For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ನಿರೂಪಣೆಗೆ ಸಮಂತಾ: ನಾಗರ್ಜುನಾಗೆ ಬಿಗ್ ಶಾಕ್!

  |

  ನಟಿ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ ಪಡೆದ ದಿನದಿಂದಲೂ ಅವರ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ಈಗಲೂ ಅವರ ಬಗ್ಗೆ ಏನೇ ಸುದ್ದಿ ಬಂದರೂ ಕೂಡ, ಅವರ ಅಭಿಮಾನಿಗಳ ಕಿವಿ ನೆಟ್ಟಗಾಗುತ್ತೆ. ಯಾಕೆಂದರೆ ಈ ಜೋಡಿಯನ್ನು ಒಂದು ಮಾಡಲು ಕುಟುಂಬಸ್ಥರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಅಭಿಮಾನಿಗಳ ನೆಚ್ಚಿನ ಜೋಡಿ ಎನಿಸಿಕೊಂಡಿದ್ದ ಸಮಂತಾ, ನಾಗಚೈತನ್ಯ ಇಬ್ಬರು ದೂರ ಆಗಿದ್ದೇ ದೊಡ್ಡ ಶಾಕಿಂಗ್ ವಿಚಾರ. ಹಾಗಾಗಿ ಇವರ ವಿಚ್ಛೇದನವನ್ನು ಯಾರು ಅಷ್ಟು ಬೇಗ ಒಪ್ಪಿಕೊಳ್ಳಲಿಲ್ಲ. ಆದರೆ ಈ ಜೋಡಿ ದೂರ ಅಗಿ ಈಗ ವರ್ಷ ತುಂಬುತ್ತಾ ಬಂದಿದೆ.

  ಸೋಶಿಯಲ್ ಮೀಡಿಯಾದಲ್ಲಿ ಪವನ್ ಕಲ್ಯಾಣ್, ವಿಜಯ್ ದೇವರಕೊಂಡ ಫ್ಯಾನ್ಸ್ ಮಧ್ಯೆ ಯುದ್ಧ! ಸೋಶಿಯಲ್ ಮೀಡಿಯಾದಲ್ಲಿ ಪವನ್ ಕಲ್ಯಾಣ್, ವಿಜಯ್ ದೇವರಕೊಂಡ ಫ್ಯಾನ್ಸ್ ಮಧ್ಯೆ ಯುದ್ಧ!

  ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಕೂಡ ಸಿನಿಮಾರಂಗದಲ್ಲಿ ಇರುವ ಕಾರಣ, ಇವರ ಬಗ್ಗೆ ಆಗಾಗ ಒಂದಲ್ಲ ಒಂದು ವಿಚಾರಗಳು ತಳುಕು ಹಾಕಿಕೊಳ್ಳುತ್ತವೆ. ಈಗ ಸಮಂತಾ ಕಡೆಯಿಂದ ಮಾಜಿ ಮಾವ ನಾಗಾರ್ಜುನನಿಗೆ ದೊಡ್ಡ ಶಾಕಿಂಗ್ ನ್ಯೂಸ್ ಸಿಕ್ಕಿದೆ. ನಾಗಾರ್ಜುನ ಜಾಗಕ್ಕೆ ಈ ಸಮಂತಾ ಬಂದು ಬಿಟ್ಟಿದ್ದಾರೆ.

  ಸಾಯಿ ಪಲ್ಲವಿ ಬಳಿಕ ಸಮಂತಾ ಕನ್ನಡಕ್ಕೆ ಎಂಟ್ರಿ : ಇದು ಕಾಮನ್ ಲವ್ ಸ್ಟೋರಿ ಅಲ್ಲಸಾಯಿ ಪಲ್ಲವಿ ಬಳಿಕ ಸಮಂತಾ ಕನ್ನಡಕ್ಕೆ ಎಂಟ್ರಿ : ಇದು ಕಾಮನ್ ಲವ್ ಸ್ಟೋರಿ ಅಲ್ಲ

  ಬಿಗ್ ಬಾಸ್ ನಿರೂಪಣೆ ಮಾಡ್ತಾರಂತೆ ಸಮಂತಾ!

  ಬಿಗ್ ಬಾಸ್ ನಿರೂಪಣೆ ಮಾಡ್ತಾರಂತೆ ಸಮಂತಾ!

  ನಟಿ ಸಮಂತಾ ಕಿರುತೆರೆಗೆ ಕಾಲಿಡಲು ಮುಂದಾಗಿದ್ದಾರೆ. ದಶಕದಿಂದ ಸಿನಿಮಾರಂಗದಲ್ಲಿ ಹತ್ತಾರು ಸಿನಿಮಾಗಳನ್ನು ಮಾಡುತ್ತಾ ಬಂದಿರುವ ನಟಿ ಈಗ ಕಿರುತೆರೆಯಲ್ಲಿ ಬ್ಯುಸಿಯಾಗಲಿದ್ದಾರೆ. ಕಿರುತೆರೆ ಕಾರ್ಯಕ್ರಮ ಬಿಗ್‌ ಬಾಸ್‌ನಲ್ಲಿ ಸಮಂತಾ ಭಾಗಿ ಆಗಲಿದ್ದಾರೆ. ತೆಲುಗಿನ ಬಿಗ್ ಬಾಸ್ ಸೀಸನ್ 6ರಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

  ಮಾಜಿ ಮಾವ ನಾಗಾರ್ಜುನನಿಗೆ ಸಮಂತಾ ಶಾಕ್!

  ಮಾಜಿ ಮಾವ ನಾಗಾರ್ಜುನನಿಗೆ ಸಮಂತಾ ಶಾಕ್!

  ಹೌದು ನಟಿ ಸಮಂತಾ ತೆಲುಗು ಬಿಗ್ ಬಾಸ್ ಸೀಸನ್ 6ರಲ್ಲಿ ಭಾಗಿ ಆಗಿ ಆಗಲಿದ್ದಾರೆ. ಆದರೆ ಸ್ಪರ್ಧಿಯಾಗಿ ಅಲ್ಲ. ಸಮಂತಾ ನಿರೂಪಕಿಯಾಗಿ ಬಿಗ್ ಬಾಸ್ ವೇದಿಕೆ ಹತ್ತಲಿದ್ದಾರೆ. ಇನ್ನು ಮುಂದೆ ಸಮಂತಾನೇ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಇದು ನಟ ನಾಗಾರ್ಜುನನಿಗೆ ಬಿಗ್ ಶಾಕ್ ಕೊಟ್ಟಿದೆ. ಈ ಹಿಂದೆ ನಟ ನಾಗಾರ್ಜುನ, ಸಮಂತಾ ಮಾಜಿ ಮಾವ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುತ್ತಾ ಇದ್ದರು. ಹಾಗಾಗಿ ಇನ್ನು ಮುಂದೆ ನಾಗಾರ್ಜುನ ಬಿಗ್‌ ಬಾಸ್‌ನಲ್ಲಿ ಕಾಣಿಕೊಳ್ಳುವುದಿಲ್ಲ ಎನ್ನುವ ಚರ್ಚೆ ಶುರುವಾಗಿದೆ.

  ಬಿಗ್ ಬಾಸ್ ವೇದಿಕೆ ಮೇಲೆ ಸಮಂತಾ, ನಾಗಾರ್ಜುನ!

  ಬಿಗ್ ಬಾಸ್ ವೇದಿಕೆ ಮೇಲೆ ಸಮಂತಾ, ನಾಗಾರ್ಜುನ!

  ನಟಿ ಸಮಂತಾ ಬಿಗ್ ಬಾಸ್‌ ವೇದಿಕೆ ಹತ್ತುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನಾಗಾರ್ಜುನ ಜೊತೆಗೆ ಸಮಂತಾ ಬಿಗ್ ಬಾಸ್‌ನಲ್ಲಿ ಭಾಗಿ ಆಗಿದ್ದರು. ಅತಿಥಿಯಾಗಿ ಬಿಗ್ ಬಾಸ್ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದರು. ಬಿಗ್ ಬಾಗ್ ಸೀಸನ್ 4ರಲ್ಲಿ ನಾಗಾರ್ಜುನ ಜೊತೆಗೆ ಸಮಂತಾ ಭಾಗಿ ಆಗಿದ್ದರು.

  ವಿಚ್ಛೇದನದ ಬಳಿಕ ಸಮಂತಾ ಸಿನಿಮಾದಲ್ಲಿ ಬ್ಯುಸಿ!

  ವಿಚ್ಛೇದನದ ಬಳಿಕ ಸಮಂತಾ ಸಿನಿಮಾದಲ್ಲಿ ಬ್ಯುಸಿ!

  ಇನ್ನು ನಟಿ ಸಮಂತಾ ಈಗ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಸಾಕಷ್ಟು ಸಿನಿಮಾಗಳಲ್ಲಿ ನಿರತವಾಗಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿ ಸಮಂತಾ ಬ್ಯುಸಿ ಆಗಿದ್ದಾರೆ. ಬಾಲಿವುಡ್‌ನಲ್ಲೂ ಕೂಡ ಸಮಂತಾ ಸಿನಿಮಾ ಮಾಡಲು ಮುಂದಾಗಿದ್ದಾರೆ.

  English summary
  Samantha To Host Big Boss 6 Telugu, Big Shock To Akkineni Nagarjuna
  Friday, June 3, 2022, 10:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X