For Quick Alerts
  ALLOW NOTIFICATIONS  
  For Daily Alerts

  ಸಮಂತಾ ಅಭಿನಯದ 'ಯಶೋದಾ' ಚಿತ್ರದ ಮೊದಲ 3 ದಿನಗಳ ಕಲೆಕ್ಷನ್; ಸಮಂತಾ ಬಾಕ್ಸ್ಆಫೀಸ್ ಪವರ್!

  |

  ನಟಿ ಸಮಂತಾ ವಿವಾಹ ವಿಚ್ಛೇದನ ಪಡೆದುಕೊಂಡ ನಂತರ ಬಿಡುಗಡೆಯಾದ ಮೊದಲ ತೆಲುಗು ಚಿತ್ರ ಯಶೋದಾ ಎಲ್ಲೆಡೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ನಟ ನಾಗಚೈತನ್ಯರಿಂದ ವಿವಾಹ ವಿಚ್ಛೇದನ ಪಡೆದ ಸಮಂತಾ ಪುಷ್ಪ ಪಾರ್ಟ್ 1 ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು ಹಾಗೂ ತಮಿಳಿನ ಕಾದುವಾಕುಲ ರೆಂಡು ಕಾದಲ್ ಎಂಬ ಚಿತ್ರದಲ್ಲಿಯೂ ಹಾಟ್ ಆಗಿ ಕಾಣಿಸಿಕೊಂಡಿದ್ದರು.

  ಹೀಗೆ ಈ ಎರಡೂ ಚಿತ್ರಗಳಲ್ಲಿಯೂ ತುಂಬಾ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ನಟಿ ಸಮಂತಾ ವಿಚ್ಛೇದನದ ಬಳಿಕ ಕಂಟೆಂಟ್ ಇಲ್ಲದ ಗ್ಲಾಮರಸ್ ಚಿತ್ರಗಳಲ್ಲಿ ಮಾತ್ರ ನಟಸುತ್ತಿದ್ದಾರೆ ಎಂಬ ದೊಡ್ಡ ಆರೋಪ ಹಾಗೂ ಟ್ರೋಲ್ ಶುರುವಾಗಿತ್ತು. ಆದ್ರೆ ಈ ಎಲ್ಲಾ ಟೀಕೆಗಳಿಗೆ ನಟಿ ಸಮಂತಾ ತನ್ನ ನೂತನ ಚಿತ್ರ ಯಶೋದಾ ಮೂಲಕ ತಿರುಗೇಟು ನೀಡಿದ್ದಾರೆ.

  ಜಿಲೇಬಿ ಕೊಟ್ಟಿದ್ದಕ್ಕೆ ಪ್ರೀತಿಯ ಅಪ್ಪುಗೆ: ಸದಾ ನನ್ನೊಟ್ಟಿಗೆ ಇದ್ದಿದ್ದಕ್ಕೆ ಥ್ಯಾಂಕ್ಸ್ ಎಂದ ಸಮಂತಾ ಜಿಲೇಬಿ ಕೊಟ್ಟಿದ್ದಕ್ಕೆ ಪ್ರೀತಿಯ ಅಪ್ಪುಗೆ: ಸದಾ ನನ್ನೊಟ್ಟಿಗೆ ಇದ್ದಿದ್ದಕ್ಕೆ ಥ್ಯಾಂಕ್ಸ್ ಎಂದ ಸಮಂತಾ

  ಕಳೆದ ಶುಕ್ರವಾರ ( ನವೆಂಬರ್ 11 ) ವಿಶ್ವದಾದ್ಯಂತ ಬಿಡುಗಡೆಗೊಂಡ ಯಶೋದಾ ಒಳ್ಳೆಯ ಓಪನಿಂಗ್ ಪೆಡೆದುಕೊಂಡಿತ್ತು. ಮೊದಲ ದಿನದ ಮುಂಗಡ ಬುಕಿಂಗ್ ಮೂಲಕವೇ 1.4 ಕೋಟಿ ಕಲೆಹಾಕಿ ಅಬ್ಬರಿಸುವ ಮುನ್ಸೂಚನೆ ನೀಡಿದ್ದ ಸಮಂತಾ ಅಭಿನಯದ ಯಶೋದಾ ನಿರೀಕ್ಷೆಯಂತೆಯೇ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ.

  3 ದಿನಗಳ ಕಲೆಕ್ಷನ್ ಎಷ್ಟು?

  3 ದಿನಗಳ ಕಲೆಕ್ಷನ್ ಎಷ್ಟು?

  ಸಮಂತಾ ರುಥ್ ಪ್ರಭು ಅಭಿನಯದ ಯಶೋದಾ ಚಿತ್ರ ಮೊದಲ ದಿನ ವಿಶ್ವದಾದ್ಯಂತ 20 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಇತ್ತೀಚಿನ ದಿನಗಳಲ್ಲಿ ತೆಲುಗಿನ ಸ್ಟಾರ್ ನಟರ ಚಿತ್ರಗಳೂ ಪಡೆದುಕೊಳ್ಳದಿದ್ದಂತಹ ಓಪನಿಂಗ್ ಅನ್ನು ಯಶೋದಾ ಚಿತ್ರ ಪಡೆದುಕೊಂಡಿದೆ. ಮೊದಲ ಮೂರು ದಿನಗಳಲ್ಲಿ ಉತ್ತಮ ಗಳಿಕೆ ಮಾಡಿರುವ ಯಶೋದಾ ಚಿತ್ರದ ನಾಲ್ಕನೇ ದಿನದ ಬುಕಿಂಗ್ ಕೂಡ ಉತ್ತಮವಾಗಿದ್ದು ಈ ದಿನವೂ ಸಹ ಚಿತ್ರ ದೊಡ್ಡ ಕಲೆಕ್ಷನ್ ಮಾಡಲಿದೆ.

  ಕಲೆಕ್ಷನ್ ಕೇಳಿ ಖುಷ್ ಆದ ಸಮಂತಾ

  ಕಲೆಕ್ಷನ್ ಕೇಳಿ ಖುಷ್ ಆದ ಸಮಂತಾ

  ತಾನು ಅಭಿನಯಿಸಿರುವ ಯಶೋದಾ ಚಿತ್ರ ಮೊದಲ ವೀಕೆಂಡ್ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬು ವಿಷಯ ತಿಳಿದ ಕೂಡಲೇ ಇದು ನನ್ನ ಜೀವನದ ಅತ್ಯುತ್ತಮ ವೀಕೆಂಡ್ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ತನ್ನ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿ ಎಂಬುದನ್ನು ನಟಿ ವ್ಯಕ್ತಪಡಿಸಿದ್ದಾರೆ.

  ಮೊದಲ ದಿನವೇ 6 ಕೋಟಿ

  ಮೊದಲ ದಿನವೇ 6 ಕೋಟಿ

  ಇನ್ನು ಯಶೋದಾ ಚಿತ್ರ ಬಿಡುಗಡೆ ದಿನವೇ ವಿಶ್ವದಾದ್ಯಂತ 6.32 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಮೊದಲ ಶೋ ವೀಕ್ಷಿಸಿ ಹೊರಬಂದ ಸಿನಿ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟರು. ಹೀಗೆ ಮೊದಲ ಶೋನಿಂದಲೇ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳಲು ಆರಂಭಿಸಿದ ಯಶೋದಾ ಚಿತ್ರ ಈಗಾಗಲೇ ಬುಕ್ ಮೈ ಶೋನಲ್ಲಿ ಹದಿನೈದು ಸಾವಿರ ವೋಟ್‌ಗಳನ್ನು ಪೂರೈಸಿದೆ ಹಾಗೂ 10ಕ್ಕೆ 8.7 ರೇಟಿಂಗ್ ಹಾಗೂ ಐಎಂಡಿಬಿಯಲ್ಲಿ ಸದ್ಯ 10ಕ್ಕೆ 8.6 ರೇಟಿಂಗ್ ಪಡೆದುಕೊಂಡಿದೆ.

  ಅಮೆರಿಕಾದಲ್ಲಿ ಸಮಂತಾ ಪವರ್

  ಅಮೆರಿಕಾದಲ್ಲಿ ಸಮಂತಾ ಪವರ್

  ಯಶೋದಾ ಚಿತ್ರ ಮೊದಲ ಮೂರು ದಿನಗಳಲ್ಲಿ ಅಮೆರಿಕಾ ಒಂದರಲ್ಲಿಯೇ 4 ಲಕ್ಷ ಡಾಲರ್‌ಗಳನ್ನು ಸಂಪಾದಿಸಿದೆ. ಮೊದಲ ಮೂರು ದಿನಗಲ್ಲಿ ಇಷ್ಟು ವೇಗವಾಗಿ ಅಮೆರಿಕಾದಲ್ಲಿ 4 ಲಕ್ಷ ಡಾಲರ್ ಕಲೆಕ್ಷನ್ ಮಾಡಿದ ತೆಲುಗು ಚಿತ್ರ ಯಾವುದೂ ಇಲ್ಲ ಎನ್ನಬಹುದು. ತೆಲುಗಿನ ಘಟಾನುಘಟಿ ಸ್ಟಾರ್ ನಟರ ಚಿತ್ರಗಳೇ ಇಂತಹ ಒಳ್ಳೆಯ ಓಪನಿಂಗ್ ಪಡೆದುಕೊಳ್ಳಲಾಗದೇ ಮಕಾಡೆ ಮಲಗಿದರೆ ಸಮಂತಾ ಅಭಿನಯದ ಯಶೋದಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.

  English summary
  Samantha Ruth Prabhu starrer Yashoda grossed 20 crores in 3 days. Read on
  Monday, November 14, 2022, 16:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X