾರೆ. ಅಂದಮೇಲೆ ತೆಲುಗು ಪ್ರೇಕ್ಷಕರ ಬಗ್ಗೆ ಹೇಳುವುದೇ ಬೇಡ. ವಿಶ್ವದಾದ್ಯಂತ 'ಕಾಂತಾರ' ತೆಲುಗು ವರ್ಷನ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ತಿದೆ.

  ಆಂಧ್ರ, ತೆಲಂಗಾಣದಲ್ಲಿ 'ಕಾಂತಾರ' ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಎಂದರೆ ನಂಬಲೇಬೇಕು. ಅಷ್ಟರಮಟ್ಟಿಗೆ ತೆಲುಗು ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಸಿನಿಮಾ ಭಾರೀ ಸದ್ದು ಮಾಡ್ತಿದೆ. ಕನ್ನಡದಲ್ಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಈಗ ಅವರದ್ದೇ ಭಾಷೆಯಲ್ಲಿ ಸಿನಿಮಾ ಮತ್ತಷ್ಟು ಆವರಿಸಿಕೊಳ್ತಿದೆ. ಅದರಲ್ಲೂ ಅರ್ಬನ್ ಹಾಗೂ ಸೆಮಿ ಅರ್ಬನ್ ಏರಿಯಾಗಳಲ್ಲಿ ಹೌಸ್‌ಫುಲ್ ಬೋರ್ಡ್ ಬೀಳ್ತಿದೆ. ಸಿನಿಪ್ರೇಕ್ಷಕರಲ್ಲಿ ಈಗ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ 'ಕಾಂತಾರ'.. 'ಕಾಂತಾರ'.. 'ಕಾಂತಾರ'. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಿನಿಮಾ ವಿತರಣೆ ಹಕ್ಕು ಖರೀದಿಸಿದ್ದರು. ಫಸ್ಟ್ ಡೇ ಕಲೆಕ್ಷನ್ ಅವರಿಗೂ ಅಚ್ಚರಿ ತಂದಿದೆ.

  ಹೀರೊ, ಹೀರೊಯಿನ್ ಯಾರು ಎನ್ನುವುದೇ ಗೊತ್ತಿಲ್ಲದೇ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಬಹಳ ಕಡಿಮೆ ಮೊತ್ತಕ್ಕೆ ಅಲ್ಲು ಅರವಿಂದ್ ವಿತರಣೆ ಹಕ್ಕು ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಮೊದಲ ದಿನವೇ ಕಲೆಕ್ಷನ್ ಎಲ್ಲರ ಹುಬ್ಬೇರಿಸಿದೆ. ಹಾಗಾಗಿ ಭಾರೀ ಲಾಭ ಗ್ಯಾರೆಂಟಿ ಎನ್ನುತ್ತಿದ್ದಾರೆ.

  ವಿಶ್ವದಾದ್ಯಂತ ತೆಲುಗು ವರ್ಷನ್ ಸೂಪರ್ ಹಿಟ್
  ಫಸ್ಟ್ ಡೇ ತೆಲುಗು ವರ್ಷನ್ ಕಲೆಕ್ಷನ್ 5 ಕೋಟಿ

  'ಕಾಂತಾರ' ಚಿತ್ರದ ತೆಲುಗು ವರ್ಷನ್ ನಿನ್ನೆ(ಅಕ್ಟೋಬರ್ 15) ಬಿಡುಗಡೆಯಾಗಿದೆ. ಮೊದಲ ದಿನವೇ ಅಂದಾಜು 5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಆಂಧ್ರ, ತೆಲಂಗಾಣದಲ್ಲಿ 4 ಕೋಟಿ, ಇನ್ನುಳಿದಂತೆ ವಿಶ್ವದಾದ್ಯಂತ ತೆಲುಗು ವರ್ಷನ್ 1 ಕೋಟಿ ಗಳಿಕೆ ಕಂಡಿದೆ ಎನ್ನಲಾಗ್ತಿದೆ. ಆ ಮೂಲಕ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದಂತಾಗಿದೆ. ಶನಿವಾರವೇ 5 ಕೋಟಿ ಅಂದರೆ ಭಾನುವಾರ ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

  ಫಸ್ಟ್ ಡೇ ತೆಲುಗು ವರ್ಷನ್ ಕಲೆಕ್ಷನ್ 5 ಕೋಟಿ

  ಫಸ್ಟ್ ಡೇ ತೆಲುಗು ವರ್ಷನ್ ಕಲೆಕ್ಷನ್ 5 ಕೋಟಿ

  'ಕಾಂತಾರ' ಚಿತ್ರದ ತೆಲುಗು ವರ್ಷನ್ ನಿನ್ನೆ(ಅಕ್ಟೋಬರ್ 15) ಬಿಡುಗಡೆಯಾಗಿದೆ. ಮೊದಲ ದಿನವೇ ಅಂದಾಜು 5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಆಂಧ್ರ, ತೆಲಂಗಾಣದಲ್ಲಿ 4 ಕೋಟಿ, ಇನ್ನುಳಿದಂತೆ ವಿಶ್ವದಾದ್ಯಂತ ತೆಲುಗು ವರ್ಷನ್ 1 ಕೋಟಿ ಗಳಿಕೆ ಕಂಡಿದೆ ಎನ್ನಲಾಗ್ತಿದೆ. ಆ ಮೂಲಕ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದಂತಾಗಿದೆ. ಶನಿವಾರವೇ 5 ಕೋಟಿ ಅಂದರೆ ಭಾನುವಾರ ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

  2 ದಿನಕ್ಕೆ ಹಿಂದಿ ವರ್ಷನ್ 4.02 ಕೋಟಿ ಗಳಿಕೆ

  2 ದಿನಕ್ಕೆ ಹಿಂದಿ ವರ್ಷನ್ 4.02 ಕೋಟಿ ಗಳಿಕೆ

  ಶುಕ್ರವಾರವೇ 'ಕಾಂತಾರ' ಹಿಂದಿ ವರ್ಷನ್ ರಿಲೀಸ್ ಆಗಿತ್ತು. ಬರೋಬ್ಬರಿ 2500 ಸ್ಕ್ರೀನ್‌ಗಳ ಮೇಲೆ ಸಿನಿಮಾ ಅಪ್ಪಳಿಸಿತ್ತು. ಮೊದಲ ಸಿನಿಮಾ 1.27 ಕೋಟಿ ರೂ. ಕಲೆಕ್ಷನ್ ಮಾಡಿದರೆ 2ನೇ ದಿನ 2.75 ಕೋಟಿ ಬಾಚಿ ಕಲೆಕ್ಷನ್ ಹೆಚ್ಚಿಸಿಕೊಂಡಿದೆ. ಎರಡು ದಿನದ ಕಲೆಕ್ಷನ್ 4 ಕೋಟಿ ರೂ ದಾಟಿದೆ. ಭಾನುವಾರವಾದ ಇಂದು ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದ್ದು, ಸಿನಿಮಾ ಮುಂದಿನ ದಿನಗಳಲ್ಲಿ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಕ್ಕಿದೆ.

  100 ಕೋಟಿ ಗಡಿ ದಾಟಿದ ಒಟ್ಟು ಕಲೆಕ್ಷನ್

  100 ಕೋಟಿ ಗಡಿ ದಾಟಿದ ಒಟ್ಟು ಕಲೆಕ್ಷನ್

  ಮೀಡಿಯಂ ರೇಂಜ್‌ ಬಜೆಟ್ ಸಿನಿಮಾವೊಂದು ಇಷ್ಟು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಅಚ್ಚರಿ ತಂದಿದೆ. ಕಂಟೆಂಟ್ ಗಟ್ಟಿ ಇದ್ದರೆ ಮೇಕಿಂಗ್, ಆಕ್ಟಿಂಗ್ ಚೆನ್ನಾಗಿದ್ದರೆ ಯಾವುದೇ ಸಿನಿಮಾ ಆದರೂ ಪ್ರೇಕ್ಷಕರು ನೋಡುತ್ತಾರೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಅಂದಾಜು 16 ಕೋಟಿ ಬಜೆಟ್‌ನಲ್ಲಿ 'ಕಾಂತಾರ' ಸಿನಿಮಾ ನಿರ್ಮಾಣ ಆಗಿತ್ತು. ಇದೀಗ 100 ಕೋಟಿ ಕ್ಲಬ್ ಸೇರಿ ಸಿನಿಮಾ ಸದ್ದು ಮಾಡ್ತಿದೆ.

  KGF ದಾಖಲೆ ಮುರಿಯುತ್ತಾ 'ಕಾಂತಾರ'?

  KGF ದಾಖಲೆ ಮುರಿಯುತ್ತಾ 'ಕಾಂತಾರ'?

  'ಕಾಂತಾರ' 100 ಕೋಟಿ ಗಡಿ ದಾಟುತ್ತಿದ್ದಂತೆ ಮುಂದೆ 200 ಕೋಟಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಜೊತೆಗೆ KGF ಫಸ್ಟ್ ಚಾಪ್ಟರ್ 250 ಕೋಟಿ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು ರಿಷಬ್ ಶೆಟ್ಟಿ ಸಿನಿಮಾ ಅಳಿಸಿ ಹಾಕಲಿದೆ ಎಂದು ಕೆಲವರು ಲೆಕ್ಕ ಹಾಕುತ್ತಿದ್ದಾರೆ. ತೆಲುಗು, ಹಿಂದಿ ವರ್ಷನ್‌ಗೆ ಸಿಕ್ಕಿರೋ ಓಪನಿಂಗ್ ನೋಡಿದರೆ 200 ಕೋಟಿ ಕಲೆಕ್ಷನ್ ಸುಲಭ ಎನ್ನಲಾಗ್ತಿದೆ. ಆದರೆ ಕೆಲವರು ಸಾಧ್ಯವಿಲ್ಲ ಕಾದು ನೋಡೋಣ ಎನ್ನುತ್ತಿದ್ದಾರೆ.

  English summary
  Rishab Shetty Starrer Kantara Telugu version worldwide gross of 5cr on its first day. Know More.
  Sunday, October 16, 2022, 20:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X