For Quick Alerts
  ALLOW NOTIFICATIONS  
  For Daily Alerts

  'ಪುಷ್ಪ'ದಲ್ಲಿ ಸಮಂತಾ ಹಾಟ್ ಲುಕ್ ನೋಡಿದ್ಮೇಲೆ 'ಹೂಂ ಅಂತಿರಾ.. ಊಹೂಂ ಅಂತಿರಾ?'

  |

  ನಾಗಚೈತನ್ಯದಿಂದ ಸಮಂತಾ ದೂರ ಆಗುತ್ತಿದ್ದಂತೆ ಫುಲ್ ಫ್ರಿಯಾಗಿದ್ದಾರೆ. ತಮಗಿಷ್ಟ ಬಂದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೇವಲ ದಕ್ಷಿಣ ಭಾರತದ ಸಿನಿಮಾಗಳನ್ನಷ್ಟೇ ಅಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಲಿವುಡ್ ಸಿನಿಮಾಗಳಿಗೂ ಜೈ ಅಂತಿದ್ದಾರೆ. ಈ ಮಧ್ಯೆ ಅಲ್ಲು ಅರ್ಜುನ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಐಟಂ ಸಾಂಗಿಗೂ ಹೆಜ್ಜೆ ಹಾಕಿದ್ದಾರೆ.

  'ಪುಷ್ಪ' ಸಿನಿಮಾ ನೋಡುವುದಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳು ಹೇಗೆ ಕಾದು ಕೂತಿದ್ದಾರೋ ಹಾಗೇ ಸಮಂತಾ ಫ್ಯಾನ್ಸ್ ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಅದಕ್ಕೆ ಕಾರಣ ಇದೇ ಮೊದಲ ಬಾರಿಗೆ ಸಂಂತಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿರುವುದು. ಅದರಲ್ಲೂ ವಿಚ್ಛೇದನದ ಬಳಿಕ ಐಟಂ ಸಾಂಗ್ ಒಪ್ಪಿಕೊಂಡು ಹೆಜ್ಜೆ ಹಾಕಿರುವುದರಿಂದ ಸಿನಿಪ್ರಿಯರ ಈ ಹಾಡನ್ನು ನೋಡುವ ತವಕದಲ್ಲಿದ್ದಾರೆ. ಸದ್ಯ ಈ ಐಟಂ ಸಾಂಗಿನ ಒಂದು ಫೋಟೊ ಹೊರಬಿದ್ದಿದ್ದು ಕುತೂಹಲ ಕೆರಳಿಸಿದೆ.

  ಸಮಂತಾ ಗ್ಲಾಮರ್ ಲುಕ್‌ಗೆ ಫ್ಯಾನ್ಸ್ ಫಿದಾ

  ಸಮಂತಾ ಗ್ಲಾಮರ್ ಲುಕ್‌ಗೆ ಫ್ಯಾನ್ಸ್ ಫಿದಾ

  ಕೆಲವು ದಿನಗಳಿಂದ 'ಪುಷ್ಪ' ಚಿತ್ರದಲ್ಲಿ ಸಮಂತಾ ಐಟಂ ಸಾಂಗಿಗೆ ಹೆಜ್ಜೆ ಹಾಕುತ್ತಿದ್ದಾರೆ ಅಂದಾಗ ಅಭಿಮಾನಿಗಳ ಕಿವಿ ನೆಟ್ಟಗಾಗಿತ್ತು. ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ ಹಾಡನ್ನು ನೋಡಲು ತುದಿಗಾಲಲ್ಲಿ ನಿಂತಿದ್ದರು. ಅದಕ್ಕೆ ತಕ್ಕಂತೆ ಒಂದು ಫೋಟೊ ಹೊರಬಿದ್ದಿದೆ. ಮಾದಕ ನೋಟ ಬೀರಿದ ಸಮಂತಾ ಫೋಟೊ ಅಭಿಮಾನಿಗಳಿಗೆ ಕಿಕ್ ಮೇಲೆ ಕಿಕ್ ಕೊಡುತ್ತಿದೆ. ಒಂದೇ ಒಂದು ಫೋಟೊ ಥ್ರಿಲ್ ಆಗಿರುವ ಸಿನಿಪ್ರಿಯರಿಗೆ ನಾಳೆ (ಡಿಸೆಂಬರ್ 10) ಸಿಹಿಸುದ್ದಿ ಸಿಗಲಿದೆ.

  ಸಮಂತಾ ಐಟಂ ಸಾಂಗ್ ಲಿರಿಕಲ್ ವಿಡಿಯೋ ರಿಲೀಸ್

  ಸಮಂತಾ ಗ್ಲಾಮರ್ ಲುಕ್ ಕೊಟ್ಟು ಹೆಜ್ಜೆ ಹಾಕಿರುವ ಈ ಹಾಡು ಡಿಸೆಂಬರ್ 10 ರಂದು ಬಿಡುಗಡೆಯಾಗಲಿದೆ. ಆದರೆ, ಇದು ಕೇವಲ ಲಿರಿಕಲ್ ವಿಡಿಯೋ ಅಷ್ಟೇ. ಸಮಂತಾ ಸಾಂಗ್ ಅನ್ನು ಕಣ್ತುಂಬಿ ಕೊಳ್ಳಬೇಕು ಅಂದರೆ, ಥಿಯೇಟರ್‌ಗೆ ಹೋಗಿ ಸಿನಿಮಾವನ್ನೇ ನೋಡಬೇಕು. ಹೀಗಾಗಿ ಸಮಂತಾ ಅಭಿಮಾನಿಗಳು ಕೇವಲ ಲಿರಿಕಲ್ ವಿಡಿಯೋ ನೋಡಿ ಖುಷಿ ಪಡಬೇಕು ಅಷ್ಟೆ. ಸದ್ಯ ಇದೊಂದು ಫೋಟೊ ನೋಡಿ ಸಮಂತಾ ಥ್ರಿಲ್ ಆಗಿದ್ದಾರೆ.

  ಐಟಂ ಸಾಂಗಿಗೆ ಸಮಂತಾ ಸಂಭಾವನೆ 1.5 ಕೋಟಿ

  ಐಟಂ ಸಾಂಗಿಗೆ ಸಮಂತಾ ಸಂಭಾವನೆ 1.5 ಕೋಟಿ

  ಸಮಂತಾ ವೃತ್ತಿ ಬದುಕಿನಲ್ಲೇ ಐಟಂ ಸಾಂಗ್‌ನಲ್ಲಿ ಮಾತ್ರ ನಟಿಸಿದ ಮೊದಲ ಸಿನಿಮಾ ಪುಷ್ಪ. ಅದೂ ವಿಚ್ಛೇದನಕ್ಕೆ ಮುಂದಾದ ಬಳಿಕ ಇಂತಹದ್ದೊಂದು ಬೋಲ್ಡ್ ಸಾಂಗ್‌ನಲ್ಲಿ ನಟಿಸಿದ್ದಾರೆ. ಹೀಗಾಗಿ ಈ ಹಾಡಿನಲ್ಲಿ ನಟಿಸುವುದಕ್ಕೆ ಸಮಂತಾ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ, ಒಂದೇ ಒಂದು ಐಟಂ ಸಾಂಗಿಗೆ 1.5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅದಕ್ಕೆ ತಕ್ಕಂತೆ ಸಮಂತಾ ಐಟಂ ಸಾಂಗ್ ಕೂಡ ಟ್ರೆಂಡಿಂಗ್‌ನಲ್ಲಿದೆ.

   ಡಿಸೆಂಬರ್ 17ಕ್ಕೆ 'ಪುಷ್ಪ' ರಿಲೀಸ್

  ಡಿಸೆಂಬರ್ 17ಕ್ಕೆ 'ಪುಷ್ಪ' ರಿಲೀಸ್

  ಅಲ್ಲು ಅರ್ಜುನ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಡಿಸೆಂಬರ್ 17ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ಬಾಲಿವುಡ್ ಸೇರಿಂದಂತೆ, ತೆಲುಗಿನಲ್ಲಿ ದೊಡ್ಡ ಮಟ್ಟಕ್ಕೆ ಪ್ರಿ ರಿಲೀಸ್ ಇವೆಂಟ್‌ ಮಾಡಲು ಮುಂದಾಗಿದೆ. ಮೆಗಾಸ್ಟಾರ್‌ ಚಿರಂಜೀವಿಯಿಂದ ಹಿಡಿದು ಬಾಲಿವುಡ್‌ ಬಡಾ ಸ್ಟಾರ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.

  English summary
  Samantha look in Allu Arjun Pushpa movie photo goes viral. Samantha lyrical Item song will release in december 10th.
  Thursday, December 9, 2021, 15:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X