For Quick Alerts
  ALLOW NOTIFICATIONS  
  For Daily Alerts

  ನಾಗಚೈತನ್ಯ-ಸಮಂತಾ ದಂಪತಿಯ ಹೊಸ ಪ್ಲಾನ್: ಏನದು?

  |

  ಟಾಲಿವುಡ್ ಖ್ಯಾತ ನಟಿ ಸಮಂತಾ ಮದುವೆ ನಂತರವೂ ಬೇಡಕೆಯ ನಟಿಯಾಗಿ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಇತ್ತೀಚಿಗಷ್ಟೆ ಜಾನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಸಮಂತಾ ಸದ್ಯ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  'ರಂಗಸ್ಥಳಂ'ದ ಸಮಂತಾ ಶೈಲಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ | Rashmika Mandanna | FILMIBEAT KANNADA

  ಪತ್ನಿ ನಾಗಚೈತನ್ಯ ಸಹ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಲವ್ ಸ್ಟೋರಿ ಸಿನಿಮಾ ಮೂಲಕ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಈ ನಡುವೆ ಸಮಂತಾ ಮಗು ಮಾಡಿಕೊಳ್ಳುವ ಪ್ಲಾನ್ ಮಾಡಿದ್ದಾರೆ, ಕಿರುತೆರೆಗೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ, ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದರೆ ನಡುವೆ ಈಗ ಸಮಂತಾ ದಂಪತಿಯಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಮುಂದೆ ಓದಿ...

  ಸ್ವಂತ ನಿರ್ಮಾಣ ಸಂಸ್ಥೆ ಮಾಡಲು ಪ್ಲಾನ್

  ಸ್ವಂತ ನಿರ್ಮಾಣ ಸಂಸ್ಥೆ ಮಾಡಲು ಪ್ಲಾನ್

  ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ಅಕ್ಕಿನೇನಿ ದಂಪತಿ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಲು ನಿರ್ಧಾರಮಾಡಿದ್ದಾೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಈ ಸಂಸ್ಥೆಯನ್ನು ಸ್ವತಹ ಸಮಂತಾ ಅವರನೆ ಮುನ್ನಡೆಸಲಿದ್ದಾರಂತೆ.

  ನಾಗಾರ್ಜುನ ನಿರ್ಮಾಣ ಸಂಸ್ಥೆ ಇದೆ

  ನಾಗಾರ್ಜುನ ನಿರ್ಮಾಣ ಸಂಸ್ಥೆ ಇದೆ

  ಸದ್ಯಕ್ಕೆ ನಾಗಚೈತನ್ಯ ಅವರ ತಂದೆ ನಾಗಾರ್ಜುನ ಅವರ ಸ್ವಂತ ಬ್ಯಾನರ್ ಹೊಂದಿದ್ದಾರೆ. 'ಅನುಪಮಾ ಪ್ರೊಡಕ್ಷನ್' ಅಡಿಯಲ್ಲಿ ನಾಗಾರ್ಜುನ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಬ್ಯಾನರ್ ನಾಗಾರ್ಜುನ್ ನೋಡಿಕೊಳ್ಳುತ್ತಿದ್ದಾರೆ. ಆದರೀಗ ಮಗ ಮತ್ತು ಸೊಸೆ ಪ್ರತ್ಯೇಕ ಬ್ಯಾನರ್ ಸ್ಥಾಪಿಸಲು ಮುಂದಾಗಿದ್ದಾರೆ.

  ಹೊಸಬರನ್ನು ಪ್ರೋತ್ಸಾಹಿಸುವ ಅವಕಾಶ

  ಹೊಸಬರನ್ನು ಪ್ರೋತ್ಸಾಹಿಸುವ ಅವಕಾಶ

  ಸಮಂತಾ ಮತ್ತು ನಾಗಚೈತನ್ಯ ದಂಪತಿ ಸ್ಥಾಪಿಸಲಿರುವ ನಿರ್ಮಾಣ ಸಂಸ್ಥೆಯಲ್ಲಿ ಕೆಲವು ಹೊಸ ಕಲಾವಿದರನ್ನು ಪರಿಚಯಿಸುವ ಉದ್ದೇಶ ಹೊಂದಿದ್ದಾರಂತೆ. ಹೊಸ ತಂತ್ರಜ್ಞರು ಮತ್ತು ಕಲಾವಿದರಿಗೆ ಪ್ರೊತ್ಸಾಹ ನೀಡುವುದು ಇವರ ಮುಖ್ಯ ಉದ್ದೇಶವಂತೆ. ವಿಭಿನ್ನ ಸಿನಿಮಾಗಳನ್ನು ತಯಾರಿಸುವ ಪ್ಲಾನ್ ನಾಗಚೈತನ್ಯ ದಂಪತಿ ಹೊಂದಿದ್ದಾರೆ.

  4ನೇ ಬಾರಿ ನಾಗ್-ಸಮಂತಾ ಒಟ್ಟಿಗೆ ನಟನೆ

  4ನೇ ಬಾರಿ ನಾಗ್-ಸಮಂತಾ ಒಟ್ಟಿಗೆ ನಟನೆ

  ಈಗಾಗಲೆ ನಾಗಚೈತ್ಯ ಮತ್ತು ಸಮಂತಾ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಯೇ ಮಾಯಾ ಚೇಸುವೆ, ಆಟೋನಗರ್ ಸೂರ್ಯ ಮತ್ತು ಮಜಿಲಿ ಸಿನಿಮಾಗಳಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿರುವ ಈ ಜೋಡಿ ಮತ್ತೆ ನಾಲ್ಕನೇ ಬಾರಿಗೆ ಒಟ್ಟಿಗೆ ನಟಿಸುವ ತಯಾರಿ ನಡೆಸುತ್ತಿದ್ದಾರೆ.

  English summary
  Actress Samantha And Naga Chaitanya plan to start production house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X