For Quick Alerts
  ALLOW NOTIFICATIONS  
  For Daily Alerts

  ಸಂಕ್ರಾತಿಗೆ ಬಿಡುಗಡೆಯಾಗಲಿರುವ ಚಿತ್ರಗಳ ಟ್ರೈಲರ್ ಯಾವಾಗ?

  |

  ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬ ತೆಲುಗು ರಾಜ್ಯಗಳು ಹಾಗೂ ತಮಿಳುನಾಡಿನಲ್ಲಿ ದೊಡ್ಡ ಸಂಭ್ರಮಾಚರಣೆಯ ಹಬ್ಬವಾಗಿದೆ. ಇನ್ನು ಈ ಹಬ್ಬದಂದು ಬಿಡುಗಡೆಯಾಗಲು ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಚಿತ್ರಗಳೇ ಕಾದು ಕುಳಿತಿರುತ್ತವೆ. ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳು ಇರುವ ಕಾರಣ ಈ ದಿನಗಳಂದು ಚಿತ್ರವನ್ನು ಬಿಡುಗಡೆ ಮಾಡಿದರೆ ಕೋಟಿ ಕೋಟಿ ಹಣವನ್ನು ಜೇಬಿಗೆ ಇಳಿಸಿಕೊಳ್ಳಬಹುದು ಎಂಬುದು ಚಿತ್ರತಂಡದ ಪ್ಲಾನ್.

  ಇನ್ನು ಪ್ರತಿ ವರ್ಷದಂತೆ ಈ ಬಾರಿಯೂ ಸಹ ಈ ಮಾದರಿಯಲ್ಲಿ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಚಿತ್ರಗಳು ಸಂಕ್ರಾಂತಿ ಪ್ರಯುಕ್ರ ಚಿತ್ರಮಂದಿರಗಳ ಅಂಗಳಕ್ಕೆ ಬರಲು ಸಿದ್ಧವಾಗಿವೆ. ಜನವರಿ 12ರಂದು ವಿಜಯ್ ನಟನೆಯ ತಮಿಳು ಚಿತ್ರ ವಾರಿಸು, ಅಜಿತ್ ಕುಮಾರ್ ನಟನೆಯ ತಮಿಳು ಚಿತ್ರ ತುನಿವು, ನಂದಮೂರು ಬಾಲಕೃಷ್ಣ ನಟನೆಯ ತೆಲುಗು ಚಿತ್ರ ವೀರಸಿಂಹ ರೆಡ್ಡಿ ಹಾಗೂ ಜನವರಿ 13ರಂದು ಮೆಗಾಸ್ಟಾರ್ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಬಿಡುಗಡೆಯಾಗಲಿವೆ.

  ಹೀಗೆ ಸಂಕ್ರಾಂತಿ ಪ್ರಯುಕ್ತ ದಿಗ್ಗಜ ನಟರ ಚಿತ್ರಗಳು ಬಿಡುಗಡೆಯಾಗಲಿದ್ದು ದೊಡ್ಡ ಪೈಪೋಟಿ ಏರ್ಪಡಲಿದೆ. ಸಂಕ್ರಾಂತಿ ವಿನ್ನರ್ ಪಟ್ಟಕ್ಕಾಗಿ ಈ ನಾಲ್ಕೂ ಚಿತ್ರಗಳ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ. ಇನ್ನು ಈ ಚಿತ್ರದ ಹಾಡುಗಳನ್ನು ಒಂದೊಂದಾಗಿ ಬಿಡುಗಡೆಗೊಳಿಸಿರುವ ಚಿತ್ರತಂಡಗಳು ಚಿತ್ರದ ಮೇಲಿನ ಕ್ರೇಜ್ ಹೆಚ್ಚಿಸುವ ಪ್ರಯುತ್ನವನ್ನು ಈಗಾಗಲೇ ಮಾಡಿದ್ದು, ಇದೀಗ ಟ್ರೈಲರ್ ಬಿಡುಗಡೆ ಮಾಡಿ ಚಿತ್ರದ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸುವತ್ತ ಚಿತ್ತ ನೆಟ್ಟಿವೆ. ಈಗಾಗಲೇ ತುನಿವು ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿದ್ದು, ಉಳಿದ ಚಿತ್ರಗಳು ಚಿತ್ರದ ಟ್ರೈಲರ್‌ಗಳು ಯಾವಾಗ ಬಿಡುಗಡೆಯಾಗಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

  ವಾರಿಸು ಟ್ರೈಲರ್: ಜನವರಿ 4ರಂದು ಸಂಜೆ 5 ಗಂಟೆಗೆ

  ವಾಲ್ತೇರು ವೀರಯ್ಯ ಟ್ರೈಲರ್ : ಜನವರಿ 5

  ವೀರಸಿಂಹ ರೆಡ್ಡಿ ಟ್ರೈಲರ್: ಜನವರಿ 6

  English summary
  Sankranti releasing telugu and tamil movies trailer releasing date details
  Wednesday, January 4, 2023, 7:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X