For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಹೊಸ ಸಿನಿಮಾಗೆ ನಾಯಕಿಯಾದ ಬಾಲಿವುಡ್ ಸ್ಟಾರ್ ನಟಿ

  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸರಿಲೇರು ನೀಕೆವ್ವರು ಸಿನಿಮಾ ನಂತರ ಮಹೇಶ್ ಬಾಬು ಮುಂದಿನ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಿಲ್ಲ. ಆದರೆ ಮಹೇಶ್ ಬಾಬು ಗೀತಾ ಗೋವಿಂದಂ ಖ್ಯಾತಿಯ ನಿರ್ದೇಶಕ ಪರಶುರಾಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ನಮ್ಮ ಮಕ್ಕಳಿಗಾಗಿ ಕೊರೊನ ವಿರುದ್ಧ ಹೊರಡೋಣ ಅಂತಾರೆ ನಿರ್ದೇಶಕ ಮಹೇಶ್ | Mahesh | Beatcorona | Awareness

  ಈಗಾಗಲೆ ಮಹೇಶ್ ಬಾಬು ಮತ್ತು ನಿರ್ದೇಶಕ ಪರಶುರಾಮ್ ಕಾಂಬಿನೇಶನ್ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದೆಯಂತೆ. ಆಗಲೆ ಸಿನಿಮಾದ ಕಥೆ ಕೂಡ ಲೀಕ್ ಆಗಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಇದರ ನಡುವೆ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಹೌದು, ಮಹೇಶ್ ಬಾಬುಗೆ ನಾಯಕಿಯಾಗಿ ಬಾಲಿವುಡ್ ಸ್ಟಾರ್ ನಟಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಮುಂದೆ ಓದಿ..

  ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾದ ಕಥೆ ಲೀಕ್ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾದ ಕಥೆ ಲೀಕ್

  ಮಹೇಶ್ ಬಾಬುಗೆ ನಾಯಕಿಯಾದ ಶ್ರದ್ಧಾ ಕಪೂರ್

  ಮಹೇಶ್ ಬಾಬುಗೆ ನಾಯಕಿಯಾದ ಶ್ರದ್ಧಾ ಕಪೂರ್

  ಮಹೇಶ್ ಬಾಬು ಮತ್ತು ಪರಶುರಾಮ್ ಸಿನಿಮಾಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಆದರೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಸದ್ಯ ಕೇಳಿ ಬರುತ್ತಿರುವ ಸುದ್ದಿ ಪ್ರಕಾರ ಮಹೇಶ್ ಬಾಬು ಜೊತೆ ಬಾಲಿವುಡ್ ಸುಂದರಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

  ಎರಡನೆ ಬಾರಿ ಟಾಲಿವುಡ್ ನಲ್ಲಿ ಶ್ರದ್ಧಾ

  ಎರಡನೆ ಬಾರಿ ಟಾಲಿವುಡ್ ನಲ್ಲಿ ಶ್ರದ್ಧಾ

  ಶ್ರದ್ಧಾ ಕಪೂರ್ ಈಗಾಗಲೆ ಟಾಲಿವುಡ್ ಸಿನಿಮಾದಲ್ಲಿ ಮಿಂಚಿದ್ದಾರೆ. ನಟ ಪ್ರಭಾಸ್ ಜೊತೆ ಸಾಹೋ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಮತ್ತೆ ಮಹೇಶ್ ಬಾಬು ಸಿನಿಮಾಗೆ ಆಯ್ಕೆಯಾದರೆ ಶ್ರದ್ಧಾ ಎರಡನೆ ಬಾರಿಗೆ ಟಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಕೀರ್ತಿ ಸುರೇಶ್ ಬದಲಿಗೆ ಶ್ರದ್ಧಾ

  ಕೀರ್ತಿ ಸುರೇಶ್ ಬದಲಿಗೆ ಶ್ರದ್ಧಾ

  ಅಂದ್ಹಾಗೆ ಚಿತ್ರತಂಡ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡುವ ಮೊದಲು ಕೀರ್ತಿ ಸುರೇಶ್ ಗೆ ಆಫರ್ ಮಾಡಲಾಗಿತ್ತಂತೆ. ಆದರೆ ಕೀರ್ತಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಡೇಟ್ ಹೊಂದಾಣಿಕೆಯ ಸಮಸ್ಯೆಯಿಂದ ಮಹೇಶ್ ಬಾಬು ಸಿನಿಮಾ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೀರ್ತಿ ಸುರೇಶ್ ಮತ್ತು ಮಹೇಶ್ ಬಾಬು ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೀಗ ಕೀರ್ತಿ ನಿರಾಕರಿಸಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

  ರಾಜಮೌಳಿ ಸಿನಿಮಾದಲ್ಲಿ ಮಹೇಶ್ ಬಾಬು

  ರಾಜಮೌಳಿ ಸಿನಿಮಾದಲ್ಲಿ ಮಹೇಶ್ ಬಾಬು

  ಖ್ಯಾತ ನಿರ್ದೇಶಕ ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ನಂತರ ರಾಜಮೌಳಿ, ಪ್ರಿನ್ಸ್ ಮಹೇಶ್ ಜೊತೆ ಸಿನಿಮಾ ಮಾಡಲಿದ್ದಾರೆ. ಪರಶುರಾಮ್ ಜೊತೆ ಇನ್ನೂ ಹೆಸರಿಡದ ಸಿನಿಮಾ ಮುಗಿದ ಮೇಲೆ ರಾಜಮೌಳಿ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.

  English summary
  Bollywood Actress Shraddha Kapoor female lead opposite Actor Mahesh Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X