Don't Miss!
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್ನೂ ಗುಣಮುಖರಾಗಿಲ್ಲ ಸಮಂತಾ: ಹೆಚ್ಚಿನ ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ಶಿಫ್ಟ್?
ಟಾಲಿವುಡ್ ಸ್ಟಾರ್ ನಟಿ ಸಮಂತಾ ಅನಾರೋಗ್ಯದಿಂದ ಬಳಲುತ್ತಿರೋದು ಗೊತ್ತೇ ಇದೆ. ಬಹಳ ದಿನಗಳಿಂದ ಸಮಂತಾ ಮಯೊಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇನ್ನೇನು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ ಅನ್ನುವಾಗಲೇ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ಸಮಂತಾ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿಲ್ಲ. ಮಯೊಸೈಟಿಸ್ ಸಂಪೂರ್ಣವಾಗಿ ಇನ್ನೂ ಗುಣಮುಖವಾಗಿಲ್ಲ. ಹೀಗಾಗಿ ಸಮಂತಾ ವಿದೇಶಕ್ಕೆ ತೆರಳಲಿದ್ದು, ಬಹಳ ದಿನಗಳವರೆಗೆ ಚಿಕಿತ್ಸೆಯನ್ನು ಪಡೆಯಲಿದ್ದಾರೆ ಅನ್ನೋ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಸಮಂತಾ
ಅಭಿನಯದ
'ಯಶೋದಾ'
ಮೊದಲ
ವಾರದ
ಕಲೆಕ್ಷನ್
ಎಷ್ಟು?
ಲಾಭ
ಪಡೆಯಲು
ಇನ್ನೆಷ್ಟು
ಗಳಿಸಬೇಕು?
ಇತ್ತೀಚೆಗಷ್ಟೇ ಸಮಂತಾ ಅಭಿನಯದ 'ಯಶೋದಾ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದ ಪ್ರಚಾರದ ವೇಳೆ ಸಮಂತಾ ಕಾಣಿಸಿಕೊಂಡಿದ್ದು ಬಿಟ್ಟರೆ ಮತ್ತೆ ಎಲ್ಲೂ ಕಂಡಿಲ್ಲ. ಹೀಗಾಗಿ ಈ ಹಾರಿದಾಡುತ್ತಿರುವ ಸುದ್ದಿಯಿಂದ ಅಭಿಮಾನಿಗಳು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಸಮಂತಾ ದಕ್ಷಿಣ ಕೊರಿಯಾಗೆ ಶಿಫ್ಟ್?
ಸಮಂತಾ ಇನ್ನೇನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಮುಖರಾಗಿ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಸಮಂತಾ ಇನ್ನೂ 'ಮಯೊಸೈಟಿಸ್' ಖಾಯಿಲೆಯಿಂದ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ಅವರನ್ನು ಶಿಫ್ಟ್ ಮಾಡಲಾಗಿದೆ ಅನ್ನೋ ವಿಷಯ ಕೇಳಿ ಬರುತ್ತಿದೆ.

ಸಮಂತಾ ಆಪ್ತರು ಹೇಳಿದ್ದೇನು?
ಕೆಲವು ದಿನಗಳ ಹಿಂದೆ ಸಮಂತಾ ಆರೋಗ್ಯ ತೀರಾ ಹದಗೆಟ್ಟಿದೆ. ಹೀಗಾಗಿ ಅವರನ್ನು ಅಪೋಲೊ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸುದ್ದಿ ಹರಿದಾಡಿತ್ತು. ಈ ವಿಷಯ ಎಲ್ಲಾ ಕಡೆ ವೈರಲ್ ಆಗುತ್ತಿದ್ದಂತೆ ಸಮಂತಾ ಆಪ್ತರು ಪ್ರತಿಕ್ರಿಯೆ ನೀಡಿದ್ದಾರೆ. ಸಮಂತಾ ಹೈದರಾಬಾದ್‌ನ ಮನೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈ ಹಬ್ಬಿರುವ ಸುದ್ದಿಯೆಲ್ಲಾ ಸುಳ್ಳು ಎಂದು ಪ್ರತಿಕ್ರಿಯೆ ನೀಡಿದ್ದರು. ಆ ಬಳಿಕ ಅಭಿಮಾನಿಗಳ ಆತಂಕ ದೂರವಾಗಿತ್ತು. ಆದ್ರೀಗ ಮತ್ತೆ ಟೆನ್ಷನ್ ಶುರುವಾಗಿದೆ.

ಆಯುರ್ವೇದಕ್ಕೆ ಶಿಫ್ಟ ಆದ ಸಮಂತಾ?
ಸಮಂತಾ ತನಗೆ ಮಯೊಸೈಟಿಸ್ ಇದೆ ಅನ್ನೋ ಗೊತ್ತಾಗುತ್ತಿದ್ದಂತೆ ಅಮೆರಿಕಾಗೆ ತೆರಳಿದ್ದರು. ಕೆಲ ಕಾಲ ಅಲ್ಲಿಯೇ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದರು. ಭಾರತಕ್ಕೆ ಬಂದ ಬಳಿಕವೂ ಸಮಂತಾ ಚಿಕಿತ್ಸೆಯನ್ನು ಮುಂದುವರೆಸಿದ್ದರು. ಆದ್ರೀಗೆ ಆಯುರ್ವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದು ಮುಗಿದ ಬಳಿಕ ದಕ್ಷಿಣ ಕೊರಿಯಾಗೆ ಹೆಚ್ಚಿನ ಚಿಕಿತ್ಸೆಗೆ ತೆರಳಲಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ತನ್ನ ಸ್ಕಿನ್‌ಗೆ ಸಂಬಂಧಿಸಿದ ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ತೆರಳುತ್ತಿದ್ದಾರೂ ಅಂತಾನೂ ಸುದ್ದಿ ಹಬ್ಬಿದೆ. ಅಸಲಿಗೆ ಸಮಂತಾ ಆರೋಗ್ಯ ಹೇಗಿದೆ? ಅನ್ನೋದು ನಿಖರವಾಗಿ ಗೊತ್ತಿಲ್ಲ.

ಸಮಂತಾ ಸಿನಿಮಾಗಳ ಗತಿಯೇನು?
ಸಮಂತಾ ಈಗಾಗಲೇ ಹಲವು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಫ್ಯಾಮಿಲಿ ಮ್ಯಾನ್' ಬಳಿಕ ಬಾಲಿವುಡ್ ಸಿನಿಮಾದಲ್ಲಿ ನಟಿಸಬೇಕಿತ್ತು. ಅದಕ್ಕೂ ವೇದಿಕೆ ಸಿದ್ಧವಾಗಿತ್ತು. ಇನ್ನೊಂದು ಕಡೆ ಸಮಂತಾ ಹಾಲಿವುಡ್ ಸಿನಿಮಾ ಕೂಡ ಶುರುವಾಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ವಿಜಯ್ ದೇವರಕೊಂಡ ಜೊತೆ ಆರಂಭವಾದ 'ಖುಷಿ' ಸಿನಿಮಾ ಕೂಡ ಅರ್ಧಕ್ಕೆ ನಿಂತಿದೆ. ಹೀಗಾಗಿ ಈ ಸಿನಿಮಾ ಗತಿಯೇನು? ಅನ್ನೋ ಪ್ರಶ್ನೆ ಎದುರಾಗಿದೆ.