Don't Miss!
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- News
ವಂದೇ ಭಾರತ್ ರೈಲಿಗಿಂತ 'ವಂದೇ ಮೆಟ್ರೋ' ಹೇಗೆ ಭಿನ್ನ? ಇಲ್ಲಿವೆ ಪ್ರಮುಖ ವೈಶಿಷ್ಟ್ಯ-ವಿಶೇಷತೆಗಳು
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
RRR Day 12 Box Office Collection: 12 ದಿನದಲ್ಲಿ 1000 ಕೋಟಿ ಕ್ಲಬ್ ಸೇರಿತಾ ರಾಜಮೌಳಿ ಸಿನಿಮಾ RRR
ರಾಜಮೌಳಿ ಸಿನಿಮಾ RRR ಬಾಕ್ಸಾಫೀಸ್‌ನಲ್ಲಿ ತನ್ನ ನಾಗಾಲೋಟವನ್ನು ನಿಲ್ಲಿಸಿಲ್ಲ. ಮಾರ್ಚ್ 25ರಂದು ವಿಶ್ವದಾದ್ಯಂತ ಬಿಡುಗಡೆಯಾದ ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಚಿಂದಿ ಉಡಾಯಿಸುತ್ತಲೇ ಇದೆ. ರಾಜಮೌಳಿ ಮತ್ತೆ ಬಾಕ್ಸಾಫೀಸ್ ಮಾಂತ್ರಿಕ ಅನ್ನುವುದನ್ನು ಪ್ರೂವ್ ಮಾಡಿದ್ದಾರೆ.
RRR ಸಿನಿಮಾ ಬಿಡುಗಡೆಯಾಗಿ ಕೇವಲ 12 ದಿನಗಳಾಗಿವೆ. ಅಷ್ಟರಲ್ಲೇ ಈ ಸಿನಿಮಾ ಬಾಕ್ಸಾಫೀಸ್‌ಗೆ ಬೆಂಕಿ ಹಚ್ಚಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ RRR ಸಿನಿಮಾ ದಾಖಲೆ ಗಳಿಕೆ ಮಾಡಿದೆ. ಆಂಧ್ರ, ಕರ್ನಾಟಕ, ತಮಿಳುನಾಡು, ಕೇರಳ, ಉತ್ತರ ಭಾರತದ ಜೊತೆ ವಿದೇಶದಲ್ಲಿಯೂ ಸಿನಿಮಾ ಮಸ್ತ್ ಕಲೆಕ್ಷನ್ ಮಾಡಿದೆ.
Shahid
Kapoor:
ವಿಜಯ್
ಅವರ
ದೊಡ್ಡ
ಅಭಿಮಾನಿ
ಎಂದ
ಶಾಹಿದ್
ಕಪೂರ್
ರಾಕಿ
ಭಾಯ್
ಬಗ್ಗೆ
ಏನಂದ್ರು?
ರಾಜಮೌಳಿ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ವಿಜ್ಯುವಲ್ ಟ್ರೀಟ್ ಕೊಟ್ಟಿದೆ. ಈ ಸಿನಿಮಾದ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದಾರೆ. ಆದರೆ, ಕಥೆ ತೆಲುಗು ಪ್ರೇಕ್ಷಕರಿಗೆ ಅಷ್ಟಾಗಿ ಇಷ್ಟ ಆಗಿಲ್ಲ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಆದರೂ, ಬಾಕ್ಸಾಫೀಸ್‌ನಲ್ಲಿ RRR ತನ್ನ ಓಟವನ್ನು ಮುಂದುವರೆಸಿದೆ.
Recommended Video


RRR ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ರಾಜಮೌಳಿ ನಿರ್ದೇಶನದ RRR ಸಿನಿಮಾ ಮೊದಲ ದಿನದಿಂದಲೂ ದಾಖಲೆ ಗಳಿಕೆ ಮಾಡುತ್ತಲೇ ಇದೆ. ಮೊದಲ ದಿನ ಕೇವಲ ಆಂಧ್ರ ಹಾಗೂ ತೆಲಂಗಾಣದಲ್ಲಿ 74 ಕೋಟಿ ಕಲೆಕ್ಷನ್ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೂ RRR ದರ್ಬಾರ್ ಇನ್ನೂ ನಿಂತಿಲ್ಲ. 12ನೇ ದಿನ ಈ ಎರಡೂ ತೆಲುಗು ರಾಜ್ಯಗಳಲ್ಲಿ 4. 88 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಒಟ್ಟು ಗಳಿಕೆ 367 ಕೋಟಿ ಗ್ರಾಸ್ ಕಲೆಕ್ಷನ್ ಆಗಿದೆ. ನೆಟ್ ಕಲೆಕ್ಷನ್ 244.37 ಕೋಟಿ ಎನ್ನಲಾಗಿದೆ.
KGF
2
Gagana
Nee
Song
:
ಹೃದಯ
ಮೀಟುವ
ಹಾಡು
ಬಿಡುಗಡೆಗೆ
ಸಮಯ
ನಿಗದಿ

RRR ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?
RRR ಎಲ್ಲೆಲ್ಲಿ ಬಿಡುಗಡೆಯಾಗಿದೆಯೋ ಅಲ್ಲೆಲ್ಲಾ ಭರ್ಜರಿ ಕಲೆಕ್ಷನ್ ಮಾಡಿದೆ. ಐದೂ ಭಾಷೆಯಲ್ಲೂ ಗಳಿಕೆ ಇನ್ನೂ ಕಮ್ಮಿಯಾಗಿಲ್ಲ. ಇಲ್ಲಿವರೆಗೂ ವಿಶ್ವದಾದ್ಯಂತ ಸುಮಾರು 938.50 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ನೆಟ್ ಕಲೆಕ್ಷನ್ 521 ಕೋಟಿ ಗಳಿಕೆ ಕಂಡಿದೆ ಎಂದು ಟ್ರೇಡ್ ಅನಲಿಸ್ಟ್ ಹೇಳುತ್ತಿದ್ದಾರೆ. ಈ ಲೆಕ್ಕದ ಪ್ರಕಾರ, RRR ಕಲೆಕ್ಷನ್ ಸಾವಿರ ಕೋಟಿ ದಾಟಲು ಇನ್ನೂ ಹೆಚ್ಚು ಕಡಿಮೆ 60 ಕೋಟಿ ಗಳಿಸಬೇಕಿದೆ. ಇದು ಎಷ್ಟು ದಿನದಲ್ಲಿ ಕಲೆಹಾಕುತ್ತೆ ಅನ್ನುವುದೇ ಕುತೂಹಲ.

RRR ಕರ್ನಾಟಕ ಕಲೆಕ್ಷನ್ ಎಷ್ಟು?
RRR ಸಿನಿಮಾ ಆಂಧ್ರ-ತೆಲಂಗಾಣದಲ್ಲಿ ಅಷ್ಟೇ ಅಲ್ಲ. ಕರ್ನಾಟಕದ ಬಾಕ್ಸಾಫೀಸ್‌ನಲ್ಲೂ ಮಸ್ತ್ ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲಿ 34.90 ಕೋಟಿ, ಕೇರಳದಲ್ಲಿ 9.75 ಕೋಟಿ, ಹಿಂದಿಯಲ್ಲಿ 97.10 ಕೋಟಿ, ನೆಟ್ ಕಲೆಕ್ಷನ್ ಆಗಿದೆ. ಇದರೊಂದಿಗೆ RRR ಸಿನಿಮಾ ಕರ್ನಾಟಕದಲ್ಲೂ ಭರ್ಜರಿ ಗಳಿಕೆ ಮಾಡಿದೆ. ಕರ್ನಾಟಕದಾದ್ಯಂತ ನೆಟ್ ಕಲೆಕ್ಷನ್ 38.70 ಕೋಟಿ ಎಂದು ಹೇಳಲಾಗಿದೆ.
Yash:
'ಒಂದು
ದಿನ
ಹೀರೊ
ಆಗೇ
ಆಗುತ್ತೇನೆ
ಅಂತ
ಗೊತ್ತಿತ್ತು'!

'KGF 2', 'ಬೀಸ್ಟ್' ಬಳಿಕ ಕಲೆಕ್ಷನ್ ಏನಾಗುತ್ತೆ?
'KGF 2', 'ಬೀಸ್ಟ್' ಸಿನಿಮಾ ಒಂದು ದಿನ ಅಂತರದಲ್ಲಿ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿದೆ. ಅಲ್ಲಿವರೆಗೂ RRR ಹವಾ ಮುಂದುವರೆಯುತ್ತೆ. ಆಮೇಲೆ ರಾಜಮೌಳಿ ಸಿನಿಮಾದ ಗಳಿಕೆ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟರೊಳಗೆ RRR ಸಿನಿಮಾ 1000 ಕೋಟಿ ಕ್ಲಬ್ ಸೇರಬೇಕಿದೆ. ಇಲ್ಲದೆ ಹೋದರೆ, ಈ ಎರಡೂ ಸಿನಿಮಾಗಳೂ ಬಾಕ್ಸಾಫೀಸ್ ಟೇಕ್ ಓವರ್ ಮಾಡುವ ಸಾಧ್ಯತೆ ಹೆಚ್ಚಿದೆ.