For Quick Alerts
  ALLOW NOTIFICATIONS  
  For Daily Alerts

  RRR Vs Sahoo: ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಪ್ಪಯ್ಯ ಅಂದ್ರೂ ಸಾಹೋ ದಾಖಲೆ ಮುರಿಯಲು ಸಾಧ್ಯವಿಲ್ಲ

  |

  ಕಾದೂ ಕಾದು ಸುಸ್ತಾದವರಿಗೆ ಕೊನೆಗೂ RRR ಸಿನಿಮಾ ನೋಡುವ ಅವಕಾಶ ಸಿಕ್ಕೇ ಬಿಟ್ಟಿದೆ. ನಿರೀಕ್ಷೆಯಂತೆ RRR ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಬರೋಬ್ಬರಿ 5 ಭಾಷೆಗಳಲ್ಲಿ RRR ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಈ ಕಾರಣಕ್ಕೆ ರಾಜಮೌಳಿ ಸಿನಿಮಾ ಮೊದಲ ದಿನವೇ ಒಂದಿಷ್ಟು ದಾಖಲೆಗಳನ್ನು ಮಾಡಲಿದೆ ಎಂದು ಊಹೆ ಮಾಡಲಾಗಿದೆ.

  ಇನ್ನೊಂದು ಕಡೆ ಹಿಂದಿ ಮಾರುಕಟ್ಟೆಯಲ್ಲಿ RRR ಪ್ರಭಾಸ್ ಸಿನಿಮಾ 'ಸಾಹೋ' ಮಾಡಿದ ದಾಖಲೆಯನ್ನು ಮುರಿಯಲು ಸಾಧ್ಯವೇ ಇಲ್ಲ ಭವಿಷ್ಯ ನುಡಿದಿದ್ದಾರೆ. ಪ್ರಭಾಸ್ ಸಿನಿಮಾ 'ಸಾಹೋ' ದಾಖಲೆಯನ್ನು RRR ಮುರಿಯಲು ಯಾಕೆ ಸಾಧ್ಯವಿಲ್ಲ? ಸಾಹೋ ಮಾಡಿದ ದಾಖಲೆ ಏನು? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳಿಗೆ ಟ್ರೇಡ್ ವಿಮರ್ಶಕರು ತಮ್ಮದೇ ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ. ಹೀಗಾಗಿ ಟಾಲಿವುಡ್ ಮಾರುಕಟ್ಟೆ ಅಷ್ಟೇ ಅಲ್ಲ. ಹಿಂದಿ ಬಾಕ್ಸಾಫೀಸ್‌ನಲ್ಲಿ RRR ಎಷ್ಟು ಲೂಟಿ ಮಾಡುತ್ತೆ ಎನ್ನುವ ಕುತೂಹಲ ದುಪ್ಪಟ್ಟಾಗಿದೆ.

  RRR Day 1 Collection Karnataka: ಕರ್ನಾಟಕದಲ್ಲಿ RRR ಮೊದಲ ದಿನದ ಗಳಿಕೆ ಲೆಕ್ಕಾಚಾರವೆಷ್ಟು? RRR Day 1 Collection Karnataka: ಕರ್ನಾಟಕದಲ್ಲಿ RRR ಮೊದಲ ದಿನದ ಗಳಿಕೆ ಲೆಕ್ಕಾಚಾರವೆಷ್ಟು?

  ಹಿಂದಿ ಬಾಕ್ಸಾಫೀಸ್‌ನಲ್ಲಿ RRR ಕಲೆಕ್ಷನ್ ಎಷ್ಟು?

  ಹಿಂದಿ ಬಾಕ್ಸಾಫೀಸ್‌ನಲ್ಲಿ RRR ಕಲೆಕ್ಷನ್ ಎಷ್ಟು?

  ಹಿಂದಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಬಾಕ್ಸಾಫೀಸ್ ಕಲೆಕ್ಷನ್ ಒಂದಾದರೆ, ಹಿಂದಿ ಬಾಕ್ಸಾಫೀಸ್ ಗಳಿಕೆನೇ ಒಂದು. ಆದ್ರೀಗ ಕಾಲ ಬದಲಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದೆ. ಅದರಲ್ಲೂ ರಾಜಮೌಳಿಯ 'ಬಾಹುಬಲಿ' ಸಿನಿಮಾ ಬಳಿಕ ಈ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿದೆ. ಹೀಗಾಗಿ RRR ಸಿನಿಮಾ ಕೂಡ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ? ಗಳಿಕೆ ಎಷ್ಟಿರುತ್ತೆ ಅನ್ನುವ ಕುತೂಹಲವಿದೆ. ಬಾಲಿವುಡ್ ಟ್ರೇಡ್ ವಿಮರ್ಶಕರ ಪ್ರಕಾರ, ಮೊದಲ ದಿನದ ಗಳಿಕೆ ಬರೋಬ್ಬರಿ 15 ಕೋಟಿ ಆಗಬಹುದು ಎಂದು ಹೇಳಲಾಗಿದೆ.

  RRR, ಸಾಹೋ ದಾಖಲೆ ಮುರಿಯಲ್ಲ

  RRR, ಸಾಹೋ ದಾಖಲೆ ಮುರಿಯಲ್ಲ

  'ಬಾಹುಬಲಿ' ಬಳಿಕ ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದರು. ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಪ್ರಭಾಸ್ ಚಿರಪರಿಚಿತರಾಗಿದ್ದರು. ಹೀಗಾಗಿ 'ಬಾಹುಬಲಿ' ಬಳಿಕ ತೆರೆಕಂಡ 'ಸಾಹೋ' ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮೊದಲ ದಿನ 24 ಕೋಟಿ ಗಳಿಕೆ ಕಂಡಿತ್ತು. ಈ ಕಾರಣಕ್ಕೆ RRR ಮೊದಲ ದಿನ ಬಾಲಿವುಡ್‌ ಗಲ್ಲಾಪೆಟ್ಟಿಯಲ್ಲಿ 'ಸಾಹೋ' ದಾಖಲೆಯನ್ನು ಲೂಟಿ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ.

  'ಪುಷ್ಪ' ಮೊದಲ ದಿನ ಗಳಿಸಿದ್ದೆಷ್ಟು?

  'ಪುಷ್ಪ' ಮೊದಲ ದಿನ ಗಳಿಸಿದ್ದೆಷ್ಟು?

  ಅಲ್ಲು ಅರ್ಜುನ್ ಅಭಿನಯದ ಮೊದಲ ಸಿನಿಮಾ 'ಪುಷ್ಪ' ಸಿನಿಮಾ ಹಿಂದಿ ಭಾಷೆಗೆ ಡಬ್ ಆಗಿ ರಿಲೀಸ್ ಆಗಿತ್ತು. ಈ ಸಿನಿಮಾ ಹಿಂದಿ ಮಾರುಕಟ್ಟೆಯಲ್ಲಿ ಮೊದಲ ದಿನ 3.3 ಕೋಟಿ ಕಲೆ ಹಾಕಿತ್ತು. ಬಳಿಕ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಜನ ಚಿತ್ರಮಂದಿರಕ್ಕೆ ನುಗ್ಗಿದ್ದರು. ಹೀಗಾಗಿ ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದ ಮೊದಲ ದಿನದ ಗಳಿಕೆಯನ್ನು RRR ಆರಾಮಾಗಿ ಬ್ರೇಕ್ ಮಾಡಲಿದೆ ಎನ್ನಲಾಗಿದೆ.

  'ಸೂರ್ಯವಂಶಿ' ಬಳಿಕ RRR

  'ಸೂರ್ಯವಂಶಿ' ಬಳಿಕ RRR

  ಕೋವಿಡ್ ಎರಡನೇ ಅಲೆ ಬಳಿಕ ಬಾಲಿವುಡ್‌ ಬಾಕ್ಸಾಫೀಸ್‌ಗೆ ಮತ್ತೆ ಜೀವ ಕೊಟ್ಟಿದ್ದು ಅಕ್ಷಯ್ ಕುಮಾರ್ ನಟಿಸಿದ 'ಸೂರ್ಯವಂಶಿ'. ಅಕ್ಷಯ್ ಕುಮಾರ್ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರೂ, ಅತಿಥಿ ಪಾತ್ರದಲ್ಲಿ ರಣ್‌ವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಕಾಣಿಸಿಕೊಂಡಿದ್ದರು. ಜೊತೆ ರೋಹಿತ್ ಶೆಟ್ಟಿ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಕಾರಣಕ್ಕೆ ಸೂರ್ಯವಂಶಿ ಮೊದಲ ದಿನವೇ 26.29 ಕೋಟಿ ಕಲೆ ಹಾಕಿತ್ತು. ಈ ಚಿತ್ರದ ಬಳಿಕ ಅತೀ ಹೆಚ್ಚು ಗಳಿಕೆ ಕಾಣುವ ಸಿನಿಮಾ RRR ಎನ್ನುತ್ತಿದ್ದಾರೆ ಬಾಲಿವುಡ್ ಪಂಡಿತರು.

  English summary
  RRR day 1 collection can't possible to break Prabhas Sahoo Collection. Know more.
  Friday, March 25, 2022, 17:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X