For Quick Alerts
  ALLOW NOTIFICATIONS  
  For Daily Alerts

  ತಾಯಿಯಾಗುತ್ತಿದ್ದಾರಾ ಸಮಂತಾ? ನಯನತಾರಾ ಜತೆಗಿನ ಸಿನಿಮಾ ಕೈಬಿಡಲು ಕಾರಣ ಇದು?

  |

  ಪ್ರೇಮಿಗಳ ದಿನವಾದ ಫೆ. 14ರಂದು ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಹೊಸ ಸಿನಿಮಾ ಘೋಷಣೆ ಮೂಲಕ ಅಚ್ಚರಿ ಮೂಡಿಸಿದ್ದರು. ತಮ್ಮ ಮುಂದಿನ ಸಿನಿಮಾದಲ್ಲಿ ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ಅಕ್ಕಿನೇನಿ ನಟಿಸಲಿದ್ದಾರೆ ಎಂದು ಅವರು ಪ್ರಕಟಿಸಿದ್ದರು. ಇದು ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿತ್ತು. ತಮಿಳಿನ ಇಬ್ಬರು ಟಾಪ್ ಹೀರೋಯಿನ್‌ಗಳು ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ನಿರೀಕ್ಷೆಗಳನ್ನು ಹುಟ್ಟಿಸಿತ್ತು.

  ದರ್ಶನ್ ಹಾಗು ವಿಜಯ್ ಆಗ್ತಾರೆ ಮುಖಾಮುಖಿ

  ಅಂದಕೊಂಡಂತೆ ಎಲ್ಲವೂ ನಡೆದಿದ್ದರೆ ವಿಘ್ನೇಶ್ ಶಿವನ್ ನಿರ್ದೇಶನದ 'ಕಾದುವಾಕುಲ ರೆಂಡು ಕಾದಲ್' ಚಿತ್ರದಲ್ಲಿ ಈ ಮೂವರು ಪ್ರಮುಖ ತಾರೆಯರು ಒಟ್ಟಿಗೆ ಅಭಿನಯಿಸಬೇಕಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಸಮಂತಾ ಅಕ್ಕಿನೇನಿ ಚಿತ್ರದಿಂದ ಹೊರಬಂದಿದ್ದಾರೆ.

  ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ತಮನ್ನಾ: ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ಸಮಂತಾಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ತಮನ್ನಾ: ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ಸಮಂತಾ

  ಸಿನಿಮಾದಿಂದ ಹೊರ ನಡೆದ ಸಮಂತಾ

  ಸಿನಿಮಾದಿಂದ ಹೊರ ನಡೆದ ಸಮಂತಾ

  ಚೆನ್ನೈನಲ್ಲಿ ಇತ್ತೀಚೆಗೆ ವಿಘ್ನೇಶ್ ಅವರ ಕಚೇರಿಗೆ ಭೇಟಿ ನೀಡಿದ್ದ ಸಮಂತಾ, ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎಂದು ಕ್ಷಮೆ ಕೋರಿದ್ದಾರಂತೆ. ಸಿನಿಮಾದಿಂದ ಹಿಂದೆ ಸರಿಯಲು ಅವರು ವೈಯಕ್ತಿಕ ಕಾರಣಗಳನ್ನು ನೀಡಿದ್ದು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಕೆಲವು ನಟಿಯರ ಹೆಸರನ್ನೂ ಸೂಚಿಸಿದ್ದಾರಂತೆ.

  ಸಮಂತಾ ಗರ್ಭಿಣಿಯಾಗಿದ್ದಾರಾ?

  ಸಮಂತಾ ಗರ್ಭಿಣಿಯಾಗಿದ್ದಾರಾ?

  ವಿಘ್ನೇಶ್ ಚಿತ್ರದಿಂದ ಸಮಂತಾ ಹೊರಹೋಗುವ ಸುದ್ದಿ ಹರಡುತ್ತಿದ್ದಂತೆಯೇ ಅದಕ್ಕೆ ಕಾರಣಗಳ ಕುರಿತೂ ಊಹಾಪೋಹಗಳು ಹುಟ್ಟಿಕೊಂಡಿವೆ. ಸಮಂತಾ ಗರ್ಭಿಣಿಯಾಗಿದ್ದು, ವಿಜಯ್ ಸೇತುಪತಿ ಹಾಗೂ ನಯನತಾರಾ ಅವರೊಂದಿಗೆ ನಟಿಸಬೇಕಿದ್ದ ಚಿತ್ರವನ್ನು ತಿರಸ್ಕರಿಸಲು ಅದೇ ಕಾರಣ ಎಂದು ಹೇಳಲಾಗುತ್ತಿದೆ.

  ಒಂದು ವರ್ಷ ಬ್ರೇಕ್ ತೆಗೆದುಕೊಳ್ಳಲು ನಿರ್ಧಾರ

  ಒಂದು ವರ್ಷ ಬ್ರೇಕ್ ತೆಗೆದುಕೊಳ್ಳಲು ನಿರ್ಧಾರ

  ಸಮಂತಾ ಸದ್ಯಕ್ಕೆ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈ ವರ್ಷ ಅವರು ಯಾವ ಸಿನಿಮಾವನ್ನೂ ಮಾಡುವುದಿಲ್ಲ. ತಮ್ಮ ಸಿನಿಮಾ ಬದುಕಿನಿಂದ ಒಂದು ಬ್ರೇಕ್ ತೆಗೆದುಕೊಳ್ಳಲು ಬಯಸಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಇದರ ಬಗ್ಗೆ ಸಮಂತಾ ಅಥವಾ ಅಕ್ಕಿನೇನಿ ಕುಟುಂಬ ಅಧಿಕೃತ ಹೇಳಿಕೆ ನೀಡಿಲ್ಲ.

  ಆಕೆ ಗರ್ಭಿಣಿಯಾಗಿದ್ದಾಳಾ?

  ಆಕೆ ಗರ್ಭಿಣಿಯಾಗಿದ್ದಾಳಾ?

  ಕಳೆದ ವರ್ಷ ಕೂಡ ಸಮಂತಾ ಗರ್ಭಿಣಿಯಾಗಿದ್ದಾರೆ ಎಂಬ ರೂಮರ್‌ಗಳು ಹಬ್ಬಿದ್ದವು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಖಡಕ್ ಉತ್ತರ ನೀಡಿದ್ದರು. 'ಅಬ್ಬಾ... ಆಕೆ ಗರ್ಭಿಣಿಯೇ? ನಿಮಗೆ ಯಾವಾಗ ಗೊತ್ತಾಯಿತು? ದಯವಿಟ್ಟು ನನಗೆ ತಿಳಿಸಿ..' ಎಂದು ವ್ಯಂಗ್ಯವಾಗಿ ಹೇಳಿದ್ದರು. '

  2022ರ ಆಗಸ್ಟ್ 7ರಂದು ಹೆರಿಗೆ!

  2022ರ ಆಗಸ್ಟ್ 7ರಂದು ಹೆರಿಗೆ!

  ಸಮಂತಾ ಅವರ ಪ್ರಗ್ನೆನ್ಸಿ ಪ್ಲ್ಯಾನ್ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬನ ಪ್ರಶ್ನೆಗೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ಅಭಿಮಾನಿಗಳ ಕುತೂಹಲದಿಂದ ಕಿರಿಕಿರಿ ಅನುಭವಿಸಿದ್ದ ಅವರು, 'ನನ್ನ ದೇಹದ ಒಳಗಿನ ಕಾರ್ಯಾಚರಣೆಯ ಬಗ್ಗೆ ಕಾಳಜಿಯುಳ್ಳವರಿಗೆ ನಾನು ಹೇಳಲು ಬಯಸುತ್ತಿದ್ದೇನೆ, ನಾನು 2022ರ ಆಗಸ್ಟ್ 7ರ ಬೆಳಿಗ್ಗೆ 7 ಗಂಟೆಗೆ ಮಗುವಿಗೆ ಜನ್ಮ ಕೊಡುತ್ತೇನೆ' ಎಂದು ಕೋಪದಿಂದ ಹೇಳಿದ್ದರು.

  English summary
  Roumours says Samantha Akkineni is expecting her first baby after she drops out of director Vignesh Shivan's Kaathu Vaakula Rendu Kaadhal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X