For Quick Alerts
  ALLOW NOTIFICATIONS  
  For Daily Alerts

  ಚಂದ್ರಬಾಬು ನಾಯ್ಡು ವಿರುದ್ಧ ಸೇಡು ತೀರಿಸಿಕೊಳ್ಳಿ.. ಜಗನ್ ಮೇಲೆ ಅಲ್ಲ: ಬಾಲಯ್ಯಗೆ ರೋಜಾ ಟಾಂಗ್!

  |

  ಆಂಧ್ರಪ್ರದೇಶದಲ್ಲಿಎನ್‌ಟಿಆರ್ ಹೆಲ್ತ್ ಯೂನಿವರ್ಸಿಟಿ ವಿವಾದ ಭುಗಿಲೆದ್ದಿದೆ. ಜಗನ್ ಸರ್ಕಾರ ವಿಶ್ವವಿದ್ಯಾಲಯಕ್ಕೆ ಎನ್‌ಟಿಆರ್ ಹೆಸರನ್ನು ತೆಗೆದು ವೈಎಸ್‌ಆರ್ ಹೆಸರಿಡಲು ಹೊರಟಿರೋದು ಗೊತ್ತೇ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗನ್ ಮೋಹನ್ ರೆಡ್ಡಿ ಸರ್ಕಾರ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ನಿರತವಾಗಿದೆ.

  ಅದೇ ಇನ್ನೊಂದು ಕಡೆ ಎನ್‌ಟಿಆರ್ ಅಭಿಮಾನಿಗಳು ಹಾಗೂ ತೆಲುಗು ದೇಶಂ ಪಕ್ಷ ಪ್ರತಿಭಟನೆಗೆ ಮುಂದಾಗಿದೆ. ಜಗನ್ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸದೆ ಇರಲು ನಿರ್ಧರಿಸಿದ್ದಾರೆ. ಈಗಾಗಲೇ ಜೂ.ಎನ್‌ಟಿಆರ್, ಬಾಲಕೃಷ್ಣ, ಕಲ್ಯಾಣ್ ರಾಮ್ ಮೂವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಈಗ ಆಂಧ್ರ ಸಿಎಂ ಜಗನ್ ಪರವಾಗಿ ರೋಜಾ ಅಖಾಡಕ್ಕೆ ಇಳಿದಿದ್ದಾರೆ.

  ಆಂಧ್ರ ರಾಜಕೀಯದ ಫೈರ್ ಬ್ರ್ಯಾಂಡ್ ಅಂತಲೇ ಕರೆಸಿಕೊಳ್ಳುವ ರೋಜಾ ಕೌಂಟರ್ ಅಡ್ಯಾಟ್ ಮಾಡುವುದರಲ್ಲಿ ಎಕ್ಸ್‌ಪರ್ಟ್. ಈಗಾಗಲೇ ರೋಜಾ ಮಾಡಿದ ಹಲವು ಕಾಮೆಂಟ್‌ಗಳು ಸಂಚಲನ ಸೃಷ್ಟಿಸಿವೆ. ಈಗ ನಂದಮೂರಿ ಬಾಲಕೃಷ್ಣ ವಿರುದ್ಧ ಕೊಟ್ಟ ಕೌಂಟರ್ ವೈರಲ್ ಆಗುತ್ತಿದೆ. ರೋಜಾ ಕೌಂಟರ್‌ಗೆ ನಂದಮೂರಿ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ.

  ಎನ್‌ಟಿಆರ್ ಬದಲು ವೈಎಸ್‌ಆರ್ ಹೆಸರು

  ಎನ್‌ಟಿಆರ್ ಬದಲು ವೈಎಸ್‌ಆರ್ ಹೆಸರು

  ಆಂಧ್ರ ಪ್ರದೇಶದಲ್ಲಿ ಎನ್‌ಟಿಆರ್ ಹೆಸರಿನಲ್ಲಿದ್ದ ಆರೋಗ್ಯ ವಿಶ್ವವಿದ್ಯಾಲಯದ ಹೆಸರನ್ನು ಬದಲಿಸಲು ಜಗನ್ ಸರ್ಕಾರ ತೀರ್ಮಾನಿಸಿದೆ. ಟಾಲಿವುಡ್ ದಂತಕಥೆ ಎನ್‌ಟಿಆರ್ ಹೆಸರನ್ನು ತೆಗೆದು ವೈಎಸ್‌ಆರ್ ಹೆಲ್ತ್ ಯೂನಿವೆರ್ಸಿಟಿ ಅಂತ ನಾಮಕರಣ ಮಾಡಲು ಮುಂದಾಗಿದೆ. ಈ ನಿರ್ಧಾರದ ಬಳಿಕ ರಾಜಕೀಯ ವಲಯದಲ್ಲಿ ದೊಡ್ಡ ವಿವಾದವೇ ಎದ್ದಿದೆ. ಟಿಡಿಪಿ ಹಾಗೂ ನಂದಮೂರಿ ಅಭಿಮಾನಿಗಳು ತ್ರೀವ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  ಕಿಡಿಕಾರಿದ್ದ ನಂದಮೂರಿ ಬಾಲಕೃಷ್ಣ

  ಕಿಡಿಕಾರಿದ್ದ ನಂದಮೂರಿ ಬಾಲಕೃಷ್ಣ

  ಆರೋಗ್ಯ ವಿಶ್ವವಿದ್ಯಾಲಯ ಹೆಸರು ಬದಲಾಯಿಸಲು ತೀರ್ಮಾನಿಸುತ್ತಿದ್ದಂತೆ 'ಲೆಜೆಂಡ್' ಬಾಲಕೃಷ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. " ಎನ್‌ಟಿಆರ್ ತೆಲುಗು ರಾಷ್ಟ್ರದ ಬೆನ್ನೆಲುಬು. ಎನ್‌ಟಿಆರ್ ಬದಲಾಯಿಸುವ ಹೆಸರಲ್ಲ. ಅದೊಂದು ಸಂಸ್ಕೃತಿ, ನಾಗರೀಕತೆ." ಎಂದು ಕಿಡಿ ಕಾರಿದ್ದರು.

  'ನಾಚಿಕೆ ಇಲ್ಲ'-ಬಾಲಕೃಷ್ಣ ಕಮೆಂಟ್

  'ನಾಚಿಕೆ ಇಲ್ಲ'-ಬಾಲಕೃಷ್ಣ ಕಮೆಂಟ್

  ಬಾಲಕೃಷ್ಣ ಇಲ್ಲಿದೆ ಸುಮ್ಮನಾಗಿರಲಿಲ್ಲ. " ತಂದೆ ವಿಮಾನ ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡಿದ್ದರು. ಈಗ ಮಗ ಆರೋಗ್ಯ ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸುತ್ತಿದ್ದಾನೆ. ನಿಮ್ಮನ್ನು ಬದಲಾಯಿಸಲು ಜನರಿದ್ದಾರೆ. ಪಂಚಭೂತಗಳಿವೆ ಹುಷಾರಾಗಿರಿ. ನಂಬಿಕೆ ಇಲ್ಲದವರನ್ನು ನಾಯಿಗಳೂ ಅಣಕಿಸುತ್ತಿವೆ." ಎಂದು ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದರು.

  ರೋಜಾ ಕೌಂಟರ್

  ರೋಜಾ ಕೌಂಟರ್

  ಬಾಲಕೃಷ್ಣ ಆಂಧ್ರ ಸಿಎಂ ಜಗನ್ ವಿರುದ್ಧ ಕಿಡಿಕಾರುತ್ತಿದ್ದಂತೆ, ರೋಜಾ ಅಖಾಡಕ್ಕೆ ಇಳಿದಿದ್ದಾರೆ. ಬಾಲಯ್ಯ ಕೊಟ್ಟು ಟಾಂಗ್‌ಗೆ ತಿರುಗೇಟು ನೀಡಿದ್ದಾರೆ. " ಬಾಲಯ್ಯ ಸೇಡನ್ನು ಚಂದ್ರಬಾಬು ನಾಯ್ಡು ವಿರುದ್ಧ ತೀರಿಸಿಕೊಳ್ಳಿ. ಜಗನ್ ವಿರುದ್ಧ ಅಲ್ಲ. ಜಗನ್ ರೀಲ್ ಸಿಂಹ ಅಲ್ಲ. ರಿಯಲ್ ಸಿಂಹ." ಎಂದು ಕಿಡಿಕಾರಿದ್ದಾರೆ.

  English summary
  Roja Vs Balakrishna: YSRCP Minister Roja Counter For Balaiyya's Comments, Know More.
  Sunday, September 25, 2022, 21:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X