Don't Miss!
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Shaakuntalam trailer : ಭೂಮಿ ಮೇಲೆ ಅಪ್ಪ ಅಮ್ಮನಿಗೆ ಬೇಡವಾದ ಮೊದಲ ಮಗುವಿನ ನೋವು ನಲಿವಿನ ಕಥೆ
ನಟಿ ಸಮಂತಾ ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ನೋವಿನ ನಡುವೆಯೂ ತಮ್ಮ ಸಿನಿಮಾಗಳ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ಹೈದರಾಬಾದ್‌ನಲ್ಲಿ 'ಶಾಕುಂತಲಂ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮ ನೆರವೇರಿದೆ. ನಟಿ ಸಮಂತಾ ಕೂಡ ಭಾಗಿ ಆಗಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. 'ಯಶೋದ' ನಂತರ ಈ ಸ್ಯಾಮ್ ನಟನೆಯ ಈ ಸಿನಿಮಾ ಕೂಡ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರ್ತಿದೆ. ಕವಿರತ್ನ ಕಾಳಿದಾನ ಶಾಕುಂತಲ ನಾಟಕವನ್ನು ಆಧರಿಸಿ ನಿರ್ದೇಶಕ ಗುಣಶೇಖರ್ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಸಮಂತಾ ಶಾಕುಂತಲ ಆಗಿ ನಟಿಸಿದರೆ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಅಭಿಮಾನಿಗಳಿಗೆ
'ಖುಷಿ'ಯ
ವಿಚಾರ:
ಶೀಘ್ರದಲ್ಲೇ
ಸಮಂತಾ
ಕಂಬ್ಯಾಕ್!
ಬಹಳ ಅದ್ಧೂರಿಯಾಗಿ 'ಶಾಕುಂತಲಂ' ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಫಿಕ್ಸ್ ಮಾಯಾಜಾಲದಲ್ಲಿ ಚಿತ್ರವನ್ನು ಅದ್ಧೂರಿಯಾಗಿ ತೋರಿಸುವ ಪ್ರಯತ್ನ ನಡೆದಿದೆ. ಮಣಿಶರ್ಮಾ ಮ್ಯೂಸಿಕ್ ಬಲ ಈ ಪೌರಾಣಿಕ ಕಥಾಹಂದರದ ಚಿತ್ರಕ್ಕಿದೆ.

'ಶಾಕುಂತಲಂ' ಟ್ರೈಲರ್ ಹೇಗಿದೆ?
ಮಹಾಭಾರತದ ದುಷ್ಯಂತ, ಶಕುಂತಲ ಪ್ರೇಮಕಾವ್ಯದ ಕಥೆಯನ್ನು ಕೇಂದ್ರವಾಗಿಟ್ಟಿಕೊಂಡು ಯಾವುದೇ ಸಿನಿಮಾ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಅಂತಹ ಪ್ರಯತ್ನ ನಡೆದಿದೆ. ಶಕುಂಲತ ಜನನದಿಂದ ಸಿನಿಮಾ ಕಥೆ ಆರಂಭ ಆಗುತ್ತದೆ ಎನ್ನುವುದು ಟ್ರೈಲರ್‌ನಲ್ಲಿ ಗೊತ್ತಾಗ್ತಿದೆ. ಶಾಕುಂತಲೆ ಜನನ, ಯವ್ವನದಲ್ಲಿ ಪ್ರೀತಿ ಪ್ರೇಮ, ನಂತರ ಎದುರಾಗುವ ಸಮಸ್ಯೆಗಳು, ಹೀಗೆ ಎಮೋಷನಲ್ ಜರ್ನಿಯನ್ನು ತೋರಿಸಲಾಗಿದೆ. ಭೂಮಿ ಮೇಲೆ ಅಪ್ಪ ಅಮ್ಮನಿಗೆ ಬೇಡವಾದ ಮೊದಲ ಮಗು, ವಿಶ್ವಾಮಿತ್ರಾ- ಮೇನಕೆಯ ಪ್ರೀತಿಯ ಸಂಕೇತವಾಗಿ ಜನಿಸಿದ ಮಗು ಎನ್ನುತ್ತಾ ಟ್ರೈಲರ್ ಆರಂಭವಾಗುತ್ತದೆ.

ಶಾಕುಂಲತೆಯಾಗಿ ಸಮಂತಾ ಮೋಡಿ
ಟೈಟಲ್ ರೋಲ್‌ನಲ್ಲಿ ಸಮಂತಾ ನಟಿಸಿದ್ದು, ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಮೋಡಿ ಮಾಡಿದ್ದಾರೆ. ಅರಣ್ಯದಲ್ಲಿ ತನ್ನ ಸ್ನೇಹಿತೆಯರ ಜೊತೆ ನಲಿಯುತ್ತಾ ಇರುವ ಶಾಕುಂತಲೆಯನ್ನು ತೋರಿಸಿದ್ದಾರೆ. ದುಷ್ಯಂತ ಮಹಾರಾಜ ಆಕೆಯನ್ನು ನೋಡುವುದು, ಪ್ರೀತಿಸುವುದನ್ನು ನೋಡಬಹುದು. ಮುಂದೆ ಎದುರಾಗುವ ಕಷ್ಟಗಳು, ಆಕೆಯ ಕರ್ಮಫಲ, ದುರ್ವಾಸ ಮುನಿಗಳ ಶಾಪದಿಂದ ಏನೆಲ್ಲಾ ನೋವು ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಕಟ್ಟಿಕೊಡಲಾಗಿದೆ. ಪ್ರಕಾಶ್ ರಾಜ್, ಮೋಹನ್ ಬಾಬುರಂತಹ ಘಟಾನುಘಟಿ ಕಲಾವಿದರ ಸಾಥ್ ಸಿಕ್ಕಿದೆ.

ಸಿನಿಮಾ ಗ್ರಾಫಿಕ್ಸ್ ಬಗ್ಗೆ ಚರ್ಚೆ
ಪವರ್‌ಫುಲ್ ಡೈಲಾಗ್ಸ್ ಜೊತೆಗೆ ಟ್ರೈಲರ್‌ನ ಚೆಂದಗಾಣಿಸುವ ಪ್ರಯತ್ನ ನಡೆದಿದೆ. ಗ್ರಾಫಿಕ್ಸ್ ಗುಣಮಟ್ಟ ಅಷ್ಟೇನು ಚೆನ್ನಾಗಿಲ್ಲ, ಹಿಂದಿ ಕಿರುತೆರೆ ಧಾರಾವಾಹಿಗಳನ್ನು ನೆನಪಿಸುವಂತೆ ಕಾಣುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲವರು ಮಾತ್ರ ಪ್ರಭಾಸ್ 'ಆದಿಪುರುಷ್' ಸಿನಿಮಾ ಗ್ರಾಫಿಕ್ಸ್‌ಗಿಂತ ಇದೇ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನಿರ್ದೇಶಕ ಗುಣಶೇಖರ್ ತಾವೇ ಸಿನಿಮಾ ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ಭರತನಾಗಿ ಅಲ್ಲು ಅರ್ಹಾ
ಇನ್ನು 'ಶಾಕುಂತಲಂ' ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಕೂಡ ಬಣ್ಣ ಹಚ್ಚಿದ್ದಾರೆ. ಟ್ರೈಲರ್ ಕೊನೆಯಲ್ಲಿ ಬಾಲ ಭರತನ ಪಾತ್ರದಲ್ಲಿ ಅಲ್ಲು ಅರ್ಹಾ ಸಿಂಹ ಏರಿ ಬರುವುದನ್ನು ನೋಡಬಹುದು. ಫೆಬ್ರವರಿ 17ಕ್ಕೆ 'ಶಾಕುಂತಲಂ' ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗ್ತಿದೆ. ಕನ್ನಡದಲ್ಲೀ ಟ್ರೈಲರ್ ರಿಲೀಸ್ ಆಗಿದೆ. ಮಯೋಸೈಟಿಸ್ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿರುವ ಸಮಂತಾ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗಲಿದ್ದಾರೆ.