For Quick Alerts
  ALLOW NOTIFICATIONS  
  For Daily Alerts

  ಉತ್ತರ ಕರ್ನಾಟಕಕ್ಕೆ ನೆರವು ನೀಡಿದ್ದ ತೆಲುಗು ನಟನ ಕಾರು ಅಪಘಾತ

  |

  ಕಳೆದ ಕೆಲವು ದಿನಗಳ ಹಿಂದೆ ಉತ್ತರ ಕರ್ನಾಟದ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿತ್ತು. ಆ ಸಂದರ್ಭದಲ್ಲಿ ನೆರೆಸಂತ್ರಸ್ಥರಿಗೆ ತೆಲುಗು ಇಂಡಸ್ಟ್ರಿ ಹಾಸ್ಯ ನಟ ಸಂಪೂರ್ಣೇಶ್ ಬಾಬು ಸಹಾಯ ಹಸ್ತ ಚಾಚಿದ್ದರು. 2 ಲಕ್ಷ ರೂಪಾಯಿ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದರು.

  ಇದೀಗ, ಸಂಪೂರ್ಣೇಶ್ ಬಾಬು ಅವರ ಕಾರು ಅಪಘಾತವಾಗಿದೆ. ತೆಲಂಗಾಣದ ಸಿದ್ದಿಪೇಟೆ ಬಳಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಆರ್.ಟಿ.ಸಿ (ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯ ಸಾರಿಗೆ) ಬಸ್ ಡಿಕ್ಕಿ ಹೊಡೆದಿದೆ.

  ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ 2 ಲಕ್ಷ ನೀಡಿದ 'ಬರ್ನಿಂಗ್ ಸ್ಟಾರ್'ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ 2 ಲಕ್ಷ ನೀಡಿದ 'ಬರ್ನಿಂಗ್ ಸ್ಟಾರ್'

  ಕಾರಿನಲ್ಲಿದ್ದ ನಟ ಮತ್ತು ಆತನ ಕುಟುಂಬದ ಸದಸ್ಯರು ಸಣ್ಣಪುಟ್ಟ ಗಾಯಗಳೊಂದಿಗೆ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ. ಬೆಳಗ್ಗೆ 11:30ಕ್ಕೆ ಈ ಘಟನೆ ನಡೆದಿದ್ದು, ಸ್ಥಳಿಯ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

  ಸಂಪೂರ್ಣೇಶ್ 2 ಲಕ್ಷ ಕೊಟ್ರು, ಉತ್ತರ ಕರ್ನಾಟಕಕ್ಕೆ ನೀವೇನು ಕೊಟ್ರಿ? ಪ್ರಭಾಸ್ ಹೇಳಿದ್ದೇನು?ಸಂಪೂರ್ಣೇಶ್ 2 ಲಕ್ಷ ಕೊಟ್ರು, ಉತ್ತರ ಕರ್ನಾಟಕಕ್ಕೆ ನೀವೇನು ಕೊಟ್ರಿ? ಪ್ರಭಾಸ್ ಹೇಳಿದ್ದೇನು?

  ಬಂಜಾರ ಹಿಲ್ಸ್ ಬಳಿ ನವೆಂಬರ್ 26 ರಂದು ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸಾವನ್ನಿಪ್ಪಿದ. ಇದರ ಬೆನ್ನಲ್ಲೆ ಮತ್ತೊಂದು ಅಪಘಾತ ಸಂಭವಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

  ಸಂಪೂರ್ಣೇಶ್ ಬಾಬು ಅವರಿಗೆ ತೆಲುಗು ಇಂಡಸ್ಟ್ರಿಯಲ್ಲಿ ವಿಶೇಷವಾದ ಅಭಿಮಾನಿ ಬಳಗ ಇದೆ. ಔಟ್ ಅಂಡ್ ಔಟ್ ಕಾಮಿಡಿ ಜಾನರ್ ಸಿನಿಮಾಗಳನ್ನ ಮಾಡುವ ಇವರನ್ನ ಬರ್ನಿಂಗ್ ಸ್ಟಾರ್ ಎಂದು ಕೂಡ ಕರೆಯುತ್ತಾರೆ. 'ಹೃದಯಕಾಲೇಯಂ' ಎಂಬ ಸಿನಿಮಾ ಮೂಲಕ ಇಂಡಸ್ಟ್ರಿ ಪ್ರವೇಶಿಸಿದ ಬಾಬು ಹಲವು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಕೊನೆಯದಾಗಿ 'ಕೊಬ್ಬರಿ ಮಟ್ಟ' ಎಂಬ ಸಿನಿಮಾ ತೆರೆಕಂಡಿತ್ತು.

  English summary
  Telugu actor, Bigg Boss Telugu Contestant Sampoornesh Babu’s car crash into rtc bus siddipet town.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X