For Quick Alerts
  ALLOW NOTIFICATIONS  
  For Daily Alerts

  ಗಂಟೆಗೆ 1 ಲಕ್ಷ ರೂ ಕೊಡಿ: ಪ್ರಮುಖ ಚಿತ್ರದಲ್ಲಿ ನಟಿಸಲು ಶ್ರುತಿ ಹಾಸನ್ ಭಾರಿ ಡಿಮ್ಯಾಂಡ್

  By Avani Malnad
  |

  ನಟ ಕಮಲ ಹಾಸನ್ ಮಗಳು ಶ್ರುತಿ ಹಾಸನ್, ದಕ್ಷಿಣ ಭಾರತವಲ್ಲದೆ ಬಾಲಿವುಡ್‌ನಲ್ಲಿಯೂ ಹೆಸರು ಮಾಡಿದ್ದಾರೆ. ಹಾಗೆಯೇ ಚಿತ್ರರಂಗದಲ್ಲಿ ಹೆಸರು ಬರುತ್ತಿದ್ದಂತೆಯೇ ಭಾರಿ ಪ್ರಮಾಣದಲ್ಲಿ ಸಂಭಾವನೆ ಏರಿಸಿಕೊಂಡಿದ್ದು ಈ ಹಿಂದೆ ಚರ್ಚೆಯಾಗಿತ್ತು. ಆದರೆ ಲಾಕ್ ಡೌನ್ ಸಮಯದಲ್ಲಿ ಖರ್ಚಿಗೂ ಹಣವಿಲ್ಲದ ಪರಿಸ್ಥಿತಿ ಉಂಟಾಗಿದೆ. ಮಾಡಿದ ಸಾಲ ತೀರಿಸಬೇಕಾಗಿದೆ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು.

  ಶ್ರುತಿ ಹಾಸನ್ ಬೇಡಿಕೆ ಕೇಳಿ ಬೆಚ್ಚಿಬಿದ್ದ ನಿರ್ಮಾಪಕ | Shruthi Hassan

  ಆದರೆ, ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿರುವ ಶ್ರುತಿ ಹಾಸನ್ ಭಾರಿ ಮೊತ್ತದ ಸಂಭಾವನೆಯನ್ನೇ ಇರಿಸಿದ್ದಾರಂತೆ. ಬಾಲಿವುಡ್‌ನ ಹಿಟ್ ಚಿತ್ರ 'ಪಿಂಕ್' ತೆಲುಗು ಅವತರಣಿಕೆಯಾಗಿರುವ 'ವಕೀಲ್ ಸಾಬ್' ಚಿತ್ರವನ್ನು ವೇಣು ಶ್ರೀರಾಮ್ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಚಿಕ್ಕದಾದರೂ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಬೇಕಿದೆ. ಮುಂದೆ ಓದಿ...

  70 ಲಕ್ಷ ರೂ ಬೇಡಿಕೆ?

  70 ಲಕ್ಷ ರೂ ಬೇಡಿಕೆ?

  ಆದರೆ, ಶ್ರುತಿ ಇರಿಸಿರುವ ಸಂಭಾವನೆಯ ಬೇಡಿಕೆ ನಿರ್ಮಾಪಕರ ತಲೆ ಗಿರ ಗಿರ ಎನ್ನುವಂತೆ ಮಾಡಿದೆ. ಒಂದು ಗಂಟೆಯ ಶೂಟಿಂಗ್‌ಗೆ ಒಂದು ಲಕ್ಷ ರೂ ನೀಡುವಂತೆ ಶ್ರುತಿ ಡಿಮ್ಯಾಂಡ್ ಇರಿಸಿದ್ದಾರಂತೆ. ಸುಮಾರು ಏಳು ದಿನಗಳ ಶೂಟಿಂಗ್‌ಗಾಗಿ ಅವರು 70 ಲಕ್ಷ ರೂ ನೀಡುವಂತೆ ಕೇಳಿದ್ದಾರೆ ಎಂದು ವರದಿಯಾಗಿದೆ.

  ಸಂಜಯ್ ದತ್ ಎದುರು ನಿಂತಾಗ ಗಡಗಡ ನಡುಗಿದ್ದರಂತೆ ಶ್ರುತಿ ಹಾಸನ್ಸಂಜಯ್ ದತ್ ಎದುರು ನಿಂತಾಗ ಗಡಗಡ ನಡುಗಿದ್ದರಂತೆ ಶ್ರುತಿ ಹಾಸನ್

  ಸ್ವಲ್ಪ ಚಿತ್ರೀಕರಣ ಬಾಕಿ

  ಸ್ವಲ್ಪ ಚಿತ್ರೀಕರಣ ಬಾಕಿ

  ಪವನ್ ಕಲ್ಯಾಣ್ ಮತ್ತು ಪತ್ನಿಯ ಪಾತ್ರ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುವ ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿ ಉಳಿದ ಭಾಗಗಳ ಚಿತ್ರೀಕರಣ ಮುಕ್ತಾಯವಾಗಿದೆ. ಹಿಂದಿಯಲ್ಲಿ ವಿದ್ಯಾ ಬಾಲನ್ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಶ್ರುತಿ ನಿಭಾಯಿಸುತ್ತಿದ್ದಾರೆ.

  ಹತ್ತು ಗಂಟೆ ಚಿತ್ರೀಕರಣ

  ಹತ್ತು ಗಂಟೆ ಚಿತ್ರೀಕರಣ

  ಈ ಪಾತ್ರಕ್ಕಾಗಿ ಶ್ರುತಿ ಕೇವಲ ಹತ್ತು ಗಂಟೆಗಳಷ್ಟು ಸಮಯ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದೆ. ಶ್ರುತಿ ಇರಿಸಿರುವ ಸಂಭಾವನೆಯ ಬೇಡಿಕೆ ಕಂಡು ನಿರ್ಮಾಪಕರು ಅವರನ್ನು ಪಾತ್ರಕ್ಕೆ ಬಳಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಾವಣ್ಯ ತ್ರಿಪಾಠಿ, ಇಲಿಯಾನಾ ಡಿ ಕ್ರೂಜ್ ಮತ್ತು ಪೂಜಾ ಹೆಗ್ಡೆ ಅವರ ಹೆಸರುಗಳನ್ನು ಆರಂಭದಲ್ಲಿ ಪರಿಗಣಿಸಿದ್ದ ಚಿತ್ರತಂಡ ಬಳಿಕ ಶ್ರುತಿ ಹಾಸನ್ ಅವರನ್ನು ಆಯ್ಕೆ ಮಾಡಿತ್ತು. ಈಗ ಮತ್ತೆ ನಿರ್ಧಾರ ಬದಲಿಸುವ ಸಾಧ್ಯತೆ ಇದೆ.

  ಪ್ಲಾಸ್ಟಿಕ್ ಸರ್ಜರಿ ನಂತರ ಶ್ರುತಿ ಹಾಸನ್ ಮುಖ ಹೀಗಾಗಿದೆ ನೋಡಿಪ್ಲಾಸ್ಟಿಕ್ ಸರ್ಜರಿ ನಂತರ ಶ್ರುತಿ ಹಾಸನ್ ಮುಖ ಹೀಗಾಗಿದೆ ನೋಡಿ

  ವಕೀಲನ ಪಾತ್ರದಲ್ಲಿ ಪವನ್ ಕಲ್ಯಾಣ್

  ವಕೀಲನ ಪಾತ್ರದಲ್ಲಿ ಪವನ್ ಕಲ್ಯಾಣ್

  ಬೋನಿ ಕಪೂರ್ ಮತ್ತು ದಿಲ್ ರಾಜ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಪವನ್ ಕಲ್ಯಾಣ್ ವಕೀಲನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ರೈ, ಅಂಜಲಿ, ನಿವೇತಾ ಥಾಮಸ್ ಮತ್ತು ಅನನ್ಯಾ ನಾಗಲ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ ಮುಂದಕ್ಕೆ ಹೋಗಿದೆ. ಉನ್ನತ ವರ್ಗದ ಕುಟುಂಬದ ಮೂವರು ಸ್ನೇಹಿತೆಯರು ಮೂವರು ಪುರುಷರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಕಥೆಯನ್ನು ಇದು ಒಳಗೊಂಡಿದೆ.

  ಮದುವೆಗೂ ಮುನ್ನ ಮುರಿದು ಬಿತ್ತು ಕಮಲ್ ಹಾಸನ್ ಪುತ್ರಿಯ ಪ್ರೀತಿಮದುವೆಗೂ ಮುನ್ನ ಮುರಿದು ಬಿತ್ತು ಕಮಲ್ ಹಾಸನ್ ಪುತ್ರಿಯ ಪ್ರೀತಿ

  English summary
  Reports says Shruti Haasan is demanding Rs 1 lakh per 1 hour of shooting for Pawan Kalyan starrer Telugu movie Vakeel Saab.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X