For Quick Alerts
  ALLOW NOTIFICATIONS  
  For Daily Alerts

  'ಯಶೋದಾ' ಸಿನಿಮಾದಲ್ಲಿ ಸಮಂತಾ ಸಾಹಸ ನೋಡಿ ಬೆರಗಾದ ಹಾಲಿವುಡ್ ಸ್ಟಂಟ್ ಡೈರೆಕ್ಟರ್!

  |

  ಸಮಂತಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಯಶೋದಾ' ಬಿಡುಗಡೆಗೆ ಸಜ್ಜಾಗಿದೆ. ಹರಿ-ಹರೀಶ್ ಡೈರೆಕ್ಟ್ ಮಾಡಿರೋ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದೇ ನವೆಂಬರ್ 11ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

  ಈ ಸಿನಿಮಾದಲ್ಲಿ ಸಮಂತಾ ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಹಾಲಿವುಡ್ ಸಾಹಸ ನಿರ್ದೇಶಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲಸದ ಮೇಲೆ ಸಮಂತಾ ಡೆಡಿಕೇಷನ್ ನೋಡಿ ಹಾಲಿವುಡ್‌ ಸಾಹಸ ನಿರ್ದೇಶಕ ಯಾನಿಕ್ ಬೆನ್ ಬೆರಗಾಗಿದ್ದಾರೆ.

  ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ಸಮಂತಾ: ಈ ಬಾರಿ ಯಾವ ಹೀರೊಗೂ ಕಮ್ಮಿಯಿಲ್ಲ!ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ಸಮಂತಾ: ಈ ಬಾರಿ ಯಾವ ಹೀರೊಗೂ ಕಮ್ಮಿಯಿಲ್ಲ!

  'ಯಶೋದಾ' ಸಮಂತಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. ಟ್ರೈಲರ್‌ನಲ್ಲಿ ಸಮಂತಾ ಸಾಹಸಗಳನ್ನು ನೋಡಿ ಅಭಿಮಾನಿಗಳು ಬೆರಗಾಗಿದ್ದರು.

  'ಯಶೋದಾ' ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳಿಗೆ ಕಮ್ಮಿಯಿರೋಲ್ಲ ಅನ್ನೋದು ಟ್ರೈಲರ್‌ ಹೇಳುತ್ತಿದೆ. ಜೊತೆಗೆ ಸಿನಿಮಾದಲ್ಲಿ ಹೈ-ವೋಲ್ಟೇಜ್ ಫೈಟ್ಸ್ ಹಾಗೂ ಸ್ಟಂಟ್‌ಗಳು ಇವೆ. ಈ ಎಲ್ಲಾ ಸೀಕ್ವೆನ್ಸ್‌ಗಳು ಅದ್ಭುತವಾಗಿ ಮೂಡಿ ಬಂದಿರೋದಿದ್ದು ಸಮಂತಾ ಶ್ರದ್ಧೆಯಿಂದ ಎಂದು ಯಾನಿಕ್ ಬೆನ್ ಹರ್ಷ ವ್ಯಕ್ತಪಡಿಸಿದ್ದಾರೆ.

  ಹಾಗಂತ ಸಮಂತಾ ಮತ್ತು ಬೆನ್ ಒಟ್ಟಿಗೆ ಕೆಲಸ ಮಾಡುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸಮಂತಾ 'ಫ್ಯಾಮಿಲಿ ಮ್ಯಾನ್ 2' ವೆಬ್‌ಸೀರೀಸ್‌ನಲ್ಲಿ ಯಾನಿಕ್ ಬೆನ್‌ ಜೊತೆ ಕೆಲಸ ಮಾಡಿದ್ದರು. ಈಗ ಮತ್ತೆ 'ಯಶೋದಾ' ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ಕೆಲಸ ಮಾಡಿದೆ. ಹೀಗಾಗಿ ಅದ್ಭುತ ಆಕ್ಷನ್ ಸೀನ್‌ಗಳನ್ನು ನಿರೀಕ್ಷೆ ಮಾಡಬಹುದು. ಆಕ್ಷನ್ ಸೀನ್ ಅದ್ಭುತವಾಗಿ ಮುಡಿ ಬರಲು ಸಮಂತಾ ಡೆಡಿಕೇಷನ್ ಹಾಗೂ ಇಚ್ಛಾಶಕ್ತಿಯೇ ಕಾರಣ ಎಂದು ಮೆಚ್ಚಿಕೊಂಡಿದ್ದಾರೆ.

  Samantha is very dedicated in Yashoda Says Hollywood Stunt Director Yannick Ben

  ಐಕಿಡೊ, ಕಿಕ್ ಬಾಕ್ಸಿಂಗ್, ಜಿಮ್ನಾಸ್ಟಿಕಗಸ್ ಹೀಗೆ ಹಲವು ಕಲೆಗಳಲ್ಲಿ ಯಾನಿಕ್ ಬೆನ್ ಎಕ್ಸ್‌ಪರ್ಟ್. ಹಾಲಿವುಡ್‌ನ 'ಟ್ರಾನ್ಸ್ಪೋರ್ಟರ್', 'ಇನ್ಸೆಪ್ಷನ್' ಸೇರಿದಂತೆ ಬಾಲಿವುಡ್‌ನಲ್ಲಿ 'ಟೈಗರ್ ಜಿಂದಾ ಹೈ', 'ರಯೀಸ್', ತೆಲುಗಿನ 'ಅತ್ತಾರಿಂಟಿಕಿ ದಾರೇದಿ', 'ನೇನೋಕ್ಕೊಡೇನ್' ಅಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 'ಯಶೋದಾ' ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಏಕಕಾಲಕ್ಕೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

  English summary
  Samantha is very dedicated in Yashoda Says Hollywood Stunt Director Yannick Ben, Know More.
  Friday, November 4, 2022, 22:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X