For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಹೆಸರಲ್ಲಿ 'ಕಾಂತಾರ' ಬಗ್ಗೆ ನಕಲಿ ಟ್ವೀಟ್: ಇನ್ನೂ ಸಿನಿಮಾ ನೋಡಿಲ್ವಾ 'ಪುಷ್ಪ'?

  |

  ದೀಪಾವಳಿ ಸಂಭ್ರಮದಲ್ಲಿ ಕನ್ನಡ ಸಿನಿಮಾ ಬಾಕ್ಸಾಫೀಸ್ ದೋಚುತ್ತಿದೆ. ನಾಲ್ಕು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿರೋ ಸಿನಿಮಾದ ಅಬ್ಬರ ಸಿನಿಮಾ ಮಂದಿನೇ ಕಂಗಾಲಾಗಿದ್ದಾರೆ. ಹೌದು, ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ವಿಶ್ವದಾದ್ಯಂತ ಸಿನಿಪ್ರಿಯರನ್ನು ಇನ್ನೂ ರಂಜಿಸುತ್ತಲೇ ಇದೆ.

  ಹಾಗಂತ ಕೇವಲ ಪ್ರೇಕ್ಷಕರಷ್ಟೇ ಅಲ್ಲ. ಸಿನಿಮಾ ಮಂದಿನೂ ಥ್ರಿಲ್ ಆಗಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೆಲೆಬ್ರೆಟಿಗಳು 'ಕಾಂತಾರ' ಸಿನಿಮಾ ನೋಡಿ ಮಂತ್ರಮುಗ್ಧರಾಗಿದ್ದಾರೆ. ಕನ್ನಡ ಸಿನಿಮಾ ಮೆಚ್ಚು ಕೊಂಡಾಡುತ್ತಿದ್ದಾರೆ. ಈ ಮಧ್ಯೆ ಅಲ್ಲು ಅರ್ಜುನ್ ಟ್ವೀಟ್ ಒಂದು ಬೆಳಗ್ಗೆಯಿಂದ ಬೇಜಾನ್ ಸದ್ದು ಮಾಡುತ್ತಿದೆ.

  ಕರ್ನಾಟಕದಲ್ಲಿ 'ಕೆಜಿಎಫ್ 2' ಮೀರಿಸಿದ 'ಕಾಂತಾರ': ಸಿನಿಮಾ ನೋಡಿದವರ ಸಂಖ್ಯೆ ಎಷ್ಟು?ಕರ್ನಾಟಕದಲ್ಲಿ 'ಕೆಜಿಎಫ್ 2' ಮೀರಿಸಿದ 'ಕಾಂತಾರ': ಸಿನಿಮಾ ನೋಡಿದವರ ಸಂಖ್ಯೆ ಎಷ್ಟು?

  'ಕಾಂತಾರ' ನೋಡಿ ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನೋಡಿ ತಲೆ ಕೆಡಿಸಿಕೊಂಡಿದ್ದು, ಸಿನಿಮಾಗೆ ಫ್ಯಾನ್ ಆಗಿದ್ದಾರೆ. 'ಕಾಂತಾರ' ಸಿನಿಮಾ ನೋಡಿದ ಬಳಿಕ ಪುಷ್ಪ ಅಲಿಯಾಸ್ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ ಅನ್ನೋ ಸುದ್ದಿನೂ ಹರಿದಾಡಿತ್ತು. ಆದರೆ, ಅದು ಅಲ್ಲು ಅರ್ಜುನ್ ಅವರ ನಕಲಿ ಟ್ವಿಟರ್ ಅಕೌಂಟ್ ಅನ್ನೋದು ಗೊತ್ತಾಗಿದೆ. ಅದೇನೆ ಇದ್ದೂ ಅಲ್ಲು ಅರ್ಜುನ್ ಇನ್ನೂ 'ಕಾಂತಾರ' ನೋಡಿಲ್ವಾ? ಅನ್ನೋ ಪ್ರಶ್ನೆಯಂತು ಹುಟ್ಟಿಕೊಂಡಿದೆ.

   ಅಲ್ಲು ಅರ್ಜುನ್ ನಕಲಿ ಖಾತೆಯಲ್ಲೇನಿದೆ?

  ಅಲ್ಲು ಅರ್ಜುನ್ ನಕಲಿ ಖಾತೆಯಲ್ಲೇನಿದೆ?

  ಯಾರೋ ಕಿಡಿಗೇಡಿಗಳು ಅಲ್ಲು ಅರ್ಜುನ್ ನಕಲಿ ಖಾತೆಯನ್ನು ಸೃಷ್ಟಿಸಿದ್ದಾರೆ. ಬಳಿಕ ಆ ಖಾತೆಯಿಂದಲೇ 'ಕಾಂತಾರ' ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟ್‌ ಅನ್ನು ಇಟ್ಟುಕೊಂಡು ನ್ಯಾಷನಲ್ ಮೀಡಿಯಾಗಳು ಸುದ್ದಿಯನ್ನು ಮಾಡಿದ್ದವು. ಬಳಿಕ ಇದು ಅಲ್ಲು ಅರ್ಜುನ್ ಟ್ವಿಟರ್ ಅಕೌಂಟ್ ಅಲ್ಲ. ಅದು ನಕಲಿ ಖಾತೆ ಎಂದು ಗೊತ್ತಾಗಿದೆ. " ಕಾಂತಾರ ಸಿನಿಮಾ ಜಗತ್ತಿನ ಮಿಂಚಿನ ಅನುಭವ. ಯಾರೂ ಇದನ್ನು ಮಿಸ್ ಮಾಡಿಕೊಳ್ಳಬಾರದು. ಮನೆಸೆಳೆಯುವ ಹಿನ್ನೆಲೆ ಸಂಗೀತ, ಅದ್ಭುತ ಛಾಯಾಗ್ರಹಣ, ಅತ್ಯದ್ಭುತ ನಿರ್ದೇಶನ, ನಿರರ್ಗಳವಾದ ನಟನೆ. ಕ್ಲೈಮ್ಯಾಕ್ಸ್ ಮೈರೋಮಾಂಚನ ಗೊಳಿಸಿತ್ತು. ಕಣ್ಣುಗಳು ಒದ್ದೆಯಾದವು." ಎಂದು ಬರೆಯಲಾಗಿತ್ತು.

  ಭಾರತ Vs ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆನೂ ಕುಗ್ಗಿಲ್ಲ 'ಕಾಂತಾರ': ಬಾಕ್ಸಾಫೀಸ್‌ನಲ್ಲಿ ಹವಾ ಹೇಗಿದೆ?ಭಾರತ Vs ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆನೂ ಕುಗ್ಗಿಲ್ಲ 'ಕಾಂತಾರ': ಬಾಕ್ಸಾಫೀಸ್‌ನಲ್ಲಿ ಹವಾ ಹೇಗಿದೆ?

   ಅಲ್ಲು ಅರ್ಜುನ್ ಇನ್ನೂ ಸಿನಿಮಾ ನೋಡಿಲ್ವಾ?

  ಅಲ್ಲು ಅರ್ಜುನ್ ಇನ್ನೂ ಸಿನಿಮಾ ನೋಡಿಲ್ವಾ?

  ಅಲ್ಲು ಅರ್ಜುನ್ ನಕಲಿ ಖಾತೆ ಸೃಷ್ಟಿಸಿದ ಮಾಡಿದ ಟ್ವೀಟ್ ಒಂದು ಕಡೆ ವೈರಲ್ ಆಗುತ್ತಿದೆ. ಅದೇ ಇನ್ನೊಂದು ಕಡೆ ಅಲ್ಲು ಅರ್ಜುನ್ ಬಗ್ಗೆನೂ ಚರ್ಚೆಯಾಗುತ್ತಿದೆ. ವಿಶ್ವದೆಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾವನ್ನು ಅಲ್ಲು ಅರ್ಜುನ್ ನೋಡಿಲ್ವಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಐಕಾನ್ ಸ್ಟಾರ್ ಇಂತಹ ಅದ್ಭುತ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಯಾಕಿನ್ನುಹಂಚಿಕೊಂಡಿಲ್ಲ? ಅನ್ನೋ ಪ್ರಶ್ನೆಗಳೂ ಕೂಡ ಎದ್ದೇಳುತ್ತಿವೆ.

   ಅಲ್ಲು ಅರ್ಜುನ್ ಯಾಕೆ ಸಿನಿಮಾ ನೋಡ್ಬೇಕು?

  ಅಲ್ಲು ಅರ್ಜುನ್ ಯಾಕೆ ಸಿನಿಮಾ ನೋಡ್ಬೇಕು?

  'ಕಾಂತಾರ' ಸಿನಿಮಾ ತೆಲುಗಿನಲ್ಲಿ ಅದ್ಭುತ ಬ್ಯುಸಿನೆಸ್ ಮಾಡುತ್ತಿದೆ. ತೆಲುಗು ಮಂದಿ ಕೂಡ ಈ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 'ಕಾಂತಾರ' ತೆಲುಗು ವರ್ಷನ್ ಅನ್ನು ಆಂಧ್ರ-ತೆಲಂಗಾಣದಲ್ಲಿ ವಿತರಣೆ ಮಾಡಿದ್ದು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್. ಈ ಕಾರಣಕ್ಕಾದರೂ ಸಿನಿಮಾ ನೋಡಬೇಕಿತ್ತು. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಿತ್ತು. ಆದರೆ, ಸಿನಿಮಾ ನೋಡಿದ್ದಾರಾ ಇಲ್ವಾ? ನೋಡಿಯೂ ಸುಮ್ಮನಾಗಿದ್ದಾರಾ? ಅನ್ನೋದು ಅಭಿಮಾನಿಗಳ ಗೊಂದಲಕ್ಕೆ ಪ್ರಮುಖ ಕಾರಣ.

   'ಕಾಂತಾರ' ತೆಲುಗು ಕಲೆಕ್ಷನ್ ಎಷ್ಟು?

  'ಕಾಂತಾರ' ತೆಲುಗು ಕಲೆಕ್ಷನ್ ಎಷ್ಟು?

  'ಕಾಂತಾರ' ತೆಲುಗು ವರ್ಷನ್ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು ಮೂಲಗಳ ಪ್ರಕಾರ, ಕಳೆದ ದಿನಗಳಲ್ಲಿ ಈ ಸಿನಿಮಾ ಸುಮಾರು 27.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ನಿರ್ಮಾಪಕರಿಗೆ ಇದೂವರೆಗೂ 15.13 ಕೋಟಿ ರೂಪಾಯಿ ಶೇರ್ ಬಂದಿದೆ ಎಂದು ವರದಿಯಾಗಿದೆ. ಇನ್ನೂ ಹಬ್ಬದ ಮೂಡಿನಲ್ಲೇ ಇರೋದ್ರಿಂದ ಮತ್ತಷ್ಟು ಹೆಚ್ಚು ಗಳಿಕೆ ಕಾಣುವ ನಿರೀಕ್ಷೆಯಿದೆ. ಈ ವಾರ ಮುಗಿಯುವುದರೊಳಗೆ 'ಕಾಂತಾರ' ತೆಲುಗು ರಾಜ್ಯಗಳಲ್ಲಿ 30 ಕೋಟಿ ಗಡಿ ದಾಟಬಹುದು.

  English summary
  Someone Created Allu Arjun Fake Twitter ID To Wish Kantara Movie, Know More.
  Tuesday, October 25, 2022, 14:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X