Just In
Don't Miss!
- Lifestyle
ಯುವಕರ ಹೈ ಬ್ಲಡ್ ಪ್ರೆಶರನ್ನು ಕಡಿಮೆ ಮಾಡುವ ಆಹಾರಗಳಿವು
- Sports
ಕೊಹ್ಲಿಯ ಆ ನಿರ್ಧಾರದಿಂದಲೇ ಹೈದರಾಬಾದ್ ವಿರುದ್ಧ ಗೆದ್ದೆವು: ಆರ್ಸಿಬಿ ಕೋಚ್
- News
ಆಕ್ಸಿಜನ್ ವ್ಯರ್ಥವಾಗದಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಕೇಂದ್ರದ ಸೂಚನೆ
- Finance
25,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಇನ್ಫೋಸಿಸ್
- Automobiles
ಹೊಸ ಫೀಚರ್ಸ್ಗಳೊಂದಿಗೆ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ
- Education
Kalaburagi Mahanagara Palike Recruitment 2021: 219 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪವನ್ ಕಲ್ಯಾಣ್-ಅಲ್ಲು ಅರ್ಜುನ್ ದಾಖಲೆ ಮುರಿದ ಸಾಯಿ ಪಲ್ಲವಿ
ತೆಲುಗಿನ ಸ್ಟಾರ್ ನಟರಾದ ಪವನ್ ಕಲ್ಯಾಣ್-ಅಲ್ಲು ಅರ್ಜುನ್ ಅವರುಗಳ ದಾಖಲೆಯನ್ನು ನಟಿ ಸಾಯಿ ಪಲ್ಲವಿ ಹಿಂದಿಕ್ಕಿದ್ದಾರೆ.
ನಟಿ ಸಾಯಿ ಪಲ್ಲವಿ ನಟಿಸಿರುವ 'ಲವ್ ಸ್ಟೋರಿ' ಸಿನಿಮಾದ 'ಸಾರಂಗ ದರಿಯಾ' ಹಾಡಿನ ಲಿರಿಕಲ್ ವಿಡಿಯೋ ಹಾಡು ಇತ್ತೀಚೆಗಷ್ಟೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿ ಸಖತ್ ವೈರಲ್ ಆಗಿತ್ತು. ಇದೇ ಹಾಡು ಈಗ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಅವರುಗಳ ದಾಖಲೆಯನ್ನು ಮುರಿದಿದೆ.
ಫೆಬ್ರವರಿ 28 ರಂದು ಬಿಡುಗಡೆ ಆದ 'ಸಾರಂಗ ದರಿಯಾ' ಹಾಡು ಅತ್ಯಂತ ಕಡಿಮೆ ಅವಧಿಯಲ್ಲಿ 7 ಲಕ್ಷ ಲೈಕ್ಸ್‌ಗಳನ್ನು ಗಿಟ್ಟಿಸಿದ ಹಾಡು ಎಂಬ ದಾಖಲೆ ನಿರ್ಮಿಸಿದೆ. ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಟಪುರಂಲೋ' ಸಿನಿಮಾದ 'ಸಾಮಜವರಗಮನ' ಹಾಗೂ 'ರಾಮುಲೋ-ರಾಮುಲ' ಸಿನಿಮಾದ ದಾಖಲೆಯನ್ನು 'ಸಾರಂಗ ದರಿಯಾ' ಹಾಡು ಮುರಿದಿದೆ.
ಪವನ್ ಕಲ್ಯಾಣ್ ನಟನೆಯ ಇನ್ನೂ ಬಿಡುಗಡೆ ಆಗದ 'ವಕೀಲ್ ಸಾಬ್' ಸಿನಿಮಾದ 'ಮಗುವಾ ಮಗುವಾ' ಹಾಡು ಇತ್ತೀಚೆಗೆ ಬಿಡುಗಡೆ ಆಗಿತ್ತು, ಅದೂ ಸಹ ಇಷ್ಟೋಂದು ಲೈಕ್ಸ್ ಅನ್ನು ಕೇವಲ ಹತ್ತು ದಿನದಲ್ಲಿ ಬರೆದಿರಲಿಲ್ಲ.
'ಸಾರಂಗ ದರಿಯಾ' ಹಾಡು ಕೇವಲ ಹತ್ತು ದಿನದಲ್ಲಿ 7 ಲಕ್ಷ ಲೈಕ್ಸ್ ಪಡೆಯುವ ಜೊತೆಗೆ 5.50 ಕೋಟಿಗೂ ಹೆಚ್ಚು ಬಾರಿ ನೋಡಲ್ಪಟ್ಟಿದೆ.
ಆದರೆ 'ಸಾರಂಗ ದರಿಯಾ' ಹಾಡು ವಿವಾದಕ್ಕೆ ಸಹ ಕಾರಣವಾಗಿದೆ. 'ಸಾರಂಗ ದರಿಯಾ' ಜನಪದ ಹಾಡನ್ನು ಮೊದಲು ಸಂಗ್ರಹಿಸಿದ್ದು ನಾನು, ಹಾಡಿನಲ್ಲಿ ನನಗೆ ಕ್ರೆಡಿಟ್ಸ್ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಕೋಮಲಿ ಎಂಬುವರು ಆರೋಪಿಸಿದ್ದಾರೆ.
'ಸಾರಂಗ ದರಿಯಾ' ಹಾಡನ್ನು ಮೊದಲ ಬಾರಿ ಟಿವಿ ಕಾರ್ಯಕ್ರಮವೊಂದರಲ್ಲಿ ಹಾಡಿದ್ದ ಸಿರಿಶಾ ಎಂಬುವರೂ ಸಹ ತನಗೂ ಹಾಡಿನ ಕ್ರೆಡಿಟ್ಸ್ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ವಿವಾದದ ಬಗ್ಗೆ 'ಲವ್ ಸ್ಟೋರಿ' ಸಿನಿಮಾದ ನಿರ್ದೇಶಕ ಶೇಖರ್ ಕಮ್ಮುಲ ಅವರು ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇಬ್ಬರಿಗೂ ಕ್ರೆಡಿಟ್ಸ್ ಮಾತ್ರವೇ ಅಲ್ಲದೆ ಹಣ ನೀಡುವ ಜೊತೆಗೆ. ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಿರಿಶಾ ಇಂದ ಆ ಹಾಡನ್ನು ವೇದಿಕೆ ಮೇಲೆ ಹಾಡಿಸುವುದಾಗಿ ಹೇಳಿದ್ದಾರೆ.