For Quick Alerts
  ALLOW NOTIFICATIONS  
  For Daily Alerts

  'ಪುಷ್ಪ' ಐಟಂ ಸಾಂಗ್‌ಗೆ ಹೆಜ್ಜೆ ಹಾಕಲು ಸಮಂತಾ ಪಟ್ಟ ಪಾಡು ಅಷ್ಟಿಲ್ಲ: ವಿಡಿಯೋ ನೋಡಿ

  |

  ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಐಕಾನ್ ಸ್ಟಾರ್‌ ಇಮೇಜ್‌ಗೆ ಹೇಳಿ ಮಾಡಿಸಿದ ಸಿನಿಮಾ ಅಂತ ಹೇಳಲಾಗುತ್ತಿದೆ. ಆದರೆ, ಅಲ್ಲು ಅರ್ಜುನ್ ಜೊತೆನೇ ಐಟಂ ಸಾಂಗಿಗೆ ಹೆಜ್ಜೆ ಹಾಕಿದ್ದ ಸಮಂತಾ ಬಗ್ಗೆನೂ ಮೆಚ್ಚುಗೆ ಮಾತುಗಳು ವ್ಯಕ್ತವಾಗಿದ್ದವು. ದೇವಿಶ್ರೀ ಪ್ರಸಾದ್ ಟ್ಯೂನ್‌ಗೆ ಹೆಜ್ಜೆ ಹಾಕಿದ್ದ ಸಮಂತಾಗೆ ಥಿಯೇಟರ್‌ಗಳಲ್ಲಿ ಶಿಳ್ಳೆಗಳು ಬಿದ್ದಿದ್ದವು.

  ಸಮಂತಾ ಮಾದಕ ಹೆಜ್ಜೆಗೆ ಸಿನಿಪ್ರಿಯರು ಫಿದಾ ಆಗಿದ್ದರು. ಥಿಯೇಟರ್‌ನಲ್ಲಿ ಸಮಂತಾ 'ಊ ಅಂಟಾವಾ, ಊಹೂಂ ಅಂಟಾವಾ' ಅಂತ ಹೆಜ್ಜೆ ಹಾಕುತ್ತಾ ತೆರೆಮೇಲೆ ಬರುತ್ತಿದ್ದಂತೆ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದಿದ್ದರು. ಆದರೆ, ಈ ಹಾಡು ಇಷ್ಟೊಂದು ಸದ್ದು ಮಾಡುವುದರ ಹಿಂದೆ ಸಮಂತಾ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಐಟಂ ಸಾಂಗಿಗೆ ಸಮಂತಾ ಹಾರ್ಡ್ ವರ್ಕ್ ಹೇಗಿತ್ತು? ಅನ್ನುವುದಕ್ಕೆ ವಿಡಿಯೋವೊಂದು ರಿಲೀಸ್ ಆಗಿದೆ.

  ಸಮಂತಾ ಪೂರ್ವಾಭ್ಯಾಸ ಹೇಗಿತ್ತು?

  ಸಮಂತಾ ಪೂರ್ವಾಭ್ಯಾಸ ಹೇಗಿತ್ತು?

  ಪುಷ್ಪ ಸಿನಿಮಾದ 'ಊ ಅಂಟಾವಾ, ಊಹೂಂ ಅಂಟಾವಾ' ಸಿನಿಮಾದ ಹಾಡು ಹಿಟ್ ಆಗಿದ್ದಕ್ಕೆ ಸಮಂತಾ ಅಲ್ಲದೆ ಮತ್ಯಾರೂ ಕಾರಣರಲ್ಲ. ಯಾಕಂದ್ರೆ, ಪುಷ್ಪದ ಹಾಡಿಗೆ ಹೆಜ್ಜೆ ಹಾಕುವ ಮುನ್ನ ಸಮಂತಾ ಸಾಕಷ್ಟು ಬಾರಿ ರಿಹರ್ಸಲ್ ಮಾಡಿದ್ದರು. ಜಿಮ್‌ನಲ್ಲಿ ದೇಹ ದಣಿಸಿದ್ದರು. ದೇವಿಶ್ರೀ ಪ್ರಸಾದ್ ಹಾಕಿದ್ದ ಟ್ಯೂನ್‌ಗೆ ತಕ್ಕಂತೆ ಹೆಜ್ಜೆ ಹಾಕಿದ್ದರು. ಮಿರರ್ ಮುಂದೆ ರಾಗಕ್ಕೆ ತಕ್ಕಂತೆ ಹೆಜ್ಜೆ. ಹೆಜ್ಜೆಗೆ ತಕ್ಕಂತೆ ಎಕ್ಸ್‌ಪ್ರೆಷನ್ ನೀಡುವುದನ್ನು ಅಭ್ಯಾಸ ಮಾಡಿದ್ದರು.

  ಪರಿಶ್ರಮಕ್ಕೆ ತಕ್ಕ ಬೆಲೆ-ಸಮಂತಾ

  ಪರಿಶ್ರಮಕ್ಕೆ ತಕ್ಕ ಬೆಲೆ-ಸಮಂತಾ

  ಸ್ವತ: ಸಮಂತಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ "ರಿಹರ್ಸಲ್ ತನ್ನ ಶಕ್ತಿ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸಿತ್ತು." ಎಂದು ಸಮಂತಾ ಹೇಳಿದ್ದಾರೆ. ಈ ವಿಡಿಯೋ ಸಮಂತಾ ಒಂದು ಹಾಡಿಗೆ ಎಷ್ಟು ಹಾರ್ಡ್ ವರ್ಕ್ ಮಾಡುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಪುಷ್ಪ ಸಿನಿಮಾ ಊ ಅಂಟಾವಾ, ಊಹೂಂ ಅಂಟಾವಾ ಸಿನಿಮಾದ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದಲ್ಲಿಂದ ಸದ್ದು ಮಾಡುತ್ತಿದೆ. 'ಪುಷ್ಪ' ಸಿನಿಮಾದ ಹಾಡುಗಳು ಗೆಲ್ಲುವುದಕ್ಕೆ ಸಮಂತಾ ಐಟಂ ಸಾಂಗ್ ಕೂಡ ಪ್ರಮುಖ ಕಾರಣ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದಕ್ಕೆ ಸಮಂತಾ ಅವರ ಈ ರಿಹರ್ಸಲ್ ವಿಡಿಯೋ ಸಾಕ್ಷಿಯಂತಿದೆ.

  ಉತ್ತಮ ಸಾಧನೆ ಮಾಡಲು ಶ್ರಮಿಸುತ್ತಿದ್ದೇನೆ

  'ಪುಷ್ಪ' ಸಿನಿಮಾದ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕುತ್ತಿದ್ದಂತೆ ಸಮಂತಾ ಫೋಟೊವೊಂದನ್ನು ಶೇರ್ ಮಾಡಿದ್ದರು. ಅಲ್ಲದೆ ಇನ್‌ಸ್ಟಾಗ್ರಾಂನಲ್ಲಿ ಐಟಂ ಸಾಂಗ್‌ ಬಗ್ಗೆ ಬರೆದುಕೊಂಡಿದ್ದರು. " ನಾನು ಉತ್ತಮವಾಗಿ ಹೆಜ್ಜೆ ಹಾಕಿದೆ. ನಾನು ಕೆಟ್ಟದಾಗಿ ಹೆಜ್ಜೆ ಹಾಕಿದೆ. ನಾನು ತಮಾಷೆಯಾಗಿದ್ದೆ. ನಾನು ಗಂಭೀರವಾಗಿದ್ದೆ. ನಾನು ನಿರೂಪಣೆ ಮಾಡಿದೆ. ನಾನು ತೆಗೆದುಕೊಂಡು ಎಲ್ಲಾ ನಿರ್ಧಾರದಲ್ಲೂ ಉತ್ತಮ ಸಾಧನೆ ಮಾಡಲು ನಾನು ತುಂಬಾ ಶ್ರಮಿಸುತ್ತೇನೆ. ಆದರೆ, ಸೆಕ್ಸಿಯಾಗಿ ಕಾಣಿಸಿಕೊಳ್ಳುವುದು ಮತ್ತೊಂದು ಲೆವೆಲ್‌ನ ಹಾರ್ಡ್ ವರ್ಕ್." ಎಂದು ಸಮಂತಾ ಬರೆದುಕೊಂಡಿದ್ದರು.

  300 ಕೋಟಿ ದಾಟಿದ 'ಪುಷ್ಪ'

  300 ಕೋಟಿ ದಾಟಿದ 'ಪುಷ್ಪ'

  ಸಮಂತಾ ಐಟಂ ಸಾಂಗ್ ಹಾಗೂ ಅಲ್ಲು ಅರ್ಜುನ್ 'ಪುಷ್ಪ' ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದೆ. ಹಿಂದಿ, ತೆಲುಗು, ತಮಿಳು ಸೇರಿದಂತೆ ಮಲಯಾಳಂನಲ್ಲೂ ಉತ್ತಮ ಗಳಿಕೆಯನ್ನು ಕಂಡಿದೆ. ಒಂದು ಅಂದಾಜಿನ ಪ್ರಕಾರ 'ಪುಷ್ಪ' ಸಿನಿಮಾದ ಬಾಕ್ಸಾಫೀಸ್‌ನಲ್ಲಿ 300 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಟಾಲಿವುಡ್ ವರದಿ ಮಾಡಿದೆ.

  English summary
  The behind-the-scenes video of the song “Oo Antava Oo Oo Antava” from the latest Telugu blockbuster Pushpa: The Rise was released. The video shows Samantha putting in a lot of hard work at her gym, practicing steps.
  Friday, January 7, 2022, 10:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X