Don't Miss!
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- News
ಪಾಕಿಸ್ತಾನ: ಕರಾಚಿಯ ಮಸೀದಿಯ ಮೇಲೆ ಮತ್ತೊಂದು ದಾಳಿ- ವಿಡಿಯೋ
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಕ್ರಾಂತಿಗೆ ರಿಲೀಸ್ ಆದ ಚಿತ್ರಗಳಲ್ಲಿ ಫಸ್ಟ್ ವೀಕೆಂಡ್ ಕರ್ನಾಟಕದಲ್ಲಿ ಹೆಚ್ಚು ಗಳಿಸಿದ್ದು ಯಾವ ಚಿತ್ರ?
ಪ್ರತಿ ವರ್ಷದ ಸಂಕ್ರಾಂತಿ ಹಾಗೆ ಈ ವರ್ಷದ ಸಂಕ್ರಾಂತಿ ಪ್ರಯುಕ್ತವೂ ಸಹ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಚಿತ್ರಗಳು ತೆರೆಕಂಡಿವೆ. ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ ವಾರಿಸು ಹಾಗೂ ತಲಾ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ತೆರೆಗೆ ಬಂದವು. ಇನ್ನು ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಮೆಗಾಸ್ಟಾರ್ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳು ಬಿಡುಗಡೆ ಆದವು.
ಈ ಪೈಕಿ ಮೊದಲಿಗೆ ಜನವರಿ 11ರಂದು ತಮಿಳಿನ ವಾರಿಸು ಹಾಗೂ ತುನಿವು ಚಿತ್ರಗಳು ತೆರೆ ಕಂಡವು. ಬಳಿಕ ಜನವರಿ 12ರಂದು ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಜನವರಿ 13ರಂದು ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರ ತೆರೆ ಕಂಡಿತು. ಎಲ್ಲಾ ಭಾಷೆಯ ಚಿತ್ರಗಳನ್ನೂ ನೋಡುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಈ ನಾಲ್ಕೂ ಚಿತ್ರಗಳೂ ಸಹ ಬಿಡುಗಡೆ ದಿನ ಒಳ್ಳೆಯ ಕಲೆಕ್ಷನ್ ಮಾಡಿ ಚೆನ್ನಾಗಿ ಓಪನಿಂಗ್ ಪಡೆದುಕೊಂಡವು.
ಈ ಪೈಕಿ ವಾರಿಸು ಕರ್ನಾಟಕದಲ್ಲಿ ಮೊದಲನೇ ದಿನವೇ 5.65 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಈ ಬಾರಿಯ ಸಂಕ್ರಾಂತಿ ಪ್ರಯಕ್ತ ಬಿಡುಗಡೆಯಾದ ಎಲ್ಲಾ ಚಿತ್ರಗಳಿಗಿಂತಲೂ ಅಧಿಕ ಕಲೆಕ್ಷನ್ ಮಾಡಿದ ಚಿತ್ರ ಎನಿಸಿಕೊಂಡಿತು. ಅತ್ತ ಈ ನಾಲ್ಕು ಚಿತ್ರಗಳ ಪೈಕಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮೊದಲನೇ ದಿನ 54 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರ ದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾ ಎನಿಸಿಕೊಂಡಿತು. ಹೀಗೆ ಮೊದಲ ದಿನ ಅಬ್ಬರಿಸಿದ್ದ ಈ ಚಿತ್ರಗಳು ಸಂಕ್ರಾಂತಿ ಕಳೆದ ಬಳಿಕ ಮೊದಲ ವಾರಾಂತ್ಯದಲ್ಲಿ ಕರ್ನಾಟಕದಲ್ಲಿ ಎಷ್ಟು ಕೋಟಿ ಗಳಿಸಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ತಮಿಳು ಚಿತ್ರಗಳ ಕಲೆಕ್ಷನ್
ಜನವರಿ 11ರಂದೇ ಬಿಡುಗಡೆಯಾದ ತಮಿಳಿನ ವಾರಿಸು ಹಾಗೂ ತುನಿವು ಚಿತ್ರಗಳು ಸಂಕ್ರಾಂತಿಯಂದು ( ಜನವರಿ 14ರ ಭಾನುವಾರ ) ಐದು ದಿನಗಳ ಪ್ರದರ್ಶನವನ್ನು ಪೂರೈಸಿವೆ. ಈ ಸಮಯಕ್ಕೆ ವಿಜಯ್ ನಟನೆಯ ವಾರಿಸು ಕರ್ನಾಟಕದಲ್ಲಿ 10.83 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಅತ್ತ ಅಜಿತ್ ನಟನೆಯ ತುನಿವು ಮೊದಲ ವಾರಾಂತ್ಯಕ್ಕೆ ಕರ್ನಾಟಕದಲ್ಲಿ 9.8 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಸಂಕ್ರಾಂತಿ ಪೈಪೋಟಿಯಲ್ಲಿ ಮೊದಲ ವಾರಾಂತ್ಯಕ್ಕೆ ರಾಜ್ಯದಲ್ಲಿ ತುನಿವು ಚಿತ್ರಕ್ಕಿಂತ ವಾರಿಸು ಚಿತ್ರ ಹೆಚ್ಚು ಗಳಿಸಿದ್ದು, ಮುನ್ನಡೆ ಕಾಯ್ದುಕೊಂಡಿದೆ.

ತೆಲುಗು ಚಿತ್ರಗಳ ಕಲೆಕ್ಷನ್
ಇನ್ನು ಜನವರಿ 12ಕ್ಕೆ ಬಿಡುಗಡೆಯಾಗಿದ್ದ ತೆಲುಗಿನ ವೀರಸಿಂಹ ರೆಡ್ಡಿ ಚಿತ್ರ ಮೊದಲ ದಿನ ಕರ್ನಾಟಕದಲ್ಲಿ 2.87 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಈ ಚಿತ್ರ ಸಂಕ್ರಾಂತಿಯಂದು ( ಜನವರಿ 14ರ ಭಾನುವಾರ ) ನಾಲ್ಕು ದಿನಗಳ ಪ್ರದರ್ಶನವನ್ನು ಕಂಡಿದ್ದು, ಈ ಸಮಯಕ್ಕೆ 5.3 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇನ್ನು ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಶುಕ್ರವಾರ ತೆರೆಕಂಡು ಭಾನುವಾರದವರೆಗೂ ಮೂರು ದಿನಗಳೂ ಸಹ ಎರಡು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಮೊದಲ ದಿನ 2.34 ಕೋಟಿ ಗಳಿಸಿದ್ದ ವಾಲ್ತೇರು ವೀರಯ್ಯ ಎರಡನೇ ದಿನ 2.38 ಕೋಟಿ ಹಾಗೂ ಮೂರನೇ ದಿನ 2.59 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಮೊದಲ ವೀಕೆಂಡ್‌ಗೆ ವಾಲ್ತೇರು ವೀರಯ್ಯ ಮೂರು ದಿನಗಳಲ್ಲಿ 7.3 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.

ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕ್ಲಬ್ ಸೇರಿದ ಮೂರು ಚಿತ್ರಗಳು
ಇನ್ನು ಈ ನಾಲ್ಕು ಚಿತ್ರಗಳ ಪೈಕಿ ಮೊದಲ ವಾರಾಂತ್ಯಕ್ಕೆ ವಿಜಯ್ ನಟನೆಯ ವಾರಿಸು 125 ಕೋಟಿ , ವಾಲ್ತೇರು ವೀರಯ್ಯ 108 ಕೋಟಿ ಹಾಗೂ ವೀರಸಿಂಹ ರೆಡ್ಡಿ 104 ಕೋಟಿ ಗಳಿಸುವ ಮೂಲಕ ನೂರು ಕೋಟಿ ಕ್ಲಬ್‌ಗೆ ಕಾಲಿಟ್ಟಿವೆ. ಆದರೆ ಅಜಿತ್ ನಟನೆಯ ತುನಿವು ಚಿತ್ರ ಮೊದಲ ವಾರಾಂತ್ಯಕ್ಕೆ 97 ಕೋಟಿಗೆ ತೃಪ್ತಿಪಟ್ಟುಕೊಂಡಿದೆ.