For Quick Alerts
  ALLOW NOTIFICATIONS  
  For Daily Alerts

  ಅಮೃತಾ ನೋವಿಗೆ ಮಿಡಿದ ಶ್ರೀ ರೆಡ್ಡಿ; ಸ್ಟೇಟಸ್ ವೈರಲ್

  |

  ಸದಾ ವಿವಾದವೆಬ್ಬಿಸುವ ತೆಲುಗು ನಟಿ ಶ್ರೀ ರೆಡ್ಡಿ ಅಮೃತಾಗೆ ಆದ ನಷ್ಟಕ್ಕೆ ಮಿಡಿದಿದ್ದಾರೆ. ಫೇಸ್‌ಬುಕ್‌ನಲ್ಲಿ ಅವರು ಹಾಕಿರುವ ಸ್ಟೇಟಸ್ ವೈರಲ್ ಆಗಿದೆ. ಅಮೃತಾ ತಂದೆ ಮಾರುತಿರಾವ್ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.

  ಅದ್ಧೂರಿ ಮದುವೆಯಲ್ಲಿ ನವ ಜೋಡಿಗೆ ಹರಸಿದ ಸುದೀಪ್ | Sudeep | Sriramulu Marriage

  ಹೈದರಾಬಾದ್‌ನ ಅಮೃತಾ ಪ್ರಕರಣದ ದೇಶಾದ್ಯಂತ ಸುದ್ದಿ ಮಾಡಿತ್ತು. ದಲಿತ ಯುವಕ ಪ್ರಣಯ್ ಪೆರುಮಲ್ಲಾರನ್ನು ಅಮೃತಾ ಪ್ರೀತಿಸಿ ವಿವಾಹವಾಗಿದ್ದು. ಆದರೆ, ಅಮೃತಾಳ ತಂದೆ ಮಾರುತಿರಾವ್ ಸುಪಾರಿ ಕೊಟ್ಟು ಪ್ರಣಯ್ ಹತ್ಯೆ ಮಾಡಿಸಿದ್ದರು.

  ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಮೀಟೂ ಖ್ಯಾತಿಯ ತೆಲುಗು ನಟಿ ಶ್ರೀ ರೆಡ್ಡಿ?ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಮೀಟೂ ಖ್ಯಾತಿಯ ತೆಲುಗು ನಟಿ ಶ್ರೀ ರೆಡ್ಡಿ?

  ಮರ್ಯಾದಾ ಹತ್ಯೆ ಪ್ರಕರಣಕ್ಕೆ ಮಾರುತಿರಾವ್ ಆತ್ಮಹತ್ಯೆ ತಿರುವು ನೀಡಿತ್ತು. ಸೋಮವಾರ ಮಾರುತಿರಾವ್ ಅಂತ್ಯಸಂಸ್ಕಾರಕ್ಕೆ ಮಗನ ಜೊತೆ ಅಮೃತಾ ಹೋದಾಗ ಸಂಬಂಧಿಕರು ಅಂತಿಮ ದರ್ಶನಕ್ಕೆ ಅಡ್ಡಿ ಪಡಿಸಿದ್ದರು. ತಂದೆಯ ಮುಖವನ್ನು ನೋಡಲಾಗದೆ ಅಮೃತಾ ವಾಪಸ್ ಆಗಿದ್ದರು.

  ಅಮೃತಾ ತಂದೆ ಮಾರುತಿರಾವ್ ಆತ್ಮಹತ್ಯೆಗೆ ನಟಿ ಶ್ರೀ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಅಂತಿಮ ದರ್ಶನಕ್ಕೆ ಅಮೃತಾಗೆ ಅವಕಾಶ ನೀಡದಿರುವಕ್ಕೆ ಶ್ರೀ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೀ ರೆಡ್ಡಿ ಹಾಕಿರುವ ಫೇಸ್‌ಬುಕ್ ಬುಕ್ ಸ್ಟೇಟಸ್ ವೈರಲ್ ಆಗಿದೆ.

  ನಟಿ ಶ್ರೀ ರೆಡ್ಡಿ ಸ್ಟೇಟಸ್

  ನಟಿ ಶ್ರೀ ರೆಡ್ಡಿ ಸ್ಟೇಟಸ್

  "ಅಮೃತಾ ನಿನ್ನ ನೋವು ನನಗೆ ಅರ್ಥವಾಗುತ್ತದೆ. ನಷ್ಟಕ್ಕಾಗಿ ಕ್ಷಮೆ ಇರಲಿ. ದೇವರು ನಿನಗೆ ಮತ್ತು ನಿನ್ನ ಮಗುವಿಗೆ ಒಳ್ಳೆಯದು ಮಾಡಲಿ" ಎಂದು ನಟಿ ಶ್ರೀ ರೆಡ್ಡಿ ಸ್ಟೇಟಸ್ ಹಾಕಿದ್ದಾರೆ. ಶ್ರೀ ರೆಡ್ಡಿಯ ಹಲವಾರು ಅಭಿಮಾನಿಗಳು ಅಮೃತಾ ನೋವಿಗೆ ಮಿಡಿದಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

  ಆತ್ಮಹತ್ಯೆ ಮಾಡಿಕೊಂಡಿದ್ದರು

  ಆತ್ಮಹತ್ಯೆ ಮಾಡಿಕೊಂಡಿದ್ದರು

  ಅಮೃತಾ ತಂದೆ ಮಾರುತಿರಾವ್ ಹೈದರಾಬಾದ್‌ನ ಖೈರತಾಬಾದ್‌ ಆರ್ಯವೈಶ್ಯ ಭವನದಲ್ಲಿ ಮಾರ್ಚ್ 7ರ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾನುವಾರ ಬೆಳಗ್ಗೆ ಶವ ಪತ್ತೆಯಾಗಿತ್ತು. ಮಾರುತಿರಾವ್ ಬರೆದ ಡೆತ್ ನೋಟ್‌ ಪೊಲೀಸರಿಗೆ ಸಿಕ್ಕಿತ್ತು. "ತಾಯಿಯ ಬಳಿ ಹೋಗುವಂತೆ" ಡೆತ್ ನೋಟ್‌ನಲ್ಲಿ ಮಾರುತಿರಾವ್ ಮಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದರು.

  ತಂದೆಯ ಮುಖ ನೋಡಲು ಬಿಟ್ಟಿಲ್ಲ

  ತಂದೆಯ ಮುಖ ನೋಡಲು ಬಿಟ್ಟಿಲ್ಲ

  ಸೋಮವಾರ ಅಮೃತಾ ತಂದೆ ಮಾರುತಿರಾವ್ ಅಂತ್ಯ ಸಂಸ್ಕಾರ ನಡೆಯಿತು. ಅಮೃತಾ ತಂದೆಯ ಅಂತಿಮ ದರ್ಶನ ಪಡೆಯಲು ಹೋಗಿದ್ದರು. ಆದರೆ, ಸಂಬಂಧಿಕರು ಅಮೃತಾಳನ್ನು ನಿಂದಿಸಿದ್ದರು. ನಿನ್ನಿಂದಲೇ ತಂದೆಗೆ ಇಂತಹ ಸ್ಥಿತಿ ಬಂತು ಎಂದು ಆರೋಪಿಸಿದ್ದರು. ಆದ್ದರಿಂದ, ತಂದೆಯ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದೇ ಅಮೃತಾ ವಾಪಸ್ ಬಂದಿದ್ದರು.

  ತಂದೆ ಮನೆಯಿಂದ ದೂರ

  ತಂದೆ ಮನೆಯಿಂದ ದೂರ

  ಪ್ರಣಯ್ ಪೆರುಮಲ್ಲಾ ಹತ್ಯೆ ಬಳಿಕ ಅಮೃತಾಳನ್ನು ಪ್ರಣಯ್ ತಾಯಿ ನೋಡಿಕೊಳ್ಳುತ್ತಿದ್ದಾರೆ. ತಂದೆಯ ಮನೆಯ ಜೊತೆ ಅವರು ಯಾವುದೇ ಸಂಪರ್ಕ ಹೊಂದಿಲ್ಲ. ಆದರೆ, ತಂದೆಯ ಅಂತ್ಯಕ್ರಿಯೆಗೆ ಅಮೃತಾ ತೆರಳಿದ್ದರು.

  English summary
  In a face book post Telugu film actress Sri Reddy Mallidi expressed condolence for Amrutha father Maruthi Rao suicide. Maruthi Rao father of Amrutha and main accused of the Pranay Perumalla honor killing case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X