twitter
    For Quick Alerts
    ALLOW NOTIFICATIONS  
    For Daily Alerts

    52 ಸಾವಿರ ಚದರ ಅಡಿ LED ಸ್ಕ್ರೀನ್‌ನಲ್ಲಿ RRR ಪ್ರಿ-ರಿಲೀಸ್ ಇವೆಂಟ್: ಸಿಎಂ ಬೊಮ್ಮಾಯಿ, ಶಿವಣ್ಣ ಗೆಸ್ಟ್

    |

    'ಬಾಹುಬಲಿ' ಸಿನಿಮಾದ ಬಳಿಕ ರಾಜಮೌಳಿಯ ಮತ್ತೊಂದು ಮೆಗಾ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಪುನೀತ್ ರಾಜ್‌ಕುಮಾರ್ ಸಿನಿಮಾ 'ಜೇಮ್ಸ್' ತೆರೆಕಂಡ ಒಂದು ವಾರದ ಬಳಿಕ RRR ಅದ್ದೂರಿಯಾಗಿ ರಿಲೀಸ್ ಆಗಲಿದೆ. ಸುಮಾರು 10 ಸಾವಿರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಸಿನಿಮಾಗಳಲ್ಲಿ ರಿಲೀಸ್ ಆಗಲಿದೆ. ಆದರೆ, RRR ಸಿನಿಮಾ ಬಿಡುಗಡೆಗೂ ಮುನ್ನ ಇಡೀ ಭಾರತವೇ ತಿರುಗಿ ನೋಡುವಂತಷ್ಟು ದೊಡ್ಡದಾದ ಪ್ರಿ-ರಿಲೀಸ್ ಇವೆಂಟ್‌ಗೆ ಮುಂದಾಗಿದೆ. ಕರ್ನಾಟಕದಲ್ಲಿ ವಿತರಣೆ ಹಕ್ಕನ್ನು ಪಡೆದುಕೊಂಡಿರುವ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಈ ಪ್ರಿ-ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಂಡಿದೆ.

    ಭಾರತೀಯ ಚಿತ್ರರಂಗ ಹಿಂದೆಂದೂ ಇಂತಹದ್ದೊಂದು ಪ್ರಿ-ರಿಲೀಸ್ ಇವೆಂಟ್‌ ನೋಡಿರದಷ್ಟು ದೊಡ್ಡ ಮಟ್ಟಕ್ಕೆ ಈ ಕಾರ್ಯಕ್ರಮವನ್ನು ನಡೆಸಲಿದೆ. ಇಡೀ ದೇಶವೇ ಈ ಪ್ರಿ-ರಿಲೀಸ್ ಇವೆಂಟ್‌ನತ್ತ ತಿರುಗಿ ನೋಡಲಿದೆ ಎಂದು ಕೆವಿಎನ್ ಪ್ರೊಡಕ್ಷನ್ ಹೇಳಿಕೊಂಡಿದೆ. ಮಾರ್ಚ್ 19ರಂದು ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ ಸಮೀಪದಲ್ಲಿ ಈ ಇವೆಂಟ್ ಅನ್ನು ಹಮ್ಮಿಕೊಳ್ಳಲಾಗಿದೆ. ಬೃಹತ್ ಸಂಖ್ಯೆಯಲ್ಲಿ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸೇರಲಿದ್ದಾರೆ. ಹಾಗಿದ್ದರೆ, RRR ಇವೆಂಟ್‌ನಲ್ಲಿ ಅಂತಹದ್ದೇನಿದೆ? ಈ ಪ್ರಿ ರಿಲೀಸ್ ಇವೆಂಟ್‌ನ ಹೈಲೈಟ್ ಏನು? ತಿಳಿಯಲು ಮುಂದೆ ಓದಿ.

     'RRR' ಚಿತ್ರಕ್ಕೆ ಪ್ರಭಾಸ್ ಆಯ್ಕೆ ಆಗಿಲ್ಲವೇಕೆ? ರಾಜಮೌಳಿ ಕೊಟ್ಟ ಕಾರಣವೇನು? 'RRR' ಚಿತ್ರಕ್ಕೆ ಪ್ರಭಾಸ್ ಆಯ್ಕೆ ಆಗಿಲ್ಲವೇಕೆ? ರಾಜಮೌಳಿ ಕೊಟ್ಟ ಕಾರಣವೇನು?

     ಅಪ್ಪುಗೆ RRR ಇವೆಂಟ್ ಅರ್ಪಣೆ

    ಅಪ್ಪುಗೆ RRR ಇವೆಂಟ್ ಅರ್ಪಣೆ

    ರಾಜಮೌಳಿ ಸಿನಿಮಾ ಅಂದ್ಮೇಲೆ ಅದಕ್ಕೆ ವಿಶೇಷವಾಗಿ ಹೈಪ್ ಬೇಕಾಗಿಲ್ಲ. ಹೆಸರಿನಿಂದಲೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹಿಟ್ ಆಗುತ್ತೆ. ಆದರೂ, RRR ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಬೇಕು ಅನ್ನುವ ಕಾರಣಕ್ಕೆ ಕರ್ನಾಟಕದಲ್ಲಿ ಪ್ರಿ-ರಿಲೀಸ್ ಇವೆಂಟ್‌ ಮಾಡುತ್ತಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ, RRR ಸಿನಿಮಾದ ಅಭಿಮಾನಿಗಳು ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ RRR ಪ್ರಿ -ರಿಲೀಸ್ ಕಾರ್ಯಕ್ರಮವನ್ನು ಪುನೀತ್ ರಾಜ್‌ಕುಮಾರ್‌ಗೆ ಅರ್ಪಿಸಲು ಮುಂದಾಗಿದೆ.

     ಸ್ಟೇಜ್‌ನಲ್ಲಿ LED ಸ್ಕ್ರೀನ್, 42 ಲೇಸರ್ ಲೈಟ್

    ಸ್ಟೇಜ್‌ನಲ್ಲಿ LED ಸ್ಕ್ರೀನ್, 42 ಲೇಸರ್ ಲೈಟ್

    ನಂದಿ ಬೆಟ್ಟದ ಸಮೀಪದಲ್ಲಿರುವ 100 ಎಕರೆ ಮೈದಾನದಲ್ಲಿ RRR ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ನಡೆಯುತ್ತಿದೆ. ಇದಕ್ಕಾಗಿ ಬೃಹತ್ ಗಾತ್ರದ ಸೆಟ್ ಹಾಕಲಾಗಿದೆ. 52 ಸಾವಿರ ಅಡಿ ಎತ್ತರದಷ್ಟು ಎಲ್‌ಇಡಿ ಸ್ಕ್ರೀನ್‌ ಹಾಕಿದ್ದಾರೆ. ವೇದಿಕೆ ಮೇಲೆ ಸುಮಾರು 42 ಬೃಹತ್ ಲೇಸರ್ ಲೈಟ್‌ಗಳನ್ನು ಅಳಪಡಿಸಲಾಗಿದೆ. ಈ ಲೇಸರ್ ಲೈಟ್‌ಗಳ ಮೂಲಕ 3ಡಿಯಲ್ಲಿ ಇಡೀ ಕಾರ್ಯಕ್ರಮದ ಇವೆಂಟ್ ಅನ್ನು ಅಭಿಮಾನಿಗಳು ವೀಕ್ಷಿಸಬಹುದಾಗಿದೆ. ಈ ಕಾರಣಕ್ಕೆ ಇದು ದೇಶದಲ್ಲಿ ಅತೀ ದೊಡ್ಡ ಪ್ರೀ-ರಿಲೀಸ್ ಇವೆಂಟ್ ಎಂದು ಚಿತ್ರತಂಡ ಹೇಳಿಕೊಂಡಿದೆ.

     ಸಿಎಂ ಬೊಮ್ಮಾಯಿ, ಶಿವಣ್ಣ ಗೆಸ್ಟ್

    ಸಿಎಂ ಬೊಮ್ಮಾಯಿ, ಶಿವಣ್ಣ ಗೆಸ್ಟ್

    ಈ ಪ್ರಿ-ರಿಲೀಸ್‌ ಇವೆಂಟ್‌ಗೆ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಭಾಗವಹಿಸಲಿದ್ದಾರೆ. ಇವರೊಂದಿಗೆ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಹಾಗೂ ಸಂಗೀತ ನಿರ್ದೇಶಕ ಕೀರವಾಣಿ ಕೂಡ ಭಾಗವಹಿಸಲಿದ್ದಾರೆ. ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

     ಆನ್‌ಲೈನ್ ಬುಕಿಂಗ್ ಆರಂಭ

    ಆನ್‌ಲೈನ್ ಬುಕಿಂಗ್ ಆರಂಭ

    RRR ಇವೆಂಟ್ ವೀಕ್ಷಿಸಲು ಅಭಿಮಾನಿಗಳಿಗೆ ಪಾಸ್ ನೀಡಲಿದೆ. ಕೆವಿಎನ್ ಸಂಸ್ಥೆಯ ವೆಬ್‌ ಸೈಟ್ ಮೂಲಕ ಈ ಇವೆಂಟ್‌ಗೆ ಹಾಜರಾಗುವವರು ಟಿಕೆಟ್ ಅನ್ನು ಖರೀದಿ ಮಾಡಬಹುದಾಗಿದೆ. ಇನ್ನು ಮಾರ್ಚ್ 19ರಂದು ಪ್ರಿ-ರಿಲೀಸ್ ಇವೆಂಟ್ ಮುಗಿರುತ್ತಿದ್ದಂತೆ ಆನ್‌ಲೈನ್ ಬುಕಿಂಗ್ ಆರಂಭ ಆಗಲಿದೆ. ಸಿನಿಮಾ ಬಿಡುಗಡೆಗೆ 5 ದಿನವಿರುವಾಗಲೇ RRR ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲಿ ಬಹುತೇಕ ಸಿನಿಮಾಗಳಲ್ಲಿ RRR ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ.

    English summary
    RRR movie Pre release event in chikkaballapura has 52 thousand feet LED screen 42 laser lights. C M Basavaraj Bommai and Shivarajkumar will be the chief guest.
    Monday, March 14, 2022, 10:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X