Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಯನತಾರಾ ಡ್ರೆಸ್ ಬಗ್ಗೆ ಅಶ್ಲೀಲ ಕಾಮೆಂಟ್: "ನೀವು ತಾಯಿ ಎದೆ ಹಾಲು ಕುಡಿಲಿಲ್ವಾ?" ಎಂದು ಗಾಯಕಿ ಗರಂ
ಸೋಶಿಯಲ್ ಮೀಡಿಯಾ ಇರೋದೇ ಟ್ರೋಲ್ ಮಾಡಿವುದಕ್ಕೆ ಎನ್ನುವಂತಾಗಿಬಿಟ್ಟಿದೆ. ಯಾರೇ ನಿಂತ್ರು ಕುಂತ್ರು ಅದಕ್ಕೆ ಏನೇನೋ ಕಾಮೆಂಟ್‌ಗಳು ಬರುತ್ತವೆ. ಕೆಲವರಂತೂ ಅಶ್ಲೀಲ ಪದಗಳಿಂದ ಟ್ರೋಲ್ ಮಾಡ್ತಾರೆ. ಇತ್ತೀಚೆಗೆ ನಟಿ ನಯನತಾರಾ ತೊಟ್ಟಿದ್ದ ಡ್ರೆಸ್ ಬಗ್ಗೆ ಇದೇ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಗಾಯಕಿ ಚಿನ್ಮಯಿ ಶ್ರೀಪಾದ ಚಾಟಿ ಬೀಸಿದ್ದಾರೆ.
ಮದುವೆ ನಂತರ ಕೂಡ ನಯನತಾರಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಘ್ನೇಶ್ ಶಿವನ್ - ನಯನ್ ದಂಪತಿ ಸಾರೋಗಸಿ ಪದ್ಧತಿಯಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದರು. ಮಕ್ಕಳ ಲಾಲಾನೆ ಪಾಲನೆ ಜೊತೆ ಜೊತೆಗೆ ಇಬ್ಬರು ತಮ್ಮ ತಮ್ಮ ಸಿನಿಮಾ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಾಣವಾದ 'ಕನೆಕ್ಟ್' ಸಿನಿಮಾ ಈ ವಾರ ರಿಲೀಸ್ ಆಗಿತ್ತು. ಚಿತ್ರಕ್ಕೆ ಅಷ್ಟಾಗಿ ರೆಸ್ಪಾನ್ಸ್ ಸಿಗ್ತಿಲ್ಲ. ನಯನ್ ಕೆಲ ವರ್ಷಗಳಿಂದ ಸಿನಿಮಾ ಪ್ರಚಾರಕ್ಕೆ ಬರುವುದನ್ನು ನಿಲ್ಲಿಸಿದ್ದರು. ಆದರೆ 'ಕನೆಕ್ಟ್' ಚಿತ್ರಕ್ಕಾಗಿ ಆ ನಿಯಮ ಮೀರಿ ಚಿತ್ರದ ಪ್ರಚಾರ ಮಾಡ್ತಿದ್ದಾರೆ.
ಒಟ್ಟಿಗೆ
ಕಾಣಿಸಿಕೊಂಡ
ಮಾಜಿ
ವೈರಿಗಳು,
ಒಂದಾಯ್ತ
ಮೆಗಾ-ನಂದಮೂರಿ
ಫ್ಯಾಮಿಲಿ
ಗುರುವಾರ ಸಂಜೆಯೇ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಏರ್ಪಡಿಸಲಾಗಿತ್ತು. ಈ ವೇಳೆ ಪತಿ ವಿಘ್ನೇಶ್ ಜೊತೆ ನಯನತಾರಾ ಕೂಡ ಭಾಗಿ ಆಗಿದ್ದರು. ಈ ವೇಳೆ ಟೈಟ್ ಟೀ-ಶರ್ಟ್‌ನಲ್ಲಿ ಲೇಡಿ ಸೂಪರ್ ಸ್ಟಾರ್ ದರ್ಶನ ಕೊಟ್ಟಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋ ಸಖತ್ ವೈರಲ್ ಆಗ್ತಿದೆ. ಆಕೆಯ ಲುಕ್ಸ್ ಬಗ್ಗೆ ಕೆಲವರು ಅಶ್ಲೀಲ ಪದಗಳಿಂದ ಕಾಮೆಂಟ್ ಮಾಡ್ತಿದ್ದಾರೆ.

ಟ್ರೋಲಿಗರ ವಿರುದ್ಧ ಚಿನ್ಮಯಿ ಗರಂ
ಚೆನ್ನೈನಲ್ಲಿ ತಮ್ಮದೇ 'ಕನೆಕ್ಟ್' ಚಿತ್ರದ ಸ್ಪೆಷಲ್ ಪ್ರೀಮಿಯರ್ ಶೋ ಆಯೋಜಿಸಿದ್ದರು. ಮದುವೆ ನಂತರ ವಿಘ್ನೇಶ್- ನಯನ್ ಹೀಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ನಯನ್ ಬಗ್ಗೆ ಹೀಗೆ ಕೆಟ್ಟದಾಗಿ ಟ್ರೋಲ್ ಮಾಡಿದ್ದನ್ನು ನೋಡಿ ತೆಲುಗು ಗಾಯಕಿ ಚಿನ್ಮಯಿ ಶ್ರೀಪಾದ ಗರಂ ಆಗಿದ್ದಾರೆ. ಈ ರೀತಿ ಕಾಮೆಂಟ್ ಮಾಡುತ್ತಿರುವವರು ತಾಯಿ ಎದೆ ಹಾಲು ಕುಡಿದು ಬೆಳೆದ್ರಾ? ಇಲ್ವಾ? ಎಂದು ಚಿನ್ಮಯಿ ಪ್ರಶ್ನಿಸಿದ್ದಾರೆ.

ಇಂತಹವರಿಗೆ ಹೆಣ್ಣಮಕ್ಕಳು ಇದ್ದರೆ ಹೇಗೆ?
"ಇಂತಹ ಗಂಡಸಿಗೆ ಹೆಣ್ಣು ಮಕ್ಕಳು ಇದ್ದರೆ ಪರಿಸ್ಥಿತಿ ಏನು? ಇಂತಹವರ ಕಾರಣಕ್ಕೆ ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಗಂಡ, ಗಂಡು ಮಕ್ಕಳ ಎದುರು ದುಪ್ಪಟ್ಟಾ ಹಾಕಿಕೊಳ್ಳುವಂತೆ ಹೇಳಿದರೂ ಅಚ್ಚರಿಪಡಬೇಕಿಲ್ಲ. ಇಂತಹ ಗಂಡಸರೆಲ್ಲಾ ಮಗಳನ್ನು, ಅಕ್ಕ, ತಂಗಿಯರನ್ನು ಇದೇ ರೀತಿಯಲ್ಲಿ ನೋಡುತ್ತಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಕೆಟ್ಟ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್ ತೆಗೆದು ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ.

ನಿರಾಸೆ ಮೂಡಿಸಿದ 'ಕನೆಕ್ಟ್'
ಇನ್ನು ಅಶ್ವಿನ್ ಶರವಣನ್ ನಿರ್ದೇಶನದ ಹಾರರ್ ಥ್ರಿಲ್ಲರ್ 'ಕನೆಕ್ಟ್' ಭಾರೀ ನಿರೀಕ್ಷೆ ಮೂಡಿಸಿತ್ತು. ಲಾಕ್‌ಡೌನ್ ಸಮಯದಲ್ಲಿ ಒಬ್ಬ ಡಾಕ್ಟರ್ ಮನೆಯಲ್ಲಿ ಏನೆಲ್ಲಾ ಆಯಿತು ಎನ್ನುವ ಒಂದು ಕಾಲ್ಪನಿಕ ಕಥೆಯನ್ನು ಹೇಳಲಾಗಿದೆ. ನಯನತಾರಾ, ವಿನಯ್ ರಾಯ್, ಸತ್ಯರಾಜ್, ಅನುಪಮ್ ಖೇರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ.

ಶೀಘ್ರದಲ್ಲೇ ಓಟಿಟಿಗೆ 'ಕನೆಕ್ಟ್'
ಹಾರರ್ ಥ್ರಿಲ್ಲರ್ 'ಕನೆಕ್ಟ್' ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್ ಕೊಡುವಲ್ಲಿ ಸೋತಿದೆ. ಇಂಟರ್‌ವಲ್ ಇಲ್ಲದೇ ಒಂದು ಗಂಟೆ 38 ನಿಮಿಷದ ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗಲಿಲ್ಲ. ಕೆಲವರು ಇದು ಓಟಿಟಿಗೆ ಸೂಕ್ತವಾದ ಸಿನಿಮಾ. ಥಿಯೇಟರ್‌ಗೆ ಹೋಗಿ ನೋಡುವಂತದ್ದು ಏನು ಇಲ್ಲ ಎನ್ನುತ್ತಿದ್ದಾರೆ. ಈಗಾಗಲೇ ನೆಟ್‌ಫ್ಲಿಕ್ಸ್‌ಗೆ ಸಿನಿಮಾ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಓಟಿಟಿಯಲ್ಲಿ ಸಿನಿಮಾ ವೀಕ್ಷಕರನ್ನು ಹೆಸರಿಸಲು ಬರ್ತಿದೆ.