For Quick Alerts
  ALLOW NOTIFICATIONS  
  For Daily Alerts

  ರಾಜಾ ರವಿವರ್ಮ ಪ್ರಸಿದ್ಧ ಕಲಾಕೃತಿಗಳಿಗೆ ಜೀವ ತುಂಬಿದ ತೆಲುಗು ನಟಿಯರು

  |

  ಭಾರತ ದೇಶಕಂಡ ಸುಪ್ರಸಿದ್ಧ ವರ್ಣಚಿತ್ರಕಾರ ರಾಜಾ ರವಿವರ್ಮ. ಇವರ ಕಲಾಕೃತಿಗಳಿಗೆ ಮಾರುಹೋಗದವರೆ ಇಲ್ಲ. ಇಂದಿಗೂ ಅವರ ವರ್ಣಚಿತ್ರಗಳನ್ನು ಲಕ್ಷ ಲಕ್ಷ ರೂಪಾಯಿ ನೀಡಿ ಖರೀದಿ ಮಾಡುತ್ತಾರೆ. ರವಿ ವರ್ಮಾನ ಕುಂಚದಲ್ಲಿ ಅರಳಿದ ಸುಂದರ ಕಲಾಕೃತಿಗಳಿಗೆ ತೆಲುಗಿನ ಖ್ಯಾತ ನಟಿಮಣಿಯರು ಜೀವತುಂಬಿದ್ದಾರೆ.

  ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಜಿ. ವೆಂಕಟ್ ರಾಮ್ ರವಿ ವರ್ಮ ಕಲಾಕೃತಿಗಳ ಥೀಮ್ ಆಧರಿಸಿ 2020ರ ಕ್ಯಾಲೆಂಡರ್ ಹೊರತಂದಿದ್ದಾರೆ. ಇದಕ್ಕಾಗಿ ರವಿ ವರ್ಮ ವರ್ಣ ಚಿತ್ರಗಳ ಶೈಲಿಯಲ್ಲಿ ಸಿನಿಮಾ ನಟಿಯ ಫೋಟೋಶೂಟ್ ಮಾಡಿಸಿದ್ದಾರೆ. ಸಮಂತಾ ಅಕ್ಕಿನೇನಿ, ಶ್ರುತಿ ಹಾಸನ್, ರಮ್ಯಾ ಕೃಷ್ಣ, ಐಶ್ವರ್ಯ ರಾಜೇಶ್, ಖುಷ್ಬೂ ಸೇರಿದಂತೆ ಸಾಕಷ್ಟು ನಟಿಯರು ಪೋಸ್ ನೀಡಿದ್ದಾರೆ.

  ಆರಂಭದಲ್ಲಿ '96' ರೀಮೇಕ್ ರಿಜೆಕ್ಟ್ ಮಾಡಿದ್ರಂತೆ ಸಮಂತಾ!ಆರಂಭದಲ್ಲಿ '96' ರೀಮೇಕ್ ರಿಜೆಕ್ಟ್ ಮಾಡಿದ್ರಂತೆ ಸಮಂತಾ!

  ನಟಿ ಸಮಂತಾ

  ನಟಿ ಸಮಂತಾ

  ನಟಿ ಸಮಂತಾ, ರವಿ ವರ್ಮ ಅವರ ಪ್ರಸಿದ್ಧ ಕಲಾಕೃತಿಗಳಲ್ಲಿ ಒಂದಾಗಿರುವ ಹಣ್ಣನ್ನು ಹಿಡಿದು ಹೊಸ ಜೀವನ ಸಂಕೇತಿಸುವ ತಾಯಿಯ ವರ್ಣಚಿತ್ರಕ್ಕೆ ಜೀವ ತುಂಬಿದ್ದಾರೆ. ಕೇವಲ ವರ್ಣಚಿತ್ರದಲ್ಲಿ ಇದ್ದಹಾಗೆ ಕಾಸ್ಟ್ಯೂಮ್ ಮಾತ್ರ ಧರಿಸಿದ್ದಲ್ಲದೆ ಹಾಗೆ ಪೋಸ್ ಕೂಡ ನೀಡಿದ್ದಾರೆ.

  ನಟಿ ಶ್ರುತಿ ಹಾಸನ್

  ನಟಿ ಶ್ರುತಿ ಹಾಸನ್

  ರವಿ ವರ್ಮ ಅವರ ಮತ್ತೊಂದು ಪ್ರಸಿದ್ಧ ವರ್ಣಚಿತ್ರ ಬೆಳದಿಂಗಳಲ್ಲಿ ರಾಧ ಕುಳಿತಿರುವ ವರ್ಣಚಿತ್ರಕ್ಕೆ ನಟಿ ಶ್ರುತಿ ಹಾಸನ್ ಪೋಸ್ ನೀಡಿದ್ದಾರೆ. ಜೊತೆಗೆ ಕುರುಪಂನ ರಾಣಿಯ ಕಲಾಕೃತಿಗೂ ಶ್ರುತಿ ಜೀವತುಂಬಿದ್ದಾರೆ.

  ಸೂಪರ್ ಸ್ಟಾರ್ ರಜನಿಕಾಂತ್ ಗೆ ನಾಯಕಿಯಾದ 'ರಣಧೀರ' ಬೆಡಗಿಸೂಪರ್ ಸ್ಟಾರ್ ರಜನಿಕಾಂತ್ ಗೆ ನಾಯಕಿಯಾದ 'ರಣಧೀರ' ಬೆಡಗಿ

  ಐಶ್ವರ್ಯಾ ರಾಜೇಶ್

  ಐಶ್ವರ್ಯಾ ರಾಜೇಶ್

  ನಟಿ ಐಶ್ವರ್ಯ ರಾಜೇಶ್ ಪುದುಕೋಟ್ಟೈ ರಾಣಿಯ ಹಾಗೆ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಜರಿ ಸೀರೆ ಧರಿಸಿ ಆಭರಣ ತೊಟ್ಟಿರುವ ಪುದುಕೋಟ್ಟೈ ರಾಣಿಯಾಗಿ ಐಶ್ವರ್ಯ ಮಿಂಚಿದ್ದಾರೆ.

  ನಟಿ ರಮ್ಯಾ ಕೃಷ್ಣ

  ನಟಿ ರಮ್ಯಾ ಕೃಷ್ಣ

  ನಟಿ ರಮ್ಯಾ ಕೃಷ್ಣ ದಮಯಂತಿಯಾಗಿ ಪೋಸ್ ನೀಡಿದ್ದಾರೆ. ದಮಯಂತಿ ಹಂಸದಿಂದ ನಳನ ಕಥೆಯನ್ನು ಗಮನವಿಟ್ಟು ಕೇಳುತ್ತಿರುವ ವರ್ಣ ಚಿತ್ರಕ್ಕೆ ಪೋಸ್ ನೀಡಿದ್ದಾರೆ.

  'ಕನ್ನಡ ಚಿತ್ರಗಳ ಬಗ್ಗೆ ಹೆಚ್ಚು ಗೌರವ ಇದೆ' ಎಂದ ಕಮಲ್ ಪುತ್ರಿ ಶ್ರುತಿ ಹಾಸನ್

  ನಟಿ ಶೋಭನ ಮತ್ತು ಖುಷ್ಬೂ

  ನಟಿ ಶೋಭನ ಮತ್ತು ಖುಷ್ಬೂ

  ನಟಿ ಶೋಭನ ರಾಜಾ ರವಿ ವರ್ಮ ಮಗಳು ಮಹಾಪ್ರಭಾ ಕಾಲಾಕೃತಿಗೆ ಜೀವತುಂಬಿದ್ದಾರೆ. ಇನ್ನು ನಟಿ ಖುಷ್ಬೂ ಸೇರಿದಂತೆ ಅನೇಕ ನಟಿಯರು ರವಿವರ್ಮ ಕಲಾಕೃತಿಯ ಹಾಗೆ ಕಾಸ್ಟ್ಯೂಮ್ ಧರಿಸಿ ವರ್ಣ ಚಿತ್ರದ ಹಾಗೆ ಪೋಸ್ ನೀಡಿದ್ದಾರೆ. ಈ ಫೋಟೋಶೂಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

  English summary
  Telugu Actress Samantha, Shruti Haasan, Kushboo and other Actress pose like Raja Ravivarma paintings.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X