ಟಾಕ್ ಶೋ ನಿರೂಪಣೆ ಮಾಡಲು ಸಜ್ಜಾದ ಸಮಂತಾ

ಟಾಲಿವುಡ್ ಸ್ಟಾರ್ ನಟಿ, ಅಕ್ಕಿನೇನಿ ನಾಗಾರ್ಜುನ ಸೊಸೆ ಸಮಂತಾ ಈಗ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. ಹೊಸ ಟಾಕ್ ಶೋ ನಿರೂಪಣೆ ಮಾಡಲು ಸಿದ್ಧವಾಗಿರುವ ಸಮಂತಾ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

'ಜಾನು' ಸಿನಿಮಾದಲ್ಲಿ ನಟಿಸುತ್ತಿರುವ ಸಮಂತಾ ಈಗ ಹೊಸ ಟಾಕ್ ಶೋ ಕೈಗೆತ್ತಿಕೊಂಡಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಮದುವೆ ಬಳಿಕ ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ. ಹಾಗಾಗಿ, ಟಾಕ್ ಶೋ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

ಸದ್ಯಕ್ಕೆ ಈ ಕಾರ್ಯಕ್ರಮ ಯಾವಾಗ ಆರಂಭವಾಗುತ್ತೆ, ಹೇಗಿರುತ್ತೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿಯೂ ಇಲ್ಲ. ಆದರೆ, ಇಂತಹದೊಂದು ಪ್ಲಾನ್ ಆಗಿದೆ ಎಂಬುದು ಮಾತ್ರ ತೆಲುಗು ಸಿನಿ ಉದ್ಯಮದಲ್ಲಿ ಚರ್ಚೆಯಾಗುತ್ತಿದೆ.

Samantha Akkineni Set To Host Talk Show

ಮಜಿಲಿ, ಓ ಬೇಬಿ ಅಂತಹ ಹಿಟ್ ಚಿತ್ರದ ಬಳಿಕ ಈಗ ತಮಿಳಿನ 96 ಚಿತ್ರದ ರೀಮೇಕ್ ನಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಜಾನು ಎಂದು ಹೆಸರಿಟ್ಟಿದ್ದು, ಶಾರ್ವಾನಂದ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

'ದಿ ಫ್ಯಾಮಿಲಿ ಶೋ' ವೆಬ್ ಸಿರೀಸ್ ನಲ್ಲಿ ನಟಿಸುವ ಮೂಲಕ ಸಮಂತಾ ಹಿಂದಿಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಕೊನೆಯದಾಗಿ ನಾಗಾರ್ಜುನ ನಟಿಸಿದ್ದ ಮನ್ಮಥಡು 2 ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು.

More from Filmibeat

English summary
Tollywood actress Samantha Akkineni set to host new talk show after finishing jaanu movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X