For Quick Alerts
  ALLOW NOTIFICATIONS  
  For Daily Alerts

  ಸಲಾರ್ ಕಾರ್ನೇಜ್‌ಗೆ ಇನ್ನೊಂದು ವರ್ಷ ಎಂದ ಚಿತ್ರತಂಡ; ಈ ಕಾರ್ನೇಜ್ ಎಂದರೇನು?

  |

  ವೈಲೆನ್ಸ್ ವೈಲೆನ್ಸ್ ವೈಲೆನ್ಸ್ ಐ ಡೋಂಟ್ ಲೈಕ್ ಇಟ್ ಎಂದು ರಾಕಿ ಭಾಯ್ ಬಾಯಲ್ಲಿ ಡೈಲಾಗ್ ಹೇಳಿಸಿಯೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ವೈಲೆಂಟ್‌ಫುಲ್ ಮಾಸ್ ಎಂಟರ್‌ಟೈನರ್ ನೀಡಿದ್ದ ಪ್ರಶಾಂತ್ ನೀಲ್ ಸದ್ಯ ಪ್ರಭಾಸ್‌ಗೆ ಸಲಾರ್ ಚಿತ್ರ ನಿರ್ದೇಶಿಸುತ್ತಿದ್ದು ಈ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಪ್ರಶಾಂತ್ ನೀಲ್ ನಿರ್ದೇಶನದ ನಾಲ್ಕನೇ ಸಿನಿಮಾ, ಮೊದಲ ತೆಲುಗು ಸಿನಿಮಾ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಡಿಯಲ್ಲಿ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾವಾಗಿದೆ.

  ಈಗಾಗಲೇ ಉಗ್ರಂ, ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಬಾರಿಸಿರುವ ಪ್ರಶಾಂತ್ ನೀಲ್ ಸಲಾರ್ ಮೂಲಕ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಹ್ಯಾಟ್ರಿಕ್ ಬಾರಿಸುವ ಕಡೆ ಹೆಜ್ಜೆ ಇಟ್ಟಿದ್ದಾರೆ. ಇನ್ನು ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗುವ ಮುನ್ನವೇ ಸಲಾರ್ ಚಿತ್ರದ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ ಇನ್ನೂ ಸಹ ಶೂಟಿಂಗ್ ಮುಕ್ತಾಯಗೊಳಿಸಿಲ್ಲ. ಮೊದಲಿಗೆ ಈ ವರ್ಷದ ಏಪ್ರಿಲ್ 14ರಂದು ಸಲಾರ್ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ಪೋಸ್ಟರ್ ಒಂದನ್ನು ಬಿಟ್ಟಿದ್ದ ಸಲಾರ್ ಚಿತ್ರತಂಡ ನಂತರ ಚಿತ್ರದ ದಿನಾಂಕವನ್ನು ಮುಂದಿನ ವರ್ಷದ ಸೆಪ್ಟೆಂಬರ್‌ಗೆ ಮುಂದೂಡಿತು.

  ಹೌದು, ಸಲಾರ್ ಚಿತ್ರ 2023ರ ಸೆಪ್ಟೆಂಬರ್ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿತ್ತು. ಇನ್ನು ನಾಳೆಯಿಂದ ಇನ್ನೊಂದು ವರ್ಷದಲ್ಲಿ ಸಲಾರ್ ಚಿತ್ರ ಬಿಡುಗಡೆಗೆ ಇನ್ನೊಂದು ವರ್ಷ ಬಾಕಿ ಇದ್ದು, ಇಂದು ಸಲಾರ್ ಚಿತ್ರದ ಅಧಿಕೃತ ಟ್ವಿಟರ್ ಖಾತೆಯಲ್ಲಿ #SalaarCarnagein1Year ಎಂಬ ಹ್ಯಾಷ್‌ಟ್ಯಾಗ್ ಅನ್ನು ಟ್ವೀಟ್ ಮಾಡಲಾಗಿದೆ. ಇನ್ನು ಈ ಟ್ವೀಟ್‌ನಲ್ಲಿ ಕಾರ್ನೇಜ್ ಎಂದು ಬಳಸಲಾಗಿದ್ದು, ಕಾರ್ನೇಜ್ ಎಂದರೆ ಹೆಚ್ಚು ಜನರನ್ನು ಒಮ್ಮೆಲೇ ಕೊಲೆ ಮಾಡುವುದು ಎಂದರ್ಥ ಅಥವಾ ಕಾರ್ನೇಜ್ ಎಂದರೆ ಹತ್ಯಾಕಾಂಡ ಎಂದು ಅರ್ಥ.

  ಈ ಮೂಲಕ ಚಿತ್ರತಂಡ ಸಲಾರ್ ಹತ್ಯಾಕಾಂಡಕ್ಕೆ ಇನ್ನೊಂದು ವರ್ಷ ಬಾಕಿ ಇದೆ ಎಂದು ಬರೆದುಕೊಂಡು ಚಿತ್ರದಲ್ಲಿ ದೊಡ್ಡ ಮಟ್ಟದ ವೈಲೆನ್ಸ್ ಹಾಗೂ ಆಕ್ಷನ್ ದೃಶ್ಯಗಳು ಇರಲಿವೆ ಎಂಬ ಸಂದೇಶವನ್ನು ನೀಡಿದೆ. ಸದ್ಯ ಸಲಾರ್ ಟ್ವಿಟ್ಟರ್ ಖಾತೆಯಿಂದ ಬಂದಿರುವ ಈ ಟ್ವೀಟ್ ವೈರಲ್ ಆಗಿದ್ದು, ಈ ಟ್ಯಾಗ್ ಟ್ರೆಂಡಿಂಗ್ ಪಟ್ಟಿ ಸೇರಿದೆ ಹಾಗೂ ಚಿತ್ರದ ಮೇಲಿನ ನಿರೀಕ್ಷೆಯನ್ನೂ ಸಹ ಹೆಚ್ಚು ಮಾಡಿದೆ.

  English summary
  Salaar in 1 year post by movie team creates huge talk on social media. Take a look
  Wednesday, September 28, 2022, 10:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X