For Quick Alerts
  ALLOW NOTIFICATIONS  
  For Daily Alerts

  ಹುಬ್ಬಳ್ಳಿಗೂ ಮುಂಚೆನೇ ಹೈದರಾಬಾದ್‌ನಲ್ಲಿ ಅಬ್ಬರಿಸಲಿದೆ ರಾಬರ್ಟ್

  |

  ಫೆಬ್ರವರಿ 28 ರಂದು ಹುಬ್ಬಳ್ಳಿಯಲ್ಲಿ ರಾಬರ್ಟ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ. ಅದಕ್ಕಾಗಿ ಭರ್ಜರಿ ತಯಾರಿ ನಡೆದಿದ್ದು, ಈ ವಾರಾಂತ್ಯಕ್ಕೆ ಗಂಡು ಮೆಟ್ಟಿದ ನಾಡಿಗೆ ಡಿ ಬಾಸ್ ಎಂಟ್ರಿ ಕೊಡಲಿದ್ದಾರೆ.

  26ಕ್ಕೆ ಆಂಧ್ರದಲ್ಲಿ ದರ್ಶನ್ ಅಬ್ಬರ ಶುರು | Roberrt Pre-Release Event in Hyderabad | Darshan

  ಹುಬ್ಬಳ್ಳಿಯಲ್ಲಿ ಘರ್ಜಿಸುವುದಕ್ಕು ಮುಂಚೆಯೇ ಹೈದರಾಬಾದ್‌ನಲ್ಲಿ ರಾಬರ್ಟ್ ದರ್ಶನ ಕೊಡಲಿದ್ದಾರೆ. ತೆಲುಗಿನಲ್ಲೂ ರಾಬರ್ಟ್ ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನೆಲೆ ಫೆಬ್ರವರಿ 26 ರಂದು ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  ಗಂಡು ಮೆಟ್ಟಿದ ನಾಡಲ್ಲಿ 'ರಾಬರ್ಟ್' ಅಬ್ಬರ: ಅದ್ದೂರಿ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ

  ಹುಬ್ಬಳ್ಳಿಯಲ್ಲಿ ಫೆಬ್ರವರಿ 28 ರಂದು ರಾಬರ್ಟ್ ಪ್ರಿ-ರಿಲೀಸ್ ಕಾರ್ಯಕ್ರಮ ನಡೆದರೆ, ಎರಡು ದಿನ ಮುಂಚಿತವಾಗಿ ಅಂದ್ರೆ ಫೆಬ್ರವರಿ 26 ರಂದು ಹೈದರಾಬಾದ್‌ನ ಜೆಆರ್‌ಸಿ ಹಾಲ್‌ನಲ್ಲಿ ರಾಬರ್ಟ್ ಕಾರ್ಯಕ್ರಮ ನೆರವೇರಲಿದೆ.

  ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಸುಮಾರು 400ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಾಬರ್ಟ್ ದರ್ಶನವಾಗಲಿದೆ.

  ರಾಬರ್ಟ್ ಚಿತ್ರವನ್ನು ತೆಲುಗಿನ ಹಿರಿಯ ನಿರ್ದೇಶಕ ಚಂಚಲವಾಡ ಶ್ರೀನಿವಾಸ್ ರಾವ್ ವಿತರಣೆ ಮಾಡುತ್ತಿದ್ದಾರೆ. ಶ್ರೀ ವೆಂಕಟೇಶ್ವರ‌ ಮೂವೀಸ್ ಮೂಲಕ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ದರ್ಶನ್ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

  ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದಾರೆ. ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿ ಕಿಶನ್, ರವಿಶಂಕರ್ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಒಳಗೊಂಡಿದೆ.

  English summary
  Darshan's Starring Robert Movie Pre-Release Event Will Be held On 26th February JRC Convention, Film Nagar at Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X