For Quick Alerts
  ALLOW NOTIFICATIONS  
  For Daily Alerts

  ಕುತೂಹಲದಿಂದ ಕಾಯುತ್ತಿದ್ದ Jr.NTR ಅಭಿಮಾನಿಗಳಿಗೆ ಭಾರಿ ನಿರಾಸೆ

  By ಫಿಲ್ಮ್ ಡೆಸ್ಕ್
  |

  ಜೂ.ಎನ್.ಟಿ.ಆರ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎಸ್.ರಾಜಮೌಳಿ ನಿರ್ದೇಶನದ ಭಾರಿ ನಿರೀಕ್ಷೆಯ ಸಿನಿಮಾ ಇದಾಗಿದ್ದು, ಈಗಾಗಲೆ ಸಾಕಷ್ಟು ಚಿತ್ರೀಕರಣ ಮಾಡಲಾಗಿದೆ. ಸದ್ಯ ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ಬಂದ್ ಆಗಿದೆ.

  ನನ್ನ ತಂದೆಯ ಬಗ್ಗೆ ಏನಾದರು ಪೋಸ್ಟ್‌ ಹಾಕ್ತಿನಿ ನಿಮಗೇನು ಅಂದ ಡಾನ್ ಜಯರಾಜ್ ಮಗ | Ajith Jayaraj

  ಈ ನಡುವೆ ನಟ ಜೂ.ಎನ್ ಟಿ ಆರ್ ಹುಟ್ಟುಹಬ್ಬ ಸಮೀಪಿಸುತ್ತಿದೆ. ಹುಟ್ಟುಹಬ್ಬಕ್ಕೆ ಆರ್ ಆರ್ ಆರ್ ಚಿತ್ರತಂಡ ಬಿಗ್ ಸರ್ಪ್ರೈಸ್ ನೀಡಲಿದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಜೂ.ಎನ್ ಟಿ ಆರ್ ಲುಕ್ ಅಥವಾ ವಿಡಿಯೋವನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ ಅಭಿಮಾನಿಗಳು ಕಾಯುತ್ತಿದ್ದರು. ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದ ಅಭಿಮಾನಿಗಳಿಗೀಗ ಚಿತ್ರತಂಡ ನಿರಾಸೆ ಮೂಡಿಸಿದೆ. ಮುಂದೆ ಓದಿ...

  Jr.NTRಗೆ ಬಿಗ್ ಸರ್ಪ್ರೈಸ್ ಕೊಡಲು 'RRR' ಸಿನಿಮಾತಂಡದ ಪ್ಲಾನ್

  ಹುಟ್ಟುಹಬ್ಬದ ಸರ್ಪ್ರೈಸ್ ಬಗ್ಗೆ ಚಿತ್ರತಂಡದ ಪ್ರತಿಕ್ರಿಯೆ

  ಹುಟ್ಟುಹಬ್ಬದ ಸರ್ಪ್ರೈಸ್ ಬಗ್ಗೆ ಚಿತ್ರತಂಡದ ಪ್ರತಿಕ್ರಿಯೆ

  ಲಾಕ್ ಡೌನ್ ಸಮಯ ಮತ್ತೆ ಮತ್ತೆ ಹೆಚ್ಚಾಗುತ್ತಿದೆ. ಇದರಿಂದ ಚಿತ್ರದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಾವು ಅಗತ್ಯ ಪ್ರಯತ್ನ ಮಾಡಿದರೂ, ತಾರಕ್ ಹುಟ್ಟುಹಬ್ಬಕ್ಕೆ ನಿಮ್ಮಲ್ಲರಿಗೂ ಟ್ರೀಟ್ ನೀಡಲು ಸಾಧ್ಯವಾಗಲಿಲ್ಲ. ಚಿತ್ರದ ಫಸ್ಟ್ ಅಥವ ವಿಡಿಯೋ ರಿಲೀಸ್ ಮಾಡುತ್ತಿಲ್ಲ" ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಸೆ ಸುದ್ದಿ ನೀಡಿದೆ.

  ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ ರಾಜಮೌಳಿ

  ರೌಜಮೌಳಿ ಪುತ್ರನ ಪ್ರತಿಕ್ರಿಯೆ

  ರೌಜಮೌಳಿ ಪುತ್ರನ ಪ್ರತಿಕ್ರಿಯೆ

  ಆರ್ ಆರ್ ಆರ್ ಸಿನಿಮಾದಲ್ಲಿ ಕೆಲ ಮಾಡುತ್ತಿರುವ ರಾಜಮೌಳಿ ಪುತ್ರ ಕಾರ್ತಿಕೇಯ ಟ್ವೀಟ್ ಮಾಡಿ "ನಿಮ್ಮಂತೆ ನಮಗೂ ನಿರಾಸೆಯಾಗಿದೆ. ವಿಡಿಯೋ ರಿಲೀಸ್ ಮಾಡಲು ತುಂಬಾ ಪ್ರಯತ್ನಪಟ್ಟೆವು. ಆದರೆ ಸಂದರ್ಭಗಳು ಸಹಾಯಮಾಡಲಿಲ್ಲ. ನಾನು ಪ್ರೋಮಿಸ್ ಮಾಡುತ್ತೇನೆ ಯಾವಾಗ ರಿಲೀಸ್ ಆಗುತ್ತೊ ಆಗ ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಲಿದೆ. ಈ ಹಂತವನ್ನು ಬೇಗ ದಾಟಿ ಮುಂದಕ್ಕೆ ಹೋಗೋಣ ಎಂದು ಪ್ರಾರ್ಥನೆ ಮಾಡೋಣ"ಎಂದು ಹೇಳಿದ್ದಾರೆ.

  ಮೇ 20 ಜೂ.ಎನ್ ಟಿ ಆರ್ ಹುಟ್ಟುಹಬ್ಬಗಳು

  ಮೇ 20 ಜೂ.ಎನ್ ಟಿ ಆರ್ ಹುಟ್ಟುಹಬ್ಬಗಳು

  ಇದೆ ತಿಂಗಳು ಮೇ 20ಕ್ಕೆ ಜೂ.ಎನ್ ಟಿ ಆರ್ ಹುಟ್ಟುಹಬ್ಬ. 37ನೇ ವಸಂತಕ್ಕೆ ಕಾಲಿಡುತ್ತಿರುವ ಜೂ.ಎನ್.ಟಿ.ಆರ್ ಈ ವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರು, ಸಿನಿಮಾತಂಡ ಅಭಿಮಾನಿಗಳ ಮನ ತಣಿಸಲಿದೆ ಎಂದು ಕಾಯುತ್ತಿದ್ದರು. ಆದರೀಗ ನಿರಾಸೆಯಾಗಿದೆ.

  ರಾಮ್ ಚರಣ್ ಗೆ ಸರ್ಪ್ರೈಸ್ ನೀಡಿತ್ತು ಸಿನಿಮಾತಂಡ

  ರಾಮ್ ಚರಣ್ ಗೆ ಸರ್ಪ್ರೈಸ್ ನೀಡಿತ್ತು ಸಿನಿಮಾತಂಡ

  ಆರ್ ಆರ್ ಆರ್ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮತ್ತೋರ್ವ ಸ್ಟಾರ್ ನಟ ರಾಮ್ ಚರಣ್ ಹುಟ್ಟುಹಬ್ಬಕ್ಕೆ ಸಿನಿಮಾತಂಡ ಸರ್ಪ್ರೈಸ್ ನೀಡಿತ್ತು. ಪುಟ್ಟ ವಿಡಿಯೋ ರಿಲೀಸ್ ಮಾಡಿ ಅಭಿಮಾನಿಗಳಿಗೆ ಹುಟ್ಟುಹಬ್ಬದ ಗಿಫ್ಟ್ ನೀಡಿತ್ತು ಸಿನಿಮಾತಂಡ. ಆದರೀಗ ಕೊರೊನಾ ಹಾವಳಿ ಪರಿಣಾಮ ಜೂ.ಎನ್ ಟಿ ಆರ್ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.

  English summary
  Rajamouli's RRR movie team will not release first look of Jr.NTR's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X