For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ 'ಖುಷಿ'ಯ ವಿಚಾರ: ಶೀಘ್ರದಲ್ಲೇ ಸಮಂತಾ ಕಂಬ್ಯಾಕ್!

  |

  ತೆಲುಗು ನಟಿ ಸಮಂತಾ ಆರೋಗ್ಯದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದೆ. ಇಂತಹ ಸಮಯದಲ್ಲಿ ಆಂಗ್ಲ ಪತ್ರಿಕೆಯೊಂದು ಸ್ಯಾಮ್‌ ಅಭಿಮಾನಿಗಳಿಗೆ ಸಮಾಧಾನ ತರುವಂತಹ ಸುದ್ದಿ ತಿಳಿಸಿದೆ. ಸಮಂತಾ ಚೇತರಿಸಿಕೊಂಡಿರುವುದಾಗಿ ಆಕೆಯ ಸ್ನೇಹಿತರು ಹೇಳಿದ್ದಾರೆ ಎಂದು ವರದಿ ಮಾಡಿದ್ದಾರೆ.

  ಸಮಂತಾ ಮಯೋಸೈಟಿಸ್ ಎನ್ನುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಕ್ಟೋಬರ್ 29ರಂದು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ನಂತರ 'ಯಶೋದ' ಸಿನಿಮಾ ಪ್ರಚಾರ ಸಮಯದಲ್ಲೂ ಈ ಬಗ್ಗೆ ಮಾತನಾಡಿದ್ದರು. ಮಯೋಸೈಟಿಸ್‌ ವಿರುದ್ಧ ಹೋರಾಡುತ್ತಿದ್ದು, ಗೆದ್ದು ಬರುವುದಾಗಿ ಹೇಳಿದ್ದರು. ಅಭಿಮಾನಿಗಳು ಈ ವಿಷಯ ತಿಳಿದು ಆದಷ್ಟು ಬೇಗ ನೆಚ್ಚಿನ ನಟಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದರು. ಸೆಲೆಬ್ರೆಟಿಗಳು ಕೂಡ ಆಕೆಗೆ ಧೈರ್ಯದ ಮಾತುಗಳನ್ನು ಹೇಳಿದ್ದರು.

  ಈ ಕಾಯಿಲೆ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದ ಕಾರಣ, ಇದು ಮಾರಣಾಂತಿಕ ಕಾಯಿಲೆ ಎನ್ನುವಂತೆ ಕೆಲವರು ಮಾತನಾಡಿದ್ದರು. ಸಮಂತಾ ಚೇತರಿಸಿಕೊಳ್ಳುವುದೇ ಕಷ್ಟ ಎನ್ನುವಂತೆ ಬಿಂಬಿಸಿದ್ದರು. ಚೆನ್ನೈ ಚೆಲುವೆ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದಾರೆ, ಕೇರಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಮುಂದೆ ಸಿನಿಮಾಗಳಲ್ಲಿ ನಟಿಸಲ್ಲ. ಒಪ್ಪಿಕೊಂಡಿರುವ ಸಿನಿಮಾಗಳನ್ನು ಕೈಬಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಟೈಮ್ ಆಫ್ ಇಂಡಿಯಾ ವರದಿ ಪ್ರಕಾರ ಸಮಂತಾ ಈಗ ಮಯೋಸೈಟಿಸ್‌ನಿಂದ ಚೇತರಿಸಿಕೊಂಡಿದ್ದಾರಂತೆ. ಈ ವಿಚಾರವನ್ನು ಆಕೆಯ ಸ್ನೇಹಿತರು ಸ್ಪಷ್ಟಪಡಿಸಿರುವುದಾಗಿ ವರದಿ ಆಗಿದೆ.

  samantha-is-almost-recovered-now-and-is-ready-to-get-back-to-work

  ಸಮಂತಾ ಸದ್ಯ ವಿಜಯ್ ದೇವರಕೊಂಡ ನಟನೆಯ 'ಖುಷಿ' ಚಿತ್ರದಲ್ಲಿ ನಟಿಸಬೇಕಿದೆ. ಶೀಘ್ರದಲ್ಲೇ ಈ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ಈ ಬಾರಿ ಮತ್ತಷ್ಟು ಸ್ಟ್ರಾಂಗ್ ಆಗಿ ಸ್ಯಾಮ್ ವಾಪಸ್ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸಮಂತಾ ಬಗ್ಗೆ ಏನೇನೋ ಸುದ್ದಿ ಕೇಳಿಬರ್ತಿದೆ. ಅದೆಲ್ಲ ಸುಳ್ಳು. ಆಕೆ ಹುಟ್ಟು ಹೋರಾಟಗಾರ್ತಿ. ಈ ಹಿಂದೆ ನಾಗಚೈತನ್ಯಾಗೆ ಡಿವೋರ್ಸ್ ಕೊಟ್ಟಾಗಲೂ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ಅದನ್ನೆಲ್ಲಾ ಧೈರ್ಯದಿಂದ ಎದುರಿಸಿದ್ದರು. ಈಗಲೂ ಕೂಡ ಮಯೋಸೈಟಿಸ್ ವಿರುದ್ಧ ಹೋರಾಟ ಮುಂದುವರೆದಿದೆ. 'ಖುಷಿ' ನಂತರ ಬೇರೆ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಾರೆ ಎನ್ನಲಾಗ್ತಿದೆ.

  English summary
  Samantha is almost recovered now and is ready to get back to work. she is going to join the shooting of Kushi post-Sankranthi in January. know more.
  Thursday, January 5, 2023, 5:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X